40 ವರ್ಷಗಳ ಬಳಿಕ ಒಂದು ರಾತ್ರಿಯ ಮಳೆಗೆ ಇತಿಹಾಸ ಪ್ರಸಿದ್ಧ ಗಣಪತಿ ಕೊಳ ತುಂಬಿತು!

Public TV
0 Min Read

ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ 40 ವರ್ಷಗಳ ಬಳಿಕ ಇತಿಹಾಸ ಪ್ರಸಿದ್ಧವಾದ ಗಣಪತಿ ಕೊಳ ತುಂಬಿದೆ.

ಮಳೆ ನೀರಿನಿಂದ ಈ ಕೊಳ ತುಂಬದ ಕಾರಣ ಜನರು ಕಳೆದ 40 ವರ್ಷಗಳಿಂದ ಬೋರ್ ಮೂಲಕ ಈ ಕೊಳಕ್ಕೆ ನೀರು ತುಂಬಿಸುತ್ತಿದ್ದರು. ಇದೀಗ ರಾತ್ರಿ ಸುರಿದ ಮಳೆಯಿಂದ ಈ ಕೊಳ ತುಂಬಿ ತುಳುಕುತ್ತಿರುವುದರಿಂದ ಜನರ ಮುಖದಲ್ಲಿ ಮಂದಹಾಸ ಮೂಡಿದೆ.

ಅಷ್ಟೇ ಅಲ್ಲದೇ ಈ ಕೊಳ ತುಂಬಿರುವುದರಿಂದ ಚಾಮರಾಜನಗರಕ್ಕೆ ಅಂಟಿದ್ದ ಬರ ಹೊರಟು ಹೋಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಜನರು ಸಮೃದ್ಧಿಯಲ್ಲಿ ಇರುತ್ತಾರೆ ಎಂದು ಜನ ಸಂತೋಷ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *