ಅಕ್ಕಿಕಾಳಿನ ಆಕೃತಿ ನಿರ್ಮಿಸಿ, ಅನ್ನಭಾಗ್ಯ ಸ್ಮರಿಸಿದ ಸಿದ್ದು ಅಭಿಮಾನಿ

Public TV
1 Min Read

ಚಾಮರಾಜನಗರ: ವಿಪಕ್ಷ ನಾಯಕ ಸಿದ್ದರಾಮಯ್ಯರ ಅಮೃತಮಹೋತ್ಸವಕ್ಕೆ ಸಾಗರೋಪಾದಿಯಲ್ಲಿ ಅಭಿಮಾನಿಗಳು ನೆರೆದಿದ್ದಾರೆ. ಲಕ್ಷಾಂತರ ಅಭಿಮಾನಿಗಳು ವಿವಿಧ ರೀತಿಯಲ್ಲಿ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಒಂದೆಡೆ ಛಾಯಾಚಿತ್ರಗಳಲ್ಲಿ ಸಿದ್ದರಾಮಯ್ಯರ ಬದುಕು ಮತ್ತು ಸಾಧನೆ ಅನಾವರಣಗೊಳಿಸಲಾಗಿದೆ. ಕೆಲವು ಅಭಿಮಾನಿಗಳು ಎದೆಯ ಮೇಲೆ ಟ್ಯಾಟು ಹಾಕಿಸಿಕೊಂಡು ಸಂಭ್ರಮಿಸಿದ್ದಾರೆ. ಈ ನಡುವೆ ಯುವ ಕಲಾವಿದನೊಬ್ಬ ಅಕ್ಕಿ ಕಾಳಿನಲ್ಲಿ ಸಿದ್ದರಾಮಯ್ಯ ಅವರ ಪುತ್ಥಳಿ ನಿರ್ಮಿಸುವ ಮೂಲಕ ಅಭಿಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಷ್ಟಲಿಂಗ ಪೂಜೆ ಹೇಳಿಕೊಡಲು ದೆಹಲಿಗೆ ಬನ್ನಿ ಅಂದ ರಾಹುಲ್

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಟಿ.ಹೊಸೂರು ಗ್ರಾಮದ ಕಲಾವಿದ ಬಿ.ಮಹೇಶ್ ತಮ್ಮ ಕೈಳಕದಿಂದ ಅಕ್ಕಿ ಕಾಳಿನಲ್ಲಿ ಸಿದ್ದರಾಮಯ್ಯರ ಆಕೃತಿ ನಿರ್ಮಿಸಿ, ಅನ್ನಭಾಗ್ಯ ಯೋಜನೆಯನ್ನು ಸ್ಮರಿಸಿದ್ದಾರೆ. ಇದನ್ನೂ ಓದಿ: ಈಡಿಗ-ಬಿಲ್ಲವ ಸಮುದಾಯದ ಯುವಕರನ್ನು ಬಿಜೆಪಿ ಯೂಸ್ & ಥ್ರೋ ಮಾಡುತ್ತಿದೆ: ಪ್ರಣವಾನಂದ ಸ್ವಾಮೀಜಿ

ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ನಂತರ ಮೊದಲು ಘೋಷಣೆ ಮಾಡಿದ ಮಹತ್ವ ಪೂರ್ಣ ಯೋಜನೆಯೇ ಅನ್ನಭಾಗ್ಯ. ಅವರ 75ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಈ ಯೋಜನೆಯನ್ನು ನೆನಪಿಸುವ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಸಮಾರಂಭದಲ್ಲಿ ಅಕ್ಕಿ ಕಾಳಿನ ಪ್ರತಿಮೆಯನ್ನು ಸಿದ್ದರಾಮಯ್ಯರಿಗೆ ಕೊಡಲು ಅಭಿಮಾನಿ ಮಹೇಶ್ ತೆರಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *