ಚಾಮರಾಜನಗರ: ರೈತರ ವೇಷದಲ್ಲಿ ನವ ಜೋಡಿಯೊಂದು ಪ್ರೀ ವೆಡ್ಡಿಂಗ್ ಶೂಟ್ (Agriculture Pre Wedding Shoot) ಮಾಡಿಸಿಕೊಳ್ಳುವ ಮೂಲಕ ಸುದ್ದಿಯಾಗಿದೆ.
ಚಾಮರಾಜನಗರ (Chamarajangara) ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದ ಯುವ ರೈತ ಅಭಿಲಾಷ್ ಮತ್ತು ಚನ್ನಪಟ್ಟಣದ ಕೃತಿಕಾ ಅವರು ವಿಭಿನ್ನವಾಗಿ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ. ಇದನ್ನೂ ಓದಿ: ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ಕಸರತ್ತು – ಅಧ್ಯಕ್ಷರ ಮೊದಲ ಪಟ್ಟಿ ಫೈನಲ್: ಸಭೆಯಲ್ಲಿ ಏನಾಯ್ತು?
ಪ್ರವಾಸಿ ಸ್ಥಳ, ಜಲಪಾತ, ಸೇತುವೆ ಇತ್ಯಾದಿ ಸ್ಥಳಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡುವುದು ಇಂದು ಸಹಜ. ಆದರೆ ಇವರ ಪ್ರೀ ವೆಡ್ಡಿಂಗ್ ಶೂಟ್‌ನಲ್ಲಿ ಉಳುಮೆ, ಎತ್ತಿ ಬಂಡಿಯಲ್ಲಿ ಸವಾರಿ, ರಾಗಿ ಮುದ್ದೆ, ಉಪ್ಸಾರು ಮನೆ ಮುಂದೆ ರಂಗೋಲಿ ಹೀಗೆ ಕೃಷಿ ಚಟುವಟಿಕೆಗಳ ಅನಾವರಣ ಮಾಡಿದ್ದಾರೆ.
ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎಂಬ ಮಾತಿನ ಮಧ್ಯೆ ಈ ಯುವ ರೈತನ ‘ಕೃಷಿ ಪ್ರೀ ವೆಡ್ಡಿಂಗ್ ಶೂಟ್’ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು ಮೆಚ್ಚುಗೆ ವ್ಯಕ್ತವಾಗಿದೆ.