– ಸುಪ್ರೀಂನಲ್ಲಿ ಬುರುಡೆ ಗ್ಯಾಂಗ್ ಪಿಐಎಲ್ ವಜಾ
– ವಿಷಯ ತಿಳಿಯದೇ ಇದ್ದರೆ ಇದೊಂದು ಬೇಜವಾಬ್ದಾರಿ ಸರ್ಕಾರ
ಬೆಂಗಳೂರು: ಬುರುಡೆ ಗ್ಯಾಂಗ್‌ನ ಮುಖವಾಡ ಮತ್ತೊಮ್ಮೆ ಬಯಲಾಗಿದೆ. ಸುಪ್ರೀಂಕೋರ್ಟ್‌ನಲ್ಲಿ (Supreme Court) ಛೀಮಾರಿ ಹಾಕಿಸಿಕೊಂಡಿದ್ದ ವಿಚಾರವನ್ನು ಮುಚ್ಚಿಟ್ಟು ಸರ್ಕಾರವನ್ನೇ ಯಾಮಾರಿಸಿದ್ದ ಬುರುಡೆ ಗ್ಯಾಂಗ್ ಹಾಗೂ ಸುಪ್ರೀಂಕೋರ್ಟ್ ವಕೀಲ ಧನಂಜಯ್ ಇಡೀ ಸಮಾಜದ ಮುಂದೆ ಕ್ಷಮೆ ಕೇಳಬೇಕು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಆಗ್ರಹಿಸಿದ್ದಾರೆ.
ಈ ವಿಚಾರವಾಗಿ `ಪಬ್ಲಿಕ್ ಟಿವಿ’ಯೊಂದಿಗೆ ಮಾತನಾಡಿದ ಅವರು, ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಬುರುಡೆ ಗ್ಯಾಂಗ್ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಹಾಕಿತ್ತು. ಅದನ್ನು ಕೋರ್ಟ್ ವಜಾಗೊಳಿಸಿತ್ತು. ಅಷ್ಟು ಮಾತ್ರವಲ್ಲದೇ, ಇದು ವೈಯಕ್ತಿಕ ಹಿತಾಸಕ್ತಿಯ ಅರ್ಜಿ ಎಂದು ಛೀಮಾರಿ ಹಾಕಿತ್ತು. ಈ ವಿಚಾರವನ್ನು ಮುಚ್ಚಿಟ್ಟು ಬುರುಡೆ ಗ್ಯಾಂಗ್ ಸರ್ಕಾರವನ್ನೇ ಯಾಮಾರಿಸಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಸಿಕ್ಕ ಅಸ್ಥಿಪಂಜರ ಗುಬ್ಬಿ ಮೂಲದ ವ್ಯಕ್ತಿಯದ್ದು!
ಈ ಬುರುಡೆ ಗ್ಯಾಂಗ್ ಮೊದಲ ದಿನದಿಂದಲೇ ಸತ್ಯವನ್ನು ಮುಚ್ಚಿಕೊಂಡು ಸುಳ್ಳಿನ ಸರಮಾಲೆಯನ್ನೇ ಕಟ್ಟಿಕೊಂಡು ಬಂದಿದೆ. ಮಾಧ್ಯಮಗಳೆಲ್ಲವು ಈ ವಿಚಾರವನ್ನು ಪ್ರಸಾರ ಮಾಡದೇ ಇರುತ್ತಿದ್ದರೆ, ಬುರುಡೆ ಗ್ಯಾಂಗ್‌ನ ನಿಜಬಣ್ಣ ಬಯಲಾಗುತ್ತಿರಲಿಲ್ಲ. ಸುಪ್ರೀಂ ಕೋರ್ಟ್‌ಯೇ ಬುರುಡೆ ಗ್ಯಾಂಗ್ ಅನ್ನು ಪೈಸಾ ಇಂಟರೆಸ್ಟ್ ಲಿಟಿಗೇಷನ್ ಎಂದು ಛೀಮಾರಿ ಹಾಕಿದ್ರೂ, ಇವರು ಸುಳ್ಳು ಹೇಳಿಕೊಂಡು ಇಲ್ಲಿವರೆಗೆ ಬಂದಿದ್ದಾರೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್ | ರಾಜ್ಯ ಸರ್ಕಾರವನ್ನೇ ಯಾಮಾರಿಸಿದ ʻಬುರುಡೆʼ ಗ್ಯಾಂಗ್ – ಸುಪ್ರೀಂ ಆದೇಶ ಮುಚ್ಚಿಟ್ಟು ಮಹಾ ಮೋಸ
ಧರ್ಮಸ್ಥಳ ವಿಚಾರದಲ್ಲಿ ಈ ಗ್ಯಾಂಗ್ ಷಡ್ಯಂತ್ರ ರೂಪಿಸಿತ್ತು. ಇದರಲ್ಲಿ ಕರ್ನಾಟಕ ಸರ್ಕಾರವೇ ಭಾಗಿಯಾಗಿದೆ ಎಂಬ ಅನುಮಾನ ಮೂಡುತ್ತಿದೆ. ಸುಪ್ರೀಂಗೆ ಪಿಐಎಲ್ ಹೋಗಿದೆ. ಅದು ಕರ್ನಾಟಕಕ್ಕೆ ಸಂಬಂಧಪಟ್ಟಿದ್ದು ಗಮನಿಸಬೇಕು ಅಂತ ಗೊತ್ತಿಲ್ಲ ಅಂದ್ರೆ ಇದು ಬೇಜಾವಾಬ್ದಾರಿ ಸರ್ಕಾರವಾಗಿದೆ. ಏನಾದ್ರೂ ನಡೆಯಲಿ, ನನ್ನ ಪಾಡಿಗೆ ನಾನು ಉಂಡ್ಕೊಂಡು, ತಿಂದ್ಕೊಂಡು ಹಾಯಾಗಿ ಇರುವಂತದ್ದ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯನವ್ರು ಹಾಗೆ ಮಾಡ್ತಾರೆ ಅಂದ್ರೆ ಅವ್ರು ಸಿಎಂ ಕುರ್ಚಿಯಿಂದ ಕೆಳಗಿಳಿದು ಬೇರೆ ಕೆಲಸ ಮಾಡಬೇಕು. ತಿಂದು, ಉಂಡು ಹಾಯಾಗಿ ಇರಬೇಕು ಅಂದ್ರೆ ಅವ್ರು ಬೇರೆ ಕೆಲಸಕ್ಕೆ ಹೋಗಬೇಕು. ಎಡಪಂಥೀಯ ಸಂಘಟನೆಗಳ ಒತ್ತಾಯಕ್ಕೆ ಎಸ್‌ಐಟಿ ರಚನೆ ಮಾಡುವಂತಾಯ್ತು ಅಂತ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ರು. ಆದ್ರೆ ಯಾವ ಸಂಘಟನೆಗಳು ಅಂತ ಬಹಿರಂಗಪಡಿಸಲಿಲ್ಲ. ಈ ವಿಚಾರದಲ್ಲಿ ಸರ್ಕಾರಕ್ಕೆ ಛೀಮಾರಿ ಹಾಕಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಸರ್ಕಾರಕ್ಕೆ ಧರ್ಮಸ್ಥಳದ ವಿರುದ್ಧ ಒಂದಾದ್ರೂ ದಾಖಲೆ ಹುಡುಕಬೇಕು ಎಂದಿತ್ತು. ಆದ್ರೆ ಯಾವ ಸಾಕ್ಷ್ಯಗಳು ಸಿಗಲಿಲ್ಲ. ಸರ್ಕಾರ ಎಸ್‌ಐಟಿ ಬಳಿ ಮಧ್ಯಂತರ ವರದಿಯನ್ನು ಕೇಳಬೇಕಿತ್ತು. ತನಿಖೆಯ ವಿವರವನ್ನ ಸಮಾಜದ ಮುಂದಿಡಬೇಕಿತ್ತು. ಮಾಧ್ಯಮಗಳು ಬುರುಡೆ ಗ್ಯಾಂಗ್ ಹಿಂದೆ ಬೀಳದಿದ್ರೆ, ಅವರನ್ನು ಸರ್ಕಾರವೇ ರಕ್ಷಣೆ ಮಾಡ್ತಿತ್ತು ಎಂದು ಆರೋಪಿಸಿದ್ದಾರೆ.
ಸುಪ್ರೀಂ ಕೋರ್ಟ್ನಲ್ಲಿ ಸೋತ ವಕೀಲ ಧನಂಜಯ್ ಒಂದು ಕಡೆಯೂ ಸೋತೆ ಅಂತ ಹೇಳಲಿಲ್ಲ. ಇದು ಬಹಳ ದುರಂತದ ವಿಚಾರ ಹಾಗೂ ಇದು ನೀವು ನಿಮ್ಮ ವೃತ್ತಿಗೆ ಮಾಡಿದ ಅವಮಾನ. ಸುಪ್ರೀಂನಿಂದ ಛೀಮಾರಿ ಹಾಕಿಸಿಕೊಂಡು, ಸುಳ್ಳುಗಳ ಮೇಲೆ ಸುಳ್ಳು ಹೇಳಿಕೊಂಡು ಬಂದಿದ್ದೀರಿ. ಧನಂಜಯ್ ಇಡೀ ಸಮಾಜದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.