– ಬೆಂಗಳೂರಿಂದ ಧರ್ಮಸ್ಥಳಕ್ಕೆ ಮಹಾಯತ್ರೆ ಮಾಡೋಣ
– ಸೌಜನ್ಯ ಪರ ಸುಪ್ರೀಂ ಕೋರ್ಟ್‌ಗೆ ಹೋಗ್ತೀವಿ
ಬೆಂಗಳೂರು: ನೀನು ಇಲ್ಲಿ ಏನು ಬೇಕಿದ್ರು ಮಾಡು… ಕೋರ್ಟ್ ಮೆಟ್ಟಿಲ ಮೇಲೆ ನಾನು ತೀರ್ಮಾನ ಮಾಡುತ್ತೇನೆ ಎಂಬ ಕಾಂತಾರದ ಮಾತು ನಿಜ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಹೇಳಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಮೆಟ್ಟಿಲ ಮೇಲೆ ಅಣ್ಣಪ್ಪ ತೀರ್ಮಾನ ಮಾಡಿದ. ಮಂಜುನಾಥ ನಮ್ಮವರು ಅಂತ ಸುಮ್ಮನೆ ಇರಬಹುದು. ಆದ್ರೆ ಅಣ್ಣಪ್ಪ ಸುಮ್ಮನೆ ಇರುವುದಿಲ್ಲ. ಸೌಜನ್ಯ ತಾಯಿ ಬಂದರೆ ಮತ್ತೆ ರಿಟ್ ಅರ್ಜಿ ಹಾಕಿಸಿ ಹೋರಾಟ ನಾವು ಮಾಡ್ತೇವೆ. ಸೌಜನ್ಯಗೆ ನ್ಯಾಯ ಸಿಗಬೇಕು ಅಂತ ಯಾರು ಧ್ವನಿ ಎತ್ತಿದ್ದಾರೆ ಅವರಿಗಿಂತ ನೂರು ಪಟ್ಟು ಇಲ್ಲಿರಿವವರು ಸೌಜನ್ಯ ಪರ ಧ್ವನಿ ಎತ್ತುತ್ತೇವೆ. ಸೌಜನ್ಯ ಪರ ಹೋರಾಟಕ್ಕೆ ನಾನು ಹೋಗ್ತೆನೆ. ಸುಪ್ರೀಂ ಕೋರ್ಟ್ ಗೆ ಹೋಗಿ ಮತ್ತೆ ಸೌಜನ್ಯ ಪರ ಹೋರಾಟ ಮಾಡ್ತೆವೆ ಎಂದಿದ್ದಾರೆ.
ಅಲ್ಲದೇ ಧರ್ಮಸ್ಥಳದ ಪರವಾಗಿ ಬೆಂಗಳೂರಿಂದ ಧರ್ಮಸ್ಥಳಕ್ಕೆ ಮಹಾಯತ್ರೆ ಮಾಡೋಣ ಎಂದು ಇದೇ ವೇಳೆ ಕರೆಕೊಟ್ಟಿದ್ದಾರೆ.