ಕಾಣೆಯಾಗಿದ್ದ ನಟಿ ರಮ್ಯಾ ಮುದ್ದಿನ ಶ್ವಾನ ಇನ್ನಿಲ್ಲ

Public TV
1 Min Read

ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ (Ramya) ಅವರ ಕಾಣೆಯಾಗಿದ್ದ ಮುದ್ದಿನ ಶ್ವಾನ ಮೃತಪಟ್ಟಿರುವುದಾಗಿ ಸ್ವತಃ ನಟಿಯೇ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಚಾಂಪ್ (Champ) ಮೃತಪಟ್ಟಿದೆ. ಹಾಗೆಯೇ ಹುಡುಕಲು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ.

ಶನಿವಾರ ಬೆಳಗ್ಗೆಯಷ್ಟೇ ನಾಯಿ ಕಾಣೆಯಾಗಿರುವ ಕುರಿತು ಟ್ವೀಟ್ ಮಾಡಿರುವ ರಮ್ಯಾ, ಮೇ 6 ರಿಂದ ನೆಚ್ಚಿನ ನಾಯಿ ಚಾಂಪ್ ಕಾಣೆಯಾಗಿದೆ. ಕರಿ ಬಣ್ಣದ ಪರ್ಟೈಲಿ ತಳಿಯ ನಾಯಿ ಅದಾಗಿದ್ದು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನವನ್ನು ಕೊಡಲಾಗುವುದು. ಯಾರಿಗಾದರೂ ನಾಯಿ ಕಂಡರೆ 7012708137 ಈ ನಂಬರ್ ಗೆ ಕಾಂಟ್ಯಾಕ್ಟ್ ಮಾಡಿ ಎಂದು ಅವರು ಪೋಸ್ಟ್ ನಲ್ಲಿ ಬರೆದುಕೊಂಡಿದ್ದರು. ಇದನ್ನೂ ಓದಿ: ದುಡ್ಡಿಗಾಗಿ ನಾನು ಪ್ರಚಾರಕ್ಕೆ ಬಂದಿಲ್ಲ: ಸಂಬರಗಿಗೆ ಶಿವಣ್ಣ ತಿರುಗೇಟು

 

ರಮ್ಯಾ ವಾಸವಿದ್ದ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ತಾಜ್ ವೆಸ್ಟ್ ಎಂಡ್ ಹೋಟೆಲ್ ನಿಂದ ನಾಯಿ ಕಾಣೆಯಾಗಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತನ್ನ ನೆಚ್ಚಿನ ನಾಯಿಯನ್ನು ಹುಡುಕಿಕೊಡುವಂತೆ ಅವರು ಸಾರ್ವಜನಕರಲ್ಲಿ ಮನವಿ ಮಾಡಿದ್ದರು. ಆದರೆ ಇದೀಗ ತಮ್ಮ ಮುದ್ದಿನ ಶ್ವಾನ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ರಮ್ಯಾ ಅವರಿಗೆ ನಾಯಿ ಅಂದರೆ ಎಲ್ಲಿಲ್ಲದ ಪ್ರೀತಿ. ನಾಯಿ ಕಥೆಯನ್ನು ಇಟ್ಟುಕೊಂಡೇ ಅವರೊಂದು ಸಿನಿಮಾ ಕೂಡ ಮಾಡಿದ್ದಾರೆ. `ನಾನು ಏನ್ ಮಾಡ್ಲಿ ಸ್ವಾಮಿ.. ನನ್ನ ಹುಡುಗಿ ನಾಯಿ ಪ್ರೇಮಿ’ ಎನ್ನುವ ಹಾಡು ಕೂಡ ಸಖತ್ ಫೇಮಸ್ ಆಗಿತ್ತು.

Share This Article