ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (Bengaluru University) ದಲಿತ ಅಧಿಕಾರಿಗಳು, ಪ್ರೊಫೆಸರ್‌ಗಳು, ಸಿಬ್ಬಂದಿ ಸಾಮೂಹಿಕ ರಾಜೀನಾಮೆ ನೀಡಿದ ವಿಚಾರ ಹಾಗೂ ವಿವಿ ಬಗ್ಗೆ ಅನೇಕ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜ್ಞಾನಭಾರತಿ ಕ್ಯಾಂಪಸ್‌ಗೆ ಭೇಟಿ ನೀಡಿ ಪರಿಶೀಲನೆ ಮಾಡಿ, ವಿಸಿ, ಕುಲಸಚಿವರ ಜೊತೆ ಸಭೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಅವರು, ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ವಿದ್ಯಾ ದೇಗುಲ. ನಾವು ಇದರ ಆಶ್ರಯದಲ್ಲಿ ಬಂದವರು. ಹಲವು ಕಾರಣಗಳಿಗೆ ಈ ವಿವಿ ನ್ಯೂಸ್ ಆಗ್ತಿತ್ತು. ಇತ್ತೀಚೆಗೆ ಯಾವುದೇ ಗೊಂದಲ ಇರಲಿಲ್ಲ. 2 ತಿಂಗಳ ಹಿಂದೆ ಕೆಲವು ಗೊಂದಲ ಆಗಿತ್ತು. SC ಸಮುದಾಯದ ಪ್ರೊಫೆಸರ್‌ಗಳು ರಾಜೀನಾಮೆ ಕೊಟ್ಟಿದ್ದರು. ಅದರ ಬಗ್ಗೆ ತಿಳಿದುಕೊಂಡಿದ್ದೇನೆ. ಅಂಬೇಡ್ಕರ್ ಅವರ ಅಧ್ಯಯನ ಪೀಠ ಸರಿಯಾಗಿ ಬಳಕೆ ಆಗಬೇಕು. ಬಸವ ಲಿಂಗಪ್ಪ ಪೀಠ ಇದುವರೆಗೂ ಸ್ಥಾಪನೆ ಆಗಿಲ್ಲ. ಅಂಬೇಡ್ಕರ್ ಬಗ್ಗೆ ಕಳೆದ ವಾರದಲ್ಲಿ ದೊಡ್ಡ ಗೊಂದಲದ ವಾತಾವರಣ ಸೃಷ್ಟಿ ಆಗಿತ್ತು. ಇದು ವಿವಿಯಲ್ಲಿ ಆಗಬಾರದು ಎಂದು ತಿಳಿಸಿದರು. ಇದನ್ನೂ ಓದಿ: ನಮ್ಮ ವಿಶ್ವವಿದ್ಯಾಲಯದಲ್ಲಿ ದಲಿತ ವಿರೋಧಿ ನೀತಿ ಇಲ್ಲ – ಬೆಂಗಳೂರು ವಿವಿಯಿಂದ ಸ್ಪಷ್ಟನೆ
ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಭೇಟಿ – ಹಲವು ಸಮಸ್ಯೆಗಳ ಕುರಿತು ಚರ್ಚೆ.
ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಕೇಶವಪ್ರಸಾದ್ ಎಸ್ ರವರ ಜೊತೆಗೂಡಿ ಇಂದು ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಕ್ಯಾಂಪಸ್‌ಗೆ ಭೇಟಿ ನೀಡಿ, ನಮಗೆ ಸಲ್ಲಿಕೆಯಾಗಿದ್ದ ದೂರುಗಳ ಕುರಿತು ಕುಲಸಚಿವರು, ಕುಲಪತಿಗಳು ಹಾಗೂ ಇತರ ಅಧಿಕಾರಿಗಳೊಂದಿಗೆ ಸಮೀಕ್ಷೆ ನಡೆಸಿ,… pic.twitter.com/6S5rLDSBhk
— Chalavadi Narayanaswamy (@NswamyChalavadi) July 25, 2025
ಪ್ರೊಫೆಸರ್ ಒಬ್ಬರು ಬ್ಯಾಕ್ ಲ್ಯಾಗ್‌ನಲ್ಲಿ ಬಂದಿದ್ದರು. ಅಂಬೇಡ್ಕರ್ ಫೋಟೋವನ್ನು ಅವರು ಕಾಲಿಗೆ ತಾಗುವ ರೀತಿ ಇಟ್ಟುಕೊಂಡಿದ್ದರು. ಈ ಬಗ್ಗೆ ನಾನು ವಿಸಿ ಜೊತೆ ಮಾತಾಡಿದ್ದೇನೆ. ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದ್ದೇನೆ. ವಿವಿಯಲ್ಲಿರೋ ಇರೋ ಬ್ಯಾಕ್ ಲ್ಯಾಗ್ ಹುದ್ದೆ ಭರ್ತಿ ಮಾಡಬೇಕು. 1-2 ತಿಂಗಳಲ್ಲಿ ಎಲ್ಲಾ ಸಮಸ್ಯೆ ಪರಿಹಾರ ಮಾಡೋ ಭರವಸೆ ವಿಸಿ ಕೊಟ್ಟಿದ್ದಾರೆ. ವಿಸಿ ಬಗ್ಗೆ ಎಲ್ಲರೂ ಉತ್ತಮ ಅಭಿಪ್ರಾಯ ಕೊಟ್ಡಿದ್ದಾರೆ. ಒಂದು ವೇಳೆ ಸಮಸ್ಯೆ ಪರಿಹಾರ ಆಗದೇ ಹೋದ್ರೆ ಹೋರಾಟ ಮಾಡ್ತೀವಿ. ಸರ್ಕಾರದ ಗಮನಕ್ಕೆ ತರುತ್ತೇವೆ ಎಂದರು.
ವಿಶ್ವವಿದ್ಯಾಲಯದಲ್ಲಿ SC ಸಮುದಾಯಗಳಿಗೆ ಉನ್ನತ ಹುದ್ದೆ ಸಿಗುತ್ತಿಲ್ಲ ಅಂತ ಆರೋಪ ಇದೆ. ಅನುಭವ ಇರೋರನ್ನು ಅತಿಥಿ ಉಪನ್ಯಾಸಕರನ್ನು ಕೈ ಬಿಡಲಾಗಿದೆ. ಅವರನ್ನು ವಾಪಸ್ ತೆಗೆದುಕೊಳ್ಳಬೇಕು. ಸರ್ಕಾರಕ್ಕೆ ಒತ್ತಾಯ ಮಾಡ್ತೀನಿ, ಬೇರೆ ರಾಜ್ಯದ ಪ್ರೊಫೆಸರ್‌ಗಳಿಗೆ ನಮ್ಮ ವಿವಿಯಲ್ಲಿ ಅವಕಾಶ ಕೊಡಬೇಕು. ಬೇರೆ ವಿವಿ ಅವರಿಗೆ ಇಲ್ಲಿ ಅವಕಾಶ ಕೊಡಬಾರದು. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರದ ಗಮನಕ್ಕೂ ನಾನು ತರುತ್ತೇನೆ ಎಂದರು.
ಜಾತಿ ಪ್ರಭಾವ ವಿವಿಗಳಲ್ಲಿ ನಡೆಯಬಾರದು. ಇದು ರಾಜಕೀಯ ಮಾಡೋ ಜಾಗ ಅಲ್ಲ. ಇಲ್ಲಿ ಜಾತಿ ಪ್ರಭಾವ ಮಾಡೋದು, ಜಾತಿ ಒಡೆಯೋ ಕೆಲಸ ಯಾರು ಮಾಡಬಾರದು. ಬೇರೆ ಕಡೆಯಿಂದ ಪ್ರೊಫೆಸರ್‌ಗಳು ಉನ್ನತ ಹುದ್ದೆಗೆ ಬರೋದನ್ನ ಸರ್ಕಾರವೇ ತಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ವಿಶ್ವಾದ್ಯಂತ ಟಾಪ್ ವಿಜ್ಞಾನಿಗಳ ಪಟ್ಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ 8 ಪ್ರಾಧ್ಯಾಪಕರು