ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಪ್ರತಾಪ್ ಸಿಂಹಗೆ ಚಂಪಾ ನೇರ ಟಾಂಗ್!

Public TV
1 Min Read

ಮೈಸೂರು: ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಪ್ರೊ. ಚಂಪಾ ಅವರು ಸಂಸದ ಪ್ರತಾಪ್ ಸಿಂಹ ಅವರಿಗೆ ನೇರವಾಗಿ ಟಾಂಗ್ ನೀಡಿದ್ದಾರೆ.

ಸಿಂಹ ಸಮ್ಮೇಳನಕ್ಕೆ ಮೊದಲೇ ಬರಬೇಕಿತ್ತು. ಆದ್ರೆ ಇವತ್ತಾದ್ರೂ ಬಂದಿದ್ದಾರೆ. ಪ್ರತಾಪ್ ಸಿಂಹ ಬಗ್ಗೆ ನನಗೆ ಗೌರವ ಇತ್ತು. ಅವನ ಲೇಖನಗಳನ್ನು ನಾನು ಇಂದಿಗೂ ಇಟ್ಟಿದ್ದೇನೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೂರುವ ಬದಲು ಹೊರಟುಹೋದ. ಬಸವನ ಜೊತೆ ಬಾಲ ಇದ್ದ ಹಾಗೆ, ಅನಂತ್ ಕುಮಾರ್ ಬಾಲ ಹಿಡಿದು ಹೊರಟು ಹೋದ ಅಂತ ನೇರವಾಗಿ ಟಾಂಗ್ ನೀಡಿದ್ರು.

ಸಮಾರೋಪದಲ್ಲಿ ಮಾತನಾಡಿ ಸಚಿವ ಅನಂತ್ ಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಬಳಿಕ ಪ್ರತಾಪ್ ಸಿಂಹ ಅವರಿಗೂ ಚಂಪಾ ನೇರವಾಗಿ ಟಾಂಗ್ ನೀಡಿದ್ರು. ಟಿಪ್ಪು ಒಬ್ಬ ಹೀರೋ. ಆತ ಒಬ್ಬ ಸ್ವಾತಂತ್ರ್ಯ ಯೋಧ. ಮೈಸೂರಿನ ಹುಲಿ ಟಿಪ್ಪು ಸುಲ್ತಾನ್. ಅವನ ಜಯಂತಿ ಮಾಡುವಾಗ ಆತನನ್ನು ಕ್ರೂರಿ ಎಂದ್ರು. ಪ್ರತಾಪ್ ಸಿಂಹ ಕರ್ನಾಟಕದಾದ್ಯಂತ ವಿಷ ಬೀಜ ಬಿತ್ತಿದ. ರಾಷ್ಟಪತಿ ಕೋವಿಂದ್ ಟಿಪ್ಪು ಬಗ್ಗೆ ಹೊಗಳಿದ್ರು. ಆದರೆ ಸಿಂಹ ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ ಅಂತ ಟಿಪ್ಪುವನ್ನು ಹಾಡಿ ಹೊಗಳಿದ್ರು.

ಒಟ್ಟಿನಲ್ಲಿ ರಾಜಕೀಯ ಭಾಷಣದಿಂದ ಆರಂಭವಾದ ಸಮ್ಮೇಳನ ರಾಜಕೀಯ ಭಾಷಣದಿಂದಲೇ ಮುಕ್ತಾಯವಾಯಿತು. ಸಮ್ಮೇಳನದ ಸಮಾರೋಪ ಕಾರ್ಯಕ್ರಮ ರಾಜಕೀಯ ಜಿದ್ದಾಜಿದ್ದಿನ ಭಾಷಣಕ್ಕೆ ವೇದಿಕೆಯಾಯಿತು.

Share This Article
Leave a Comment

Leave a Reply

Your email address will not be published. Required fields are marked *