ಚಾಮರಾಜನಗರ ಕ್ಷೇತ್ರದ 8 ನಾಮಪತ್ರ ವಾಪಸ್ – ರಣಕಣದಲ್ಲಿ 14 ಅಭ್ಯರ್ಥಿಗಳು

Public TV
1 Min Read

ಚಾಮರಾಜನಗರ: ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಇಂದು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾ ಕಣದಿಂದ 8 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ಅಂತಿಮವಾಗಿ ಒಟ್ಟು 14 ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ.

ಪಕ್ಷೇತರ ಅಭ್ಯರ್ಥಿಗಗಳಾದ ನಟರಾಜು, ಬಲ್ಲಯ್ಯ (ಬಾಲು), ಸಣ್ಣಸ್ವಾಮಿ, ಸುಭಾಷ್ ಚಂದ್ರ.ಕೆ, ನಿಂಗರಾಜು, ಸಿ.ಶಂಕರ ಅಂಕನಶೆಟ್ಟಿಪುರ, ರಾಜು.ಕೆ, ಎಂ.ನಾಗೇಂದ್ರ ಬಾಬು ಎಂಬುವವರು ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆದಿದ್ದಾರೆ. ಇದನ್ನೂ ಓದಿ: ಚುನಾವಣಾ ರಾಜಕಾರಣದಿಂದ ಹಿಂದೆ‌ ಸರಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ

ಅಂತಿಮವಾಗಿ ಕಣದಲ್ಲಿ, ಎಂ.ಕೃಷ್ಣಮೂರ್ತಿ (ಬಹುಜನ ಸಮಾಜ ಪಾರ್ಟಿ). ಎಸ್.ಬಾಲರಾಜು (ಬಿಜೆಪಿ), ಸುನೀಲ್ ಬೋಸ್ (ಕಾಂಗ್ರೆಸ್), ಸಿ.ಎಂ.ಕೃಷ್ಣ (ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ), ನಿಂಗರಾಜು.ಎಸ್ (ಕರ್ನಾಟಕ ಜನತಾ ಪಕ್ಷ). ಪ್ರಸನ್ನ ಕುಮಾರ್.ಬಿ (ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ). ಕಂದಳ್ಳಿ ಮಹೇಶ್ (ಕರ್ನಾಟಕ ರಾಷ್ಟ್ರ ಸಮಿತಿ), ಸುಮ.ಎಸ್ (ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್ ಪಕ್ಷ), ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಕದಂಬ ನಾ.ಅಂಬರೀಷ್, ನಿಂಗರಾಜು.ಜಿ, ಪಟಾಸ್ ಪ್ರದೀಪ್ ಕುಮಾರ್.ಎಂ, ಮಹದೇವಸ್ವಾಮಿ.ಬಿ.ಎಂ (ಪಂಪಿ), ಜಿ.ಡಿ. ರಾಜಗೋಪಾಲ (ಹೆಚ್.ಡಿ.ಕೋಟೆ), ಹೆಚ್.ಕೆ.ಸ್ವಾಮಿ ಹರದನಹಳ್ಳಿ ಕಣದಲ್ಲಿ ಉಳಿದುಕೊಂಡಿದ್ದಾರೆ. ಇದನ್ನೂ ಓದಿ: ಸೊಂಟದಲ್ಲಿ ಗನ್ ಇಟ್ಟುಕೊಂಡು ಸಿಎಂಗೆ ಹಾರ ಹಾಕಿದ ವ್ಯಕ್ತಿ – ಪ್ರಚಾರದ ವೇಳೆ ಭದ್ರತಾ ವೈಫಲ್ಯ?

Share This Article