ಗೆದ್ದೇ ಗೆಲ್ಲುವೆ ಒಂದು ದಿನ, ಗೆಲ್ಲಲೇಬೇಕು ಒಳ್ಳೆತನ: ಚಂದನ್ ಶೆಟ್ಟಿ

Public TV
2 Min Read

ಬೆಂಗಳೂರು: ಗಾಂಜಾ ವಿವಾದ ಮುಗಿದ ನಂತರ ಚಂದನ್ ಶೆಟ್ಟಿ ಗೆದ್ದೇ ಗೆಲ್ಲುವೆ ಒಂದು ದಿನ. ಗೆಲ್ಲಲೇಬೇಕು ಒಳ್ಳೆತನ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಕಳೆದ ನಾಲ್ಕಾರು ದಿನಗಳಿಂದ ಚಂದನ್ ಶೆಟ್ಟಿ ಗಾಯನದ `ಅಂತ್ಯ’ ಸಿನಿಮಾದ ಗಾಂಜಾ ಕುರಿತಾದ ಹಾಡೊಂದು ಸಾಕಷ್ಟು ವಿವಾದವಾಗಿತ್ತು. ಈ ಸಂಬಂಧ ಚಂದನ್ ಶೆಟ್ಟಿಯವರಿಗೆ ಸಿಸಿಬಿ ಪೊಲೀಸರು ಸಮನ್ಸ್ ಸಹ ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾಗಿದ್ದ ಚಂದನ್, ತಮ್ಮ ಮೇಲಿನ ಆರೋಪಗಳು ಅಸಮಂಜಸ. ನಾನು ಕೇವಲ ಹಾಡನ್ನು ಹಾಡಿದ್ದೇನೆ ಹೊರತು ಸಾಹಿತ್ಯ ಬರೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಚಂದನ್ ಶೆಟ್ಟಿ ಅವರಿಗೆ ನೋಟಿಸ್ ನೀಡಿದ್ದನ್ನು ಅವರ ಅಭಿಮಾನಿಗಳು ವಿರೋಧಿಸಿದ್ದರು. ಅಲ್ಲದೇ ಚಂದನ್ ಶೆಟ್ಟಿ ಈ ಹಾಡು ಹಾಡಿದರಿಂದ ಅವರ ಯಾವ ಅಪರಾಧವೂ ಇಲ್ಲ ಎಂದು ಅಭಿಮಾನಿಗಳು ಚಂದನ್ ಬೆಂಬಲಕ್ಕೆ ನಿಂತಿದ್ದರು. ಸದ್ಯ ಈ ಬೆಂಬಲ ನೋಡಿ ಚಂದನ್ ಶೆಟ್ಟಿ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳ ಬಗ್ಗೆ ಪೋಸ್ಟ್ ಹಾಕಿದ್ದಾರೆ. ಇದನ್ನೂ ಓದಿ: ಖಾಕಿ ವರ್ಸಸ್ ಸ್ಯಾಂಡಲ್‍ವುಡ್: ಪೊಲೀಸರ ವಿರುದ್ಧ ದೂರ ನೀಡಲು ಸಿದ್ಧವಾಯ್ತು ‘ಅಂತ್ಯ’ ಚಿತ್ರ ತಂಡ

ಪೋಸ್ಟ್ ನಲ್ಲಿ ಏನಿದೆ?
ನಿಂದಿಸಿದವರ ನಾಲಿಗೆಯಲ್ಲಿ ನಲಿದಾಡುವಂತೆ ಗೆಲ್ಲಬೇಕು..
ಹೀಯಾಳಿಸಿದವರೇ ಸನ್ಮಾನಿಸುವಂತೆ ಗೆಲ್ಲಬೇಕು..
ದೂರತಳ್ಳಿದವರೇ ಬಾಚಿ ತಬ್ಬಿಕೊಳ್ಳುವಂತೆ ಗೆಲ್ಲಬೇಕು..
ಗೆದ್ದೇ ಗೆಲ್ಲುವೆ ಒಂದು ದಿನ..
ಗೆಲ್ಲಲೇಬೇಕು ಒಳ್ಳೆತನ..
-ಅನಾಮಿಕ

ನನ್ನನು ನಿಜವಾಗಿಯೂ ಪ್ರೀತಿಸುವವರು ಎಷ್ಟು ಮಂದಿ ಇದ್ದಾರೆ ಅಂತ ಈಗ ತಿಳಿಯಿತು. ನಾನು ಈಗ ಮತ್ತಷ್ಟು ಬಲಿಷ್ಟನಾಗಿದ್ದೇನೆ. ಗೆದ್ದೇ ಗೆಲ್ಲುವೆ ಒಂದು ದಿನ. ನನ್ನ ಗುರಿ ಮುಟ್ಟುವೆ ಒಂದು ದಿನ. ನಿಮ್ಮ ಪ್ರೀತಿ ಆಶೀರ್ವಾದ ನನ್ನ ಮೇಲೆ ಸದಾ ಇರಲಿ. ಸತ್ಯ ಮೇವ ಜಯತೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸಿಸಿಬಿ ಪೊಲೀಸರ ಮುಂದೆ ಪ್ರಶ್ನೆಗಳ ಸುರಿಮಳೆಗೈದ ಚಂದನ್ ಶೆಟ್ಟಿ

ಏನಿದು ಪ್ರಕರಣ?
ಮಾದಕ ವಸ್ತುಗಳ ಸೇವನೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಚಂದನ್ ಶೆಟ್ಟಿಗೆ ಬಂಧನ ಭೀತಿ ಎದುರಾಗಿತ್ತು. ಚಂದನ್ ಶೆಟ್ಟಿ ಸಂಗೀತ ಸಂಯೋಜನೆಯ ಅಂತ್ಯ ಸಿನಿಮಾದ ಗಾಂಜಾ ಕಿಕ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿತ್ತು. ಆದರೆ ಗಾಂಜಾ ಕಿಕ್ ಹಾಡಿನಲ್ಲಿ ಮಾದಕ ವಸ್ತುಗಳನ್ನು ಸೇವಿಸುವ ಕುರಿತು ವೈಭವಿಕರಿಸಿ ತೋರಿಸಲಾಗಿದೆ. ಹೀಗಾಗಿ ಖುದ್ದು ಸ್ವಯಂ ದೂರು ದಾಖಲಿಸಿಕೊಂಡಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಚಂದನ್ ಶೆಟ್ಟಿಗೆ ಸಮನ್ಸ್ ಜಾರಿ ಮಾಡಿದ್ದರು. ಇದನ್ನೂ ಓದಿ: ಗಾಂಜಾ ಸಾಂಗ್ ವಿವಾದದಲ್ಲಿ ನನ್ನದೇನು ತಪ್ಪಿಲ್ಲ: ಚಂದನ್ ಶೆಟ್ಟಿ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

ನಿಂದಿಸಿದವರ ನಾಲಿಗೆಯಲ್ಲಿ ನಲಿದಾಡುವಂತೆ ಗೆಲ್ಲಬೇಕು.. ಹೀಯಾಳಿಸಿದವರೇ ಸನ್ಮಾನಿಸುವಂತೆ ಗೆಲ್ಲಬೇಕು.. ದೂರತಳ್ಳಿದವರೇ ಬಾಚಿ ತಬ್ಬಿಕೊಳ್ಳುವಂತೆ ಗೆಲ್ಲಬೇಕು.. ಗೆದ್ದೇ ಗೆಲ್ಲುವೆ ಒಂದು ದಿನ.. ಗೆಲ್ಲಲೇಬೇಕು ಒಳ್ಳೆತನ.. -ಅನಾಮಿಕ ನನ್ನನು ನಿಜವಾಗಿಯೂ ಪ್ರೀತಿಸುವವರು ಎಷ್ಟು ಮಂದಿ ಇದ್ದಾರೆ ಅಂತ ಈಗ ತಿಳಿಇತು..ನಾನು ಈಗ ಮತಷ್ಟು ಬಲಿಷ್ಟನಾಗಿದ್ದೇನೆ..ಗೆದ್ದೇ ಗೆಲ್ಲುವೆ ಒಂದುದಿನ ..ನನ್ನ ಗುರಿ ಮುಟ್ಟುವೆ ಒಂದು ದಿನ..ನಿಮ್ಮ ಪ್ರೀತಿ ಆಶೀರ್ವಾದ ನನ್ನ ಮೇಲೆ ಸದಾ ಇರಲಿ..ಸತ್ಯ ಮೇವ ಜಯತೆ✊????????❤️

A post shared by Chandan Shetty (@chandanshettyofficial) on

Share This Article
Leave a Comment

Leave a Reply

Your email address will not be published. Required fields are marked *