ಬೇಗ ಚೇತರಿಸಿಕೊಳ್ಳಿ ಅಮ್ಮ: ವಿವಾದದ ಬೆನ್ನಲ್ಲೇ ಚಂದನ್ ಕುಮಾರ್ ಹೊಸ ಪೋಸ್ಟ್

Public TV
1 Min Read

ಸ್ಯಾಂಡಲ್‌ವುಡ್ ನಟ ಚಂದನ್ ಕುಮಾರ್ ಕನ್ನಡ ಮತ್ತು ತೆಲುಗು ಕಿರುತೆರೆಯಲ್ಲಿ ಆಕ್ಟೀವ್ ಆಗಿದ್ದಾರೆ. ತೆಲುಗಿನ `ಶ್ರೀಮತಿ ಶ್ರೀನಿವಾಸ್’ ಸೀರಿಯಲ್ ಶೂಟಿಂಗ್ ವೇಳೆ ಚಂದನ್ ಕಿರಿಕ್ ಮಾಡಿಕೊಂಡಿದ್ದರು. ಬಳಿಕ ತಂತ್ರಜ್ಞರು ಕೂಡ ಚಂದನ್ ವಿರುದ್ಧ ತಿರುಗಿ ಬಿದ್ದಿದ್ದರು. ಈ ಕುರಿತ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಈ ಬೆನ್ನಲ್ಲೇ ಅಮ್ಮ ನಿಮ್ಮ ಜತೆ ನಾನು ಇರಬೇಕಿತ್ತು ಎಂದು ಚಂದನ್ ಭಾವುಕರಾಗಿದ್ದಾರೆ.

ತೆಲುಗಿನ ಸೀರಿಯಲ್ ಶೂಟಿಂಗ್ ವೇಳೆ ಚಂದನ್ ಕ್ಯಾಮೆರಾಮೆನ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಬಳಿಕ ತಂತ್ರಜ್ಞರು ಕೂಡ ಚಂದನ್ ವಿರುದ್ಧ ಕಿಡಿಕಾರಿದ್ದರು. ಬಳಿಕ ಚಂದನ್ ಕ್ಷಮೆ ಕೂಡ ಕೇಳಿದ್ದರು. ಈ ವಿಚಾರ ಅಲ್ಲಿಗೆ ನಿಲ್ಲದೇ ಚಂದನ್‌ಗೆ ಕಪಾಳಮೋಕ್ಷ ಕೂಡ ಮಾಡಲಾಯಿತು. ಈ ಕುರಿತ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನೂ ಓದಿ:ಹುಲಿ ಜೊತೆ `777 ಚಾರ್ಲಿ’ ನಟಿ ಸಂಗೀತಾ ಶೃಂಗೇರಿ


ಅಮ್ಮನಿಗೆ ಅನಾರೋಗ್ಯದ ಟೆನ್ಷನ್‌ನಲ್ಲಿ ಇದ್ದೆ. ಅಂದು ಆಸ್ಪತ್ರೆಯಿಂದ ನೇರವಾಗಿ ಶೂಟಿಂಗ್‌ಗೆ ತೆರಳಿದ್ದೆ. ಆಗ ಕ್ಯಾಮೆರಾ ಮ್ಯಾನ್ ನನಗೆ ಸ್ವಲ್ಪ ಕಿರಿಕಿರಿ ಮಾಡಿದರು. ಹೀಗಾಗಿ ಆ ಘಟನೆ ನಡೆಯಿತು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಈ ಬೆನ್ನಲ್ಲೇ  ಸೋಶಿಯಲ್ ಮೀಡಿಯಾದಲ್ಲಿ ಅವರು ತನ್ನ ತಾಯಿಯ ಜತೆಯಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಬೇಗ ಗುಣಮುಖರಾಗಿ ಅಮ್ಮಾ. ನಿಮ್ಮನ್ನು ನೋಡಿಕೊಳ್ಳಲು ನಾನು ಅಲ್ಲಿರಬೇಕಿತ್ತು. ನಾನು ನಿಮ್ಮನ್ನು ನೋಡಲು ಬರುತ್ತಿದ್ದೇನೆ. `ಲವ್ ಯೂ ಸೋ ಮಚ್’ ಎಂದು ಚಂದನ್ ಕುಮಾರ್ ಬರೆದುಕೊಂಡಿದ್ದಾರೆ. ಇದಕ್ಕೆ ಚಂದನ್ ಫ್ಯಾನ್ಸ್ ಬೆಂಬಲ ಸೂಚಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *