ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು: ಡಿಕೆಶಿಗೆ ಆರ್.ಅಶೋಕ್ ತಿರುಗೇಟು

Public TV
2 Min Read

– ಚಾಮುಂಡಿಯನ್ನು ಒಪ್ಪುವವರು ಮಾತ್ರ ದಸರಾ ಉದ್ಘಾಟಿಸಬೇಕು ಅಂತ ಕಾನೂನು ತರ್ತೀವಿ: ವಿಪಕ್ಷ ನಾಯಕ

ಬೆಂಗಳೂರು: ಮೈಸೂರು ಚಾಮುಂಡಿ ಬೆಟ್ಟ ಕೇವಲ ಹಿಂದೂಗಳ ಸ್ವತ್ತಲ್ಲ ಎನ್ನುವ ಡಿಸಿಎಂ ಡಿಕೆಶಿ ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಕಿಡಿ ಕಾರಿಕಾರಿದ್ದಾರೆ.

ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು. ಮುಸ್ಲಿಮರ ಸ್ವತ್ತಲ್ಲ. ನೂರು ಡಿಕೆಶಿ ಬಂದರೂ ಏನು ಮಾಡೋಕೆ ಆಗಲ್ಲ. ಇದು ಹಿಂದೂಗಳ ಸ್ವತ್ತೆ. ಧರ್ಮಸ್ಥಳ, ತಿರುಪತಿ, ಎಲ್ಲವೂ ಹಿಂದೂಗಳ ಸ್ವತ್ತೆ. ಇದನ್ನ ಮುಟ್ಟಿದ್ರೆ ದಂಗೆ ಆಗುತ್ತೆ ಹುಷಾರ್ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ಚಾಮುಂಡೇಶ್ವರಿ ಕೇವಲ ಹಿಂದೂಗಳ ಆಸ್ತಿ ಅಲ್ಲ: ಡಿ.ಕೆ.ಶಿವಕುಮಾರ್

ಎಲ್ಲಾ ಧರ್ಮವನ್ನ ಒಪ್ಪುತ್ತೇನೆ ಅನ್ನೋದು ಕಾಂಗ್ರೆಸ್‌ಗೆ ಅರ್ಥ ಆಗಲ್ಲ. ಇದನ್ನ ಒಪ್ಪಲ್ಲ. ನಮಸ್ತೆ ಇಟಲಿ ಅಂತ ಹೇಳಿದ್ರೆ ಡಿಕೆಶಿಗೆ ಅವಾರ್ಡ್ ಕೊಟ್ಟಿರುವರು. ಈಗ ಅವರನ್ನ ಎಲ್ಲರೂ ವಿರೋಧಿಸುತ್ತಿದ್ದಾರೆ. ಅವರ ಮೇಲೆ ಮುಗಿ ಬೀಳುತ್ತಿದ್ದಾರೆ. ಕಾಂಗ್ರೆಸ್‌ಗೆ ಉಳಿಗಾಲವಿಲ್ಲ. ಮುಂದೆ ಕಾಂಗ್ರೆಸ್‌ಗೆ ಭವಿಷ್ಯ ಇಲ್ಲ. ಕ್ಷಮೆ ಕೇಳೋದು ಯಾಕೆ? ಭಾರತಮಾತೆಗೆ ಅಥವಾ ಕನ್ನಡ ಮಾತೆ, ಮುಸ್ಲಿಮರಿಗೆ ಬೈಯ್ದಿದ್ದಾರಾ? ಆಶ್ಚರ್ಯ ಆಗ್ತಿದೆ. ತಪ್ಪು ಬಯ್ದಿದ್ದರೆ ಕ್ಷಮೆ ಕೇಳೋದು ಸರಿ. ಭಾರತ ಮಾತೆಗೆ ನಮಸ್ಕಾರ ಹೇಳುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

ಬಾನು ಮುಸ್ತಾಕ್‌ ದಸರಾ ಉದ್ಘಾಟನೆಗೆ ವಿರೋಧ ಕುರಿತು ಮಾತನಾಡಿ, ಮುಸ್ಲಿಮರೇ ಮೂರ್ತಿ ಪೂಜೆ ಮಾಡಲ್ಲ ಅಂತ ಹೇಳಿದ್ದಾರೆ. ಯಾರೇ ಹೇಳಿದ್ರು ಮೂರ್ತಿ ಪೂಜೆ ಅದು ಅಪರಾಧ ಅಂತಾರೆ. ಚಾಮುಂಡೇಶ್ವರಿ ಪೂಜೆ ಮಾಡಿ ದಸರಾ ಹೊರಡುವುದು. ಹೂ ಹಾಕಿ ಪೂಜೆ ಮಾಡಿ ಹೊರಡಬೇಕು. ಅವರ ಧರ್ಮದಲ್ಲಿ ಇದಕ್ಕೆ ಅವಕಾಶ ಇಲ್ಲ. ಕಾಂಗ್ರೆಸ್‌ಗೆ ಮುಸ್ಲಿಂ ವೋಟ್ ಬಿಟ್ಟರೆ ತಲೆಯಲ್ಲಿ ಬೇರೆನೂ ಇಲ್ಲ. ಹಿಂದೂಗಳಲ್ಲಿ ಯೋಗ್ಯತೆ ಇಲ್ವಾ? ದಸರಾ ಉದ್ಘಾಟನೆಗೆ ಹಿಂದೂಗಳು ಇರಲಿಲ್ವಾ? ನಮ್ಮ ಸರ್ಕಾರ ಬಂದಾಗ ಇದಕ್ಕೆ ಒಂದು ಕಾನೂನು ತರ್ತೀವಿ. ಚಾಮುಂಡಿಯನ್ನ ಯಾರು ಒಪ್ಪುವರೋ ಅವರು ಮಾತ್ರ ಉದ್ಘಾಟನೆ ಮಾಡಬೇಕು ಅನ್ನೋ ಕಾನೂನು ತರುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಅಧ್ಯಕ್ಷ ಸಿದ್ದರಾಮಯ್ಯ, ಉಪಾಧ್ಯಕ್ಷರಾಗಿ ಡಿಕೆ ಶಿವಕುಮಾರ್‌ ನೇಮಕ

ಮೈಸೂರಿನಲ್ಲಿ ಪರಮೇಶ್ವರೋತ್ಸವ ವಿಚಾರವಾಗಿ ಮಾತನಾಡಿ, ಪರಮೇಶ್ವರ್ ಹಿರಿಯರು. ಎರಡು ಬಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಪರಮೇಶ್ವರ್ ಯಾವತ್ತೋ ಮುಖ್ಯಮಂತ್ರಿ ಆಗಬೇಕಿತ್ತು. ಕಾಂಗ್ರೆಸ್ ಅವರನ್ನ ಕರಿಬೇವಿನ ಥರ ಬಳಕೆ ಮಾಡಿಕೊಳ್ಳುತ್ತಿದೆ. ಯಾವಾಗ ಬೇಕೋ ಅವಾಗ ಬಳಕೆ ಮಾಡಿಕೊಳ್ಳುತ್ತಾರೆ. ಊಟ ಮಾಡುವಾಗ ಎತ್ತಿ ಪಕ್ಕಕ್ಕೆ ಇಡುತ್ತಾರೆ. ಅವರು ಒಳ್ಳೆಯವರು ಎಂದು ಹೇಳಿದ್ದಾರೆ.

Share This Article