ನಾವು ಇಟಲಿಗೆ ಹೋಗಿಲ್ಲ, ಪ್ಯಾರಿಸ್ ಪ್ರವಾಸ ರದ್ದು ಮಾಡಿದ್ದೇವೆ: ಚಂದನ್

Public TV
3 Min Read

– ನೆದರ್‌ಲ್ಯಾಂಡಿನ ಕಠಿಣ ನಿಯಮ ಇರಲಿಲ್ಲ
– ಬೆಂಗಳೂರಿನಲ್ಲಿ ಕಠಿಣ ನಿಯಮಗಳಿತ್ತು

ಮಂಡ್ಯ: ಬಿಗ್ ಬಾಸ್ ಸೀಸನ್-5 ವಿಜೇತ, ಗಾಯಕ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆ ಮುಗಿಸಿಕೊಂಡು ಹನಿಮೂನ್‍ಗೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಹನಿಮೂನ್‍ಗೆ ಹೋಗಿರುವ ಚಂದನ್ ಹಾಗೂ ನಿವೇದಿತಾ ಅವರ ಆರೋಗ್ಯ ತಪಾಸಣೆ ಮಾಡಬೇಕು ಎಂಬ ಮಾತುಗಳು ಕೇಳಿ ಬಂತು. ಹೀಗಾಗಿ ಚಂದನ್ ಹಾಗೂ ನಿವೇದಿತಾ ನಾವು ಇಟಲಿಗೆ ಹೋಗಿಲ್ಲ, ನಾವು ಆರೋಗ್ಯವಾಗಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಚಂದನ್, ನಮ್ಮ ನೆದರ್‌ಲ್ಯಾಂಡ್ ಪ್ರವಾಸ ತುಂಬಾ ಚೆನ್ನಾಗಿತ್ತು. ಮಾರ್ಚ್ 1ರಂದು ನಾವು ನೆದರ್‌ಲ್ಯಾಂಡ್‍ಗೆ ಹೋಗಿದ್ವಿ. ಅಲ್ಲಿ ಮೂರು ದಿನ ಇದ್ದು, ನಾವು ಪ್ಯಾರಿಸ್‍ಗೆ ಹೋಗಬೇಕಿತ್ತು. ಆದರೆ ಅಲ್ಲಿನ ಪರಿಸ್ಥಿತಿ ಚೆನ್ನಾಗಿಲ್ಲ ಎನ್ನುವುದು ತಿಳಿಯಿತು. ಹೀಗಾಗಿ ಮಾರ್ಚ್ 6ರಂದೇ ನಾವು ಭಾರತಕ್ಕೆ ವಾಪಸ್ ಬಂದಿದ್ದೇವೆ ಎಂದರು.

 

View this post on Instagram

 

#amsterdam ❤️ with my love @niveditha__gowda #chandanshetty

A post shared by Chandan Shetty (@chandanshettyofficial) on

ನಾವು ನೆದರ್‌ಲ್ಯಾಂಡ್‍ಗೆ ಹೋದಾಗ ಅಲ್ಲಿ ಏನೂ ಆಗಿರಲಿಲ್ಲ. ಈ ರೀತಿ ಆಗುತ್ತೆ ಎಂದು ಗೊತ್ತಾಗುತ್ತಿದ್ದರೆ, ನಾವು ಅಲ್ಲಿಗೆ ಹೋಗುತ್ತಿರಲಿಲ್ಲ. ಅಲ್ಲಿಗೆ ಪ್ರವಾಸಕ್ಕೆ ಹೋಗಲು ನಾವು ಟಿಕೆಟ್ ಬುಕ್ ಮಾಡುವಾಗ ಚೀನಾದಲ್ಲಿ ಮಾತ್ರ ಕೊರೊನಾ ಇದೆ ಎಂದು ಗೊತ್ತಿತ್ತು. ಆದರೆ ನಾವು ನೆದರ್‌ಲ್ಯಾಂಡ್‍ಗೆ ಹೋಗಿ ಎರಡು ದಿನ ಆದ್ಮೇಲೆ ಪ್ಯಾರಿಸ್‍ನಲ್ಲೂ ಕೊರೊನಾ ಹರಡಿದೆ ಎಂಬ ವಿಷಯ ತಿಳಿಯಿತು. ಆಗ ತಕ್ಷಣ ನಾವು ಪ್ಯಾರೀಸ್ ಪ್ರವಾಸವನ್ನು ರದ್ದು ಮಾಡಿದೆವು ಎಂದರು.

 

View this post on Instagram

 

Chilling with my wife ❄️????❤️ @niveditha__gowda

A post shared by Chandan Shetty (@chandanshettyofficial) on

ನಾನು ಮಾರ್ಚ್ ಮೂರನೇ ತಾರೀಖಿನ ಬಗ್ಗೆ ಮಾತನಾಡುತ್ತಿದ್ದೇನೆ. ನಾವು ಅಲ್ಲಿಂದ ವಾಪಸ್ ಬರುವಾಗ ಯಾರು ಮಾಸ್ಕ್ ಹಾಕಿಕೊಂಡು ಓಡಾಡುತ್ತಿರಲಿಲ್ಲ. ಯಾರಿಗೂ ಕೊರೊನಾ ಭಯ ಇರಲಿಲ್ಲ. ವಿಮಾನ ನಿಲ್ದಾಣದಲ್ಲಿ ಕಠಿಣ ನಿಯಮಗಳು ಇರಲಿಲ್ಲ. ನಾವು ಬೆಂಗಳೂರಿಗೆ ವಾಪಸ್ ಬಂದಾಗ ಇಲ್ಲಿ ಪರಿಶೀಲನೆ ಮಾಡುವುದನ್ನು ಶುರು ಮಾಡಿದ್ದರು ಎಂದು ಚಂದನ್ ಹೇಳಿದರು.

 

View this post on Instagram

 

Status : Married ❤️???? @niveditha__gowda PC: @theweddingshotsco

A post shared by Chandan Shetty (@chandanshettyofficial) on

ನಾವು ಇಟಲಿಗೆ ಹೋಗೇ ಇಲ್ಲ. ಇದು ಯಾರೋ ಬೇಕು ಅಂತಾನೇ ಹೇಳುತ್ತಿದ್ದಾರೆ. ಯಾವುದೇ ರೀತಿಯ ಸಾಕ್ಷಿ, ಪುರಾವೆ ಇಲ್ಲದೆ ಯಾಕೆ ಹೀಗೆ ಹೇಳುತ್ತಿದ್ದಾರೆ ನಮಗೆ ಗೊತ್ತಿಲ್ಲ. ಯಾರೋ ನಮಗೆ ಕಾಲೆಳೆಯಲು ಈ ರೀತಿ ಮಾಡುತ್ತಿದ್ದಾರೆ. ನಮಗೆ ಇದು ಈಗ ಕಾಮನ್ ಆಗಿದೆ. ನಾವು ಇಟಲಿಗೆ ಹೋಗೇ ಇಲ್ಲ. ನಾವು ನೆದರ್‌ಲ್ಯಾಂಡ್‍ಗೆ ಹೋಗಿದ್ವಿ. ನೆದರ್‍ಲ್ಯಾಂಡ್‍ನಿಂದ ನೇರವಾಗಿ ಬೆಂಗಳೂರಿಗೆ ಬಂದಿದ್ದೀವಿ ಎಂದರು.

 

View this post on Instagram

 

With love of my life ❤️???? @niveditha__gowda #chandanshetty @theweddingshotsco

A post shared by Chandan Shetty (@chandanshettyofficial) on

ವೀಸಾ ಕ್ಯಾನ್ಸಲ್ ಬಗ್ಗೆ ಯಾರೋ ಯೂಟ್ಯೂಬ್‍ನಲ್ಲಿ ಸುಳ್ಳು ಸುದ್ದಿ ಹರಡಿಸಿದ್ದಾರೆ. ಈ ವಿಷಯ ಮೊದಲು ಕೇಳಿದಾಗ ನಾವು ಪ್ರತಿಕ್ರಿಯಿಸಲು ಹೋಗಿಲ್ಲ. ಯೂಟ್ಯೂಬ್‍ನಲ್ಲಿ ಇವಾಗ ನಾವು ನೋಡೋ 10 ವಿಡಿಯೋದಲ್ಲಿ 8 ವಿಡಿಯೋ ಸುಳ್ಳಾಗಿ ಇರುತ್ತೆ. ಹಾಗಾಗಿ ನಾವು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ವಿಷಯ ಹೆಚ್ಚು ಚರ್ಚೆ ಆಗುತ್ತಿದ್ದ ಕಾರಣ ನಮಗೆ ಸ್ಪಷ್ಟನೆ ನೀಡಬೇಕು ಎಂದು ಎನಿಸಿತು. ಹಾಗಾಗಿ ನಾವು ಈಗ ಸ್ಪಷ್ಟನೆ ನೀಡುತ್ತಿದ್ದೇವೆ ಎಂದು ಚಂದನ್ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *