ಮೈದಾನದಲ್ಲೇ ಕುಲದೀಪ್‌ಗೆ ಕೊಹ್ಲಿ, ರೋಹಿತ್‌ ಕ್ಲಾಸ್‌!

Public TV
1 Min Read

ದುಬೈ: ಆಸ್ಟ್ರೇಲಿಯಾ (Australia) ವಿರುದ್ಧ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿ ಸೆಮಿಫೈನಲ್‌ ಪಂದ್ಯದ ವೇಳೆ ಸ್ಪಿನ್ನರ್‌ ಕುಲದೀಪ್‌ ಯಾದವ್‌ಗೆ (Kuldeep Yadav) ವಿರಾಟ್‌ ಕೊಹ್ಲಿ (Virat Kohli) ಮತ್ತು ರೋಹಿತ್‌ ಶರ್ಮಾ (Rohit Sharma) ಮೈದಾನದಲ್ಲೇ ಕ್ಲಾಸ್‌ ಮಾಡಿದ ವಿಡಿಯೋ ಈಗ ವೈರಲ್‌ ಆಗಿದೆ.

ಕುಲದೀಪ್‌ ಯಾದವ್‌ ಇನ್ನಿಂಗ್ಸ್‌ 32 ಓವರ್‌ ಎಸೆಯುತ್ತಿದ್ದರು. 5ನೇ ಎಸೆತವನ್ನು ಸ್ಟ್ರೈಕ್‌ನಲ್ಲಿದ್ದ ಸ್ಮಿತ್‌ ಡೀಪ್‌ ಸ್ಕ್ಯಾರ್‌ ಲೆಗ್‌ ಕಡೆ ಹೊಡೆದು ಓಡಿದರು.


ಬಾಲ್‌ ಕೊಹ್ಲಿ ಕೈ ಸೇರಿತು. ಕೂಡಲೇ ಕೊಹ್ಲಿ ಬೌಲರ್‌ ಎಂಡ್‌ನಲ್ಲಿದ್ದ ಕುಲದೀಪ್‌ ಯಾದವ್‌ಗೆ ಚೆಂಡು ಎಸೆದರು. ಆದರೆ ಕುಲದೀಪ್‌ ಯಾದವ್‌ ಚೆಂಡು ಹಿಡಿಯಲು ಪ್ರಯತ್ನಿಸದೇ ಬಿಟ್ಟರು.  ಕೂಡಲೇ ಮಿಡ್‌ ಆಫ್‌ನಲ್ಲಿದ್ದ ರೋಹಿತ್‌ ಶರ್ಮಾ ಚೆಂಡನ್ನು ಹಿಡಿದರು.

ಒಂದು ವೇಳೆ ರೋಹಿತ್‌ ಶರ್ಮಾ ಕವರ್‌ ಮಾಡದೇ ಇದ್ದರೆ ಸ್ಮಿತ್‌ ಇನ್ನೊಂದು ರನ್‌ ಓಡುವ ಸಾಧ್ಯತೆ ಇತ್ತು. ಸುಲಭವಾಗಿ ಹಿಡಿಯುವ ಚೆಂಡನ್ನು ಹಿಡಿಯದ್ದಕ್ಕೆ ವಿರಾಟ್‌ ಕೊಹ್ಲಿ ಗರಂ ಆದರು. ನಂತರ ರೋಹಿತ್‌ ಶರ್ಮಾ ಸಹ ಕ್ಲಾಸ್‌ ತೆಗೆದುಕೊಂಡರು.

ಇಂದಿನ ಪಂದ್ಯದಲ್ಲಿ 8 ಓವರ್‌ ಎಸೆದ ಕುಲದೀಪ್‌ ಯಾದವ್‌ 44 ರನ್‌ ನೀಡಿದರು. ಆದರೆ ವಿಕೆಟ್‌ ಪಡೆಯಲು ವಿಫಲರಾದರು.

Share This Article