ಚಾಮರಾಜನಗರ: ಮುಡಿ ಮಾಡಿಸಿಕೊಂಡು ಬರುವ ಭಕ್ತರಿಗೆ ಮಾದಪ್ಪನ ದರ್ಶನವಿಲ್ಲ. ಹೀಗಾಗಿ ಭಕ್ತರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಈ ಅವೈಜ್ಞಾನಿಕ ಆದೇಶ ಹೊರಡಿಸುವ ಮೂಲಕ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದಲ್ಲಿ ಕೊರೊನಾ ಕಾರಣದಿಂದ ಮುಡಿ ಸೇವೆ ಸೇರಿದಂತೆ ಎಲ್ಲಾ ಸೇವೆಗಳು ಸ್ಥಗಿತಗೊಂಡಿದೆ. ಹೀಗಾಗಿ ಭಕ್ತರಿಗೆ ಕೇವಲ ಮಾದಪ್ಪನ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಇದನ್ನೂ ಓದಿ: ಬೆಂಕಿ ಹೊತ್ತಿಕೊಂಡಿದ್ದು ಸಿಲಿಂಡರಿನಿಂದಲ್ಲ- ಯುಪಿಎಸ್, ಮೊಬೈಲ್ ಚಾರ್ಜರ್ ಬಗ್ಗೆ ಶಂಕೆ
ಆದರೆ ಭಕ್ತಾದಿಗಳ ಒತ್ತಾಯಕ್ಕೆ ಹೆಚ್ಚು ಶುಲ್ಕ ಪಡೆದು ಕದ್ದು ಮುಚ್ಚಿ ಮುಡಿ ಸೇವೆ ಮಾಡಿಸಲಾಗುತ್ತಿದೆ. ಹೀಗಾಗಿ ಅನಧಿಕೃತವಾಗಿ ಮುಡಿ ತೆಗೆಯುತ್ತಿದ್ದವರಿಗೆ ಪ್ರಾಧಿಕಾರ ನೋಟಿಸ್ ನೀಡಿತ್ತು. ಮುಡಿ ತೆಗೆಯುವುದನ್ನ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಆದರೂ ಪ್ರಾಧಿಕಾರದ ಹೊರ ಆವರಣ ಹಾಗೂ ಮಲೆಮಹದೇಶ್ವರ ಬೆಟ್ಟಕ್ಕೆ ಬರುವಾಗಲೇ ಬೇರೆ ಕಡೆಗಳಿಂದ ಮುಡಿ ಮಾಡಿಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಮುಡಿ ಮಾಡಿಸಿಕೊಂಡ ಬರುವ ಯಾರೇ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಒಳ ಆವರಣದಲ್ಲಿ ಪ್ರವೇಶ ನಿಷೇಧಿಸಲಾಗಿದೆ. ಸದ್ಯ ಈ ಅವೈಜ್ಞಾನಿಕ ಆದೇಶಕ್ಕೆ ಭಕ್ತರು ರೊಚ್ಚಿಗೆದ್ದಿದ್ದಾರೆ.