ಪಡ್ಡೆಹುಲಿ ಹಾಡು ಕೇಳಿ ಭೇಷ್ ಅಂದ್ರು ಡಿ ಬಾಸ್!

Public TV
1 Min Read

ಗುರುದೇಶಪಾಂಡೆ ನಿರ್ದೇಶನದ ಪಡ್ಡೆಹುಲಿ ಚಿತ್ರದ ಹಾಡೀಗ ಎಲ್ಲೆಂದರಲ್ಲಿ ಹರಿದಾಡುತ್ತಾ ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿದೆ. ವಿಷ್ಣುವರ್ಧನ್ ಅವರಿಗೆ ಅರ್ಪಿಸಿರೋ ನಾ ತುಂಬಾ ಹೊಸಬ ಬಾಸು ಎಂಬ ಹಾಡು ಅತ್ಯಂತ ಕಡಿಮೆ ಅವಧಿಯಲ್ಲಿಯೇ ಲಕ್ಷ ಲಕ್ಷ ವೀವ್ಸ್ ಪಡೆದುಕೊಂಡು ಟ್ರೆಂಡಿಂಗ್ ನಲ್ಲಿದೆ. ಇದೇ ಖುಷಿಯಲ್ಲಿ ಮಿಂದೇಳುತ್ತಿದ್ದ ಚಿತ್ರತಂಡಕ್ಕೆ ಮತ್ತೊಂದು ಸಂತಸವೂ ಕೈ ಹಿಡಿದಿದೆ. ಅದಕ್ಕೆ ಕಾರಣವಾಗಿರೋದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಈ ಹಾಡಿನ ಬಗ್ಗೆ ವ್ಯಕ್ತಪಡಿಸಿರೋ ಮೆಚ್ಚುಗೆ!

ಅತ್ತ ಯೂಟ್ಯೂಬ್ ನಲ್ಲಿ ಸದರಿ ಹಾಡು ಟ್ರೆಂಡ್ ಕ್ರಿಯೇಟ್ ಮಾಡುತ್ತಲೇ ಇತ್ತ ದರ್ಶನ್ ಅವರು ಇದನ್ನು ಕೊಂಡಾಡಿದ್ದಾರೆ. ನಾಯಕನಾಗಿ ಶ್ರೇಯಸ್ ಹಾಕಿರೋ ಎಫರ್ಟ್ ಬಗ್ಗೆಯೂ ಮನದುಂಬಿ ಮೆಚ್ಚುಗೆ ಸೂಚಿಸಿದ್ದಾರೆ.

ಈ ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಂದಿರೋ ದರ್ಶನ್, ಚಿತ್ರರಂಗಕ್ಕೆ ಅನೇಕರು ಬರುತ್ತಾರೆ. ಆದರೆ ಅದಕ್ಕೆ ಬೇಕಾದ ಎಲ್ಲ ತಯಾರಿಯನ್ನೂ ಮಾಡಿಕೊಂಡು ಅಖಾಡಕ್ಕಿಳಿಯುವವರು ಕಡಿಮೆ. ಆದರೆ ಕೆ.ಮಂಜು ಅವರ ಪುತ್ರ ಶ್ರೇಯಸ್ ಸಂಪೂರ್ಣ ತಯಾರಿ ಮಾಡಿಕೊಂಡೇ ಬಂದಿದ್ದಾರೆ. ಅದು ಈಗಾಗಲೇ ಸ್ಪಷ್ಟವಾಗಿ ಕಾಣಿಸುತ್ತಿದೆ. ಶ್ರೇಯಸ್, ನಿರ್ದೇಶಕರಾದ ಗುರುದೇಶಪಾಂಡೆ ಸೇರಿ ಇಡೀ ಚಿತ್ರ ತಂಡಕ್ಕೆ ಒಳ್ಳೇದಾಗಲಿ. ಪಡ್ಡೆಹುಲಿ ಚಿತ್ರ ದೊಡ್ಡ ಮಟ್ಟದ ಯಶ ದಾಖಲಿಸಲಿ ಅಂತ ದರ್ಶನ್ ಹಾರೈಸಿದ್ದಾರೆ.

ನಾ ತುಂಬಾ ಹೊಸಬ ಬಾಸು ಹಾಡಂತೂ ಈಗ ಎಲ್ಲ ಪ್ರೇಕ್ಷಕರನ್ನೂ ಮೋಡಿ ಮಾಡಿ ಮಾಡಿದೆ. ಯೂಟ್ಯೂಬ್‍ನಲ್ಲಂತೂ ಟ್ರೆಂಡಿಂಗ್ ಅನ್ನು ಈ ಕ್ಷಣದವರೆಗೂ ಕಾಯ್ದುಕೊಂಡಿದೆ. ಶ್ರೇಯಸ್ ಎನರ್ಜಿ, ಅಭಿನಯ ಮತ್ತು ಸಾಹಿತ್ಯದ ಖದರ್ ಸೇರಿದಂತೆ ಎಲ್ಲವೂ ಜನಮನ ಸೆಳೆದುಕೊಂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *