ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ಕೇಳಲಾಗದೇ ಭಾಷಣಕ್ಕೆ ಅಡ್ಡಿ: ಚಕ್ರವರ್ತಿ ಸೂಲಿಬೆಲೆ

Public TV
1 Min Read

ಬೆಂಗಳೂರು: ರಾಹುಲ್ ಗಾಂಧಿ ಘೋಷಣೆ ಕೂಗಿ ಭಾಷಣಕ್ಕೆ ಅಡ್ಡಿ ಪಡಿಸಿದ ಪ್ರಸಂಗದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಸ್ಪಷ್ಟನೆ ನೀಡಿದ್ದಾರೆ.

ನಾನು ಯಾವುದೇ ಚುನಾವಣಾ ಪ್ರಚಾರ ಭಾಷಣಕ್ಕೆ ಹೋಗಿರಲಿಲ್ಲ. ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ಕೂಗಲಾಗದೇ ಕಾಂಗ್ರೆಸ್ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಭಾನುವಾರ ರಾತ್ರಿ ಫೇಸ್‍ಬುಕ್ ನಲ್ಲಿ  ಸ್ಪಷ್ಟನೆ ನೀಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ಇಂದು ವಿದ್ಯಾಪೀಠದಲ್ಲಿ ವಿಷ್ಣು ಸಹಸ್ರನಾಮ ಯಜ್ಞ. ಕಳೆದ ಡಿಸೆಂಬರ್ ನಿಂದಲೇ ಶುರುವಾದ ಪಾರಾಯಣಕ್ಕೆ ಇಂದು ಮಂಗಳ ಹಾಡುವ ಕಾರ್ಯಕ್ರಮ ಇತ್ತು. ಚುನಾವಣೆಗಳು ಘೋಷಣೆಯಾಗುವ ಮುನ್ನವೇ ರಾಷ್ಟ್ರಧರ್ಮದ ಕುರಿತಂತೆ ಮಾತನಾಡಲು ಆಹ್ವಾನಿಸಲಾಗಿತ್ತು. ಇದನ್ನೂ ಓದಿ: ಸೂಲಿಬೆಲೆ ಕಾರ್ಯಕ್ರಮದಲ್ಲಿ ರಾಹುಲ್ ಘೋಷಣೆ

ವಿಷಯ ತಿಳಿದು ಬೆಳಗ್ಗಿನಿಂದ ಕಿರಿ ಕಿರಿ ಮಾಡುತ್ತಿದ್ದ ಕಾಂಗ್ರೆಸ್ಸಿನ ಕಾರ್ಯಕರ್ತರು ಕೊನೆಗೂ ಕಾರ್ಯಕ್ರಮಕ್ಕೆ ಬಂದು ದಾಂಧಲೆ ಎಬ್ಬಿಸಿದರು. ಆಶ್ಚರ್ಯವೇನು ಗೊತ್ತೇ? ಅವರು ಕೆರಳಿದ್ದು ಮೋದಿಯ ಹೆಸರಿಗಲ್ಲ. ಏಕೆಂದರೆ ಇಡಿಯ ಕಾರ್ಯಕ್ರಮದಲ್ಲಿ ಮೋದಿಯ ಹೆಸರಾಗಲಿ, ಬಿಜೆಪಿಯ ಉಲ್ಲೇಖವಾಗಲಿ ಇರಲೇ ಇಲ್ಲ. ಅವರು ಚೀರಾಡಿದ್ದು ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ಕೇಳಲಾಗದೇ. ಇನ್ನೂ ದುರಂತವೇನು ಗೊತ್ತೆ? ಇತ್ತಲಿಂದ ಭಾರತ ಮಾತೆಗೆ ಜೈಕಾರ ಹಾಕಿಸುತ್ತಿದ್ದರೆ ಎದುರಿನಲ್ಲಿ ಅವರು ರಾಹುಲ್‍ಗೆ ಜೈ ಎನ್ನುತ್ತಿದ್ದುದು. ನಾವು ರಾಷ್ಟ್ರಭಕ್ತರಾದರೆ ಅವರು ಪರಿವಾರದ ಗುಲಾಮರೆಂಬುದನ್ನು ಸಾಬೀತು ಪಡಿಸಿಯೇ ಬಿಟ್ಟರು. ನೆರೆದಿದ್ದ ಭಕ್ತರ ಸಂಯಮ ಮೆಚ್ಚಲೇಬೇಕು. ಒಂದಿನಿತೂ ವಿಚಲಿತಗೊಳ್ಳದೇ ಭಾರತದ ವೈಭವದ ಕಥನವನ್ನು ಕೇಳುತ್ತಾ ಹಾಯಾಗಿ ಕುಳಿತುಬಿಟ್ಟಿದ್ದರು.

ಈ ಭಾಗದಲ್ಲಿ ಅಭ್ಯರ್ಥಿಯ ಆಯ್ಕೆಯ ಗೊಂದಲವಿತ್ತಲ್ಲ. ಅನೇಕರು ಬೇಸರಿಸಿಕೊಂಡು ನೋಟಾ ಒತ್ತಬೇಕೆಂದಿದ್ದರಲ್ಲ. ಕಾಂಗ್ರಸ್ಸಿನ ಈ ಗೂಂಡಾ ವರ್ತನೆಯಿಂದಾಗಿ ಅವರೆಲ್ಲರೂ ಬಿಜೆಪಿಗೆ ಮತ ಹಾಕಲಿದ್ದಾರೆ. ಖಂಡಿತ ಗೆಲುವಿನ ಅಂತರ ಒಂದು ಲಕ್ಷಕ್ಕೇರುವುದರಲ್ಲಿ ಸಂಶಯವೇ ಇಲ್ಲ. ಇನ್ನೂ ಹತ್ತು ದಿನ ಬಾಕಿ ಇದೆ. ಹೀಗೇ ಕಾಂಗ್ರೆಸ್ಸಿನವರು ಎಡವಟ್ಟು ಮಾಡಿಕೊಳ್ಳುವುದಾದರೆ ಈ ಅಂತರವನ್ನು ಇನ್ನಷ್ಟು ಏರಿಸಬಹುದೇನೋ!

Share This Article
Leave a Comment

Leave a Reply

Your email address will not be published. Required fields are marked *