ನಾನು ಚರ್ಚೆಗೆ ಬರಲು ಸಿದ್ಧ- ಸಂಬರ್ಗಿಗೆ ಸವಾಲೆಸೆದ ಚಂದ್ರಚೂಡ್

Public TV
1 Min Read

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ವಿರುದ್ಧ ಕಿಡಿಕಾರಿರುವ ಚಕ್ರವರ್ತಿ ಚಂದ್ರಚೂಡ್ ಸವಾಲೆಸೆದಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಸಂಬರ್ಗಿಗೆ ಪ್ರಶ್ನೆಗಳ ಸುರಿಮಳೆಗೈದ ಚಂದ್ರಚೂಡ್, ಅವರು ಬಂದರೆ ನಿಮ್ಮ ವಾಹಿನಿಗೆ ನಾನು ಚರ್ಚೆಗೆ ಬರಲು ಸಿದ್ಧನಿದ್ದೇನೆ ಎಂದು ನೇರವಾಗಿ ಚಾಲೆಂಜ್ ಮಾಡಿದರು.

ಮುಖವಾಡ ಕಳಚಲೆಂದೇ ನಾನು ಬಂದಿದ್ದೀನಿ. ಕಳೆದ 19 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ಸುಮಾರು ಜನರ ಮುಖವಾಡಗಳನ್ನು ಕಳಚಿದ್ದೀನಿ. ಸುಮಾರು 60ಕ್ಕೂ ಹೆಚ್ಚು ಮಾನನಷ್ಟ ಮೊಕದ್ದಮೆಗಳನ್ನು ನೋಡಿದ್ದೀನಿ. ಅಲ್ಲದೆ ಸಾಕಷ್ಟು ಹೋರಾಟಗಳನ್ನು ಮಾಡಿದ್ದೇನೆ. ಸಂಬರ್ಗಿಗೆ ಪ್ರಚಾರ ಕೊಡುತ್ತಿರುವ ಮಾಧ್ಯಮಗಳು ದುರ್ಬಳಕೆ ಆಗುತ್ತಿವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅರವಿಂದ್ ವೀಡಿಯೋ ಮಾಡಿ ಅದನ್ನು ಟ್ರೋಲಿಗನಿಗೆ ಸಂಬರ್ಗಿ ಕೊಟ್ಟ: ಚಂದ್ರಚೂಡ್

ಅವರಿಗೆ ನೆಟ್ಟಗೆ 4 ಕನ್ನಡ ವಾಕ್ಯ ಮಾತಾಡೋಕೆ ಬರುತ್ತಾ ಕೇಳಿ. ಎರಡು ಚಲಚಿತ್ರ ಮಂಡಳಿಗಳಿವೆ. ಈ ಎರಡರಲ್ಲೂ ಇವರ ಬ್ಯಾನರ್ ಇಲ್ಲ. ಒಂದು ಗೀತೆ ರಚನೆಕಾರ, ಹಾಡು ಬರೆದಿದ್ದಾರೋ ಅಥವಾ ನಟಿಸಿದ್ದಾರೋ ಏನೂ ಗೊತ್ತಿಲ್ಲ. ಎಲ್ಲೋ ಸಣ್ಣಪುಟ್ಟ ಕಡೆಗಳಲ್ಲಿ ಕಾಣಿಸಿಕೊಂಡಿದ್ದಾರೆ. 24 ಥಿಯೇಟರ್ ಗಳನ್ನು ಕೊಡಬೇಕು, ಪರಭಾಷಾ ಚಿತ್ರಗಳಿಂದ ಕನ್ನಡವನ್ನು ಕಾಪಾಡಿಕೊಳ್ಳಬೇಕು ಅನ್ನೋದು ಅಣ್ಣಾವ್ರ ಕಾಲದಿಂದಲೂ ಹೋರಾಟ ನಡೆದಿದೆ ಎಂದರು. ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅನ್ನಲು ಸಂಬರ್ಗಿ ಬಳಿ ದಾಖಲೆ ಏನಿದೆ..?: ಚಂದ್ರಚೂಡ್

ಯಾರೋ ಏನೋ ಮಾಡಿರುವುದನ್ನು ಫೇಸ್ ಬುಕ್ ಜ್ಯೋತಿಷಿ, ಭಯೋತ್ಪಾದಕನ ರೀತಿ ಕುಳಿತುಕೊಂಡು ಮಾತಾಡೋದು ಸರಿಯಲ್ಲ. ರಾಗಿಣಿ ಮತ್ತು ಸಂಜನಾಗೆ ಶಿಕ್ಷೆಯಾಗಿದ್ದಕ್ಕೆ ನಾನು ಕಾರಣ ಎಂದು ಹೇಳುತ್ತಿದ್ದಾರೆ. ಅಲ್ಲದೆ ಅನುಶ್ರೀಯವರನ್ನು ಜೈಲಿಗೆ ಕಳುಹಿಸುತ್ತೇನೆ ಎಂಬ ಹೇಳಿಕೆ ನೀಡುವುದೆಲ್ಲ ಸಮಂಜಸವಲ್ಲ. ಕನ್ನಡದ ಹೆಣ್ಣು ಮಗಳು, ಆಕೆ ತಪ್ಪು ಮಾಡಿದ್ದರೆ ಕಾನೂನು, ಸಂವಿಧಾವಿದೆ. ಸಂಬಂಧ ಪಟ್ಟ ಇಲಾಖೆಗಳಿವೆ. ಈ ರೀತಿಯ ಕುತಂತ್ರಗಳನ್ನು ನೀವು ಬೆಳೆಸಬೇಡಿ. ದಾಖಲೆ ಒದಗಿಸಲು 2 ತಿಂಗಳು ಯಾಕೆ ಬೇಕು ಎಂದು ಪ್ರಶ್ನಿಸುವ ಮೂಲಕ ಸಂಬರ್ಗಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್

Share This Article
Leave a Comment

Leave a Reply

Your email address will not be published. Required fields are marked *