ಸೀರಿಯಲ್ ನಿರ್ದೇಶನದತ್ತ ‌’ಚಮಕ್‌’ ಡೈರೆಕ್ಟರ್ ಸಿಂಪಲ್ ಸುನಿ

By
1 Min Read

ಮಕ್, ಅವತಾರ ಪುರುಷ (Avatara Purusha)  ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ನಿರ್ದೇಶಕ ಸಿಂಪಲ್ ಸುನಿ (Simple Suni) ಸೀರಿಯಲ್ ನಿರ್ದೇಶನದತ್ತ ಮುಖ ಮಾಡಿದ್ದಾರೆ. ಶಾಂಭವಿ (Shambhavi) ಎಂಬ ಸೀರಿಯಲ್ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ಶಾಂಭವಿ ಮುದ್ದಾದ 6 ವರ್ಷದ ಮಗು. ಇವಳ ಅಮ್ಮ ಶಿವಗಾಮಿ ಸಾವಿರಾರು ಕೋಟಿ ಆಸ್ತಿಯ ಒಡತಿ. ಶ್ರೀ ಶಾಂಭವಿ ಶಿಕ್ಷಣ ಸಂಸ್ಥೆ ಜೊತೆ ಇನ್ನೂ ಹಲವು ಉದ್ಯಮಗಳಿವೆ. ಇವಳಿಗೊಬ್ಬ ಅಣ್ಣ ಹರಿಪ್ರಸಾದ್. ಅಣ್ಣ ತಂಗಿಗೆ ಅವರಿಬ್ಬರೇ ಪ್ರಪಂಚವಾಗಿರುತ್ತಾರೆ. ಇದನ್ನೂ ಓದಿ:Jawan ರಿಲೀಸ್ ದಿನವೇ ಬರುತ್ತಿದೆ ಕನ್ನಡತಿ ಅನುಷ್ಕಾ ಶೆಟ್ಟಿ ಸಿನಿಮಾ

ನಾಯಕ ಅಶೋಕ ಅವರ ಸಂಸ್ಥೆಯಲ್ಲಿ ಶಿಕ್ಷಕನಾಗಿ ಸೇರುವುದರೊಂದಿಗೆ ಕಥೆ ತಿರುವು ಪಡೆದುಕೊಳ್ಳುತ್ತದೆ. ಅಶೋಕನ ಮನೆಯವರು ದುಡ್ಡಿಗಾಗಿ ಹಪಹಪಿಸುವ ಮಂದಿಯಾಗಿದ್ದು,  ಅವನ ಅಮ್ಮ ಮತ್ತು ತಮ್ಮಂದಿರು ತುಂಬಾ ಖತರ್ನಾಕ್ ಆಗಿರುತ್ತಾರೆ. ಈ ಮೂಲಕ ದೇವರಾಗಿ ದೆವ್ವವಾಗಿ ಕಾಡುವ ಮಗುವಿನ ಕಥೆಯನ್ನ ಸಿಂಪಲ್ ಸುನಿ ತೋರಿಸಲು ಹೊರಟಿದ್ದಾರೆ. ಸದ್ಯದಲ್ಲೇ ಈ ಸೀರಿಯಲ್‌, ಟಿವಿ ಪರದೆಯಲ್ಲಿ  ಮೂಡಿ ಬರಲಿದೆ.

ಶಾಂಭವಿ ಸೀರಿಯಲ್‌ನಲ್ಲಿ ಐಶ್ವರ್ಯಾ ಸಿಂಧೋಗಿ (Aishwarya Shindogi), ವಿನಯ್ ಗೌಡ (Vinay Gowda) ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾಂಭವಿ ಆಗಿ ಬಾಲನಟಿ ರಚನಾ ಜೀವ ತುಂಬಿದ್ದಾರೆ. ಈ ಸೀರಿಯಲ್ ಜೊತೆಗೆ ಒಂದು ಸರಳ ಪ್ರೇಮ ಕಥೆ, ಅವತಾರ ಪುರುಷ 2, ಗತವೈಭವ ಸಿನಿಮಾಗಳು ಸಿಂಪಲ್ ಸುನಿ ಕೈಯಲ್ಲಿದೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್