ಮುಡಾ ಅಕ್ರಮ ಆಗಿರೋದು ಬಿಜೆಪಿ ಅವಧಿಯಲ್ಲಿ ಅವರ ಮೇಲೆ ಕ್ರಮ ಆಗಲಿ: ಚಲುವರಾಯಸ್ವಾಮಿ

Public TV
1 Min Read

ಬೆಂಗಳೂರು: ಮುಡಾ ಅಕ್ರಮ ನಡೆದಿರೋದು ಬಿಜೆಪಿ (BJP) ಅವಧಿಯಲ್ಲಿ. ಕ್ರಮ ಆಗೋದಿದ್ದರೆ ಬಿಜೆಪಿಯವರ ಮೇಲೆ ಕ್ರಮ ಆಗಲಿ ಎಂದು ಸಚಿವ ಚಲುವರಾಯಸ್ವಾಮಿ  (Chaluvaraya Swamy) ಆಗ್ರಹಿಸಿದ್ದಾರೆ.

ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯಗೆ (Siddaramaiah) ಲೋಕಾಯುಕ್ತ ಕ್ಲೀನ್‌ಚಿಟ್ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಅವರು ಮಾತಾನಾಡಿದರು. ಈ ವೇಳೆ, ಮುಡಾ ಕೇಸ್‌ನಲ್ಲಿ ಸತ್ಯ ಇಲ್ಲ ಎಂದು ನಮಗೆ ಗೊತ್ತಿದ್ದ ವಿಷಯ.ಇದರಲ್ಲಿ ಸಿಎಂ ಯಾವುದೇ ಪ್ರಭಾವ ಬೀರಿಲ್ಲ. ಯಾವುದೇ ಲೆಟರ್ ಬರೆದಿರಲಿಲ್ಲ. ಬದಲಿ ನಿವೇಶನ ಎಲ್ಲರಿಗೂ ಕೊಡ್ತಾರೆ. ಅದರಂತೆ ಸಿಎಂ ಪತ್ನಿಗೂ ಕೊಟ್ಟಿದ್ದಾರೆ. ಈ ತಪ್ಪು ಆಗಿರೋದು ಬಿಜೆಪಿ ಅವಧಿಯಲ್ಲಿ. ಏನಾದರೂ ಕ್ರಮ ಆಗೋದಿದ್ದರೆ ಅವರ ಮೇಲೆ‌ ಕ್ರಮ ಆಗಬೇಕು ಎಂದಿದ್ದಾರೆ.

ಸಿದ್ದರಾಮಯ್ಯ ಅವರದ್ದು ಏನೇ ತಪ್ಪು ಇಲ್ಲದೇ ಹೋದರು ಪಾದಯಾತ್ರೆ ‌ಮಾಡಿದ್ರು. ಈಗ ಕ್ಲೀನ್‌ಚಿಟ್ ಸಿಕ್ಕಿದೆ. ಇದರ ಹೊಣೆ ಈಗ ಬಿಜೆಪಿ-ಜೆಡಿಎಸ್‌ನವರು ಹೊರಬೇಕು. ಸಿಬಿಐ ತನಿಖೆ ಬೇಡ ಎಂದು ಕೋರ್ಟ್ ಹೇಳಿತ್ತು. ಲೋಕಾಯುಕ್ತಗೆ ವರದಿ ಕೊಟ್ಟಿದೆ. ಬಿಜೆಪಿ ಅವರಿಗೆ ನ್ಯಾಯಾಲಯದ ಮೇಲೆ ಗೌರವ ಇಲ್ಲ ಅಂದರೆ ನಾವೇನು ಮಾಡೋಣ? ಬಿಜೆಪಿಯವರು ಮಂಡು ಬಿದ್ದಿದ್ದಾರೆ ಎಂದು ಹೇಳಬೇಕು ಅಷ್ಟೇ ಎಂದು ವ್ಯಂಗ್ಯವಾಡಿದ್ದಾರೆ.

Share This Article