ವಿಶ್ವನಾಥ್ ಜೀ ಅಲಿಯಾಸ್ ಚನ್ನನಾಯ್ಕ್ ಪತ್ನಿಗೆ ಬೆದರಿಕೆ ಹಾಕಿದ್ದ ಚೈತ್ರಾ ಕುಂದಾಪುರ!

By
1 Min Read

ಬೆಂಗಳೂರು: ಯಾರ ಮುಂದೆ ಆದರೂ ನನ್ನ ಹೆಸರನ್ನು ಬಾಯ್ಬಿಟ್ಟರೆ ನಿಮಗೆ ತೊಂದರೆಯಾಗುತ್ತದೆ ಎಂದು ಚನ್ನನಾಯ್ಕ್ (Channa Naik) ಪತ್ನಿಗೆ ವಂಚಕಿ ಚೈತ್ರಾ ಕುಂದಾಪುರ (Chaitra Kundapura) ಬೆದರಿಕೆ ಹಾಕಿದ್ದಾರೆ ಎಂಬ ವಿಚಾರವೊಂದು ಇದೀಗ ಬಯಲಾಗಿದೆ.

ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಾಯ್ಕ್ ಪತ್ನಿ, ಯಾರಾದ್ರೂ ಬಂದು ನಮ್ಮ ಬಗ್ಗೆ ಕೇಳಿದ್ರೆ ಯಾರಿಗೂ ಹೇಳಬೇಡಿ. ನಮ್ಮ ಹೆಸರನ್ನೂ ಹೇಳಬೇಡಿ, ನಮ್ಮ ನಂಬರ್ ಕೂಡ ಕೊಡಬೇಡಿ. ಒಂದೆರಡು ದಿನಗಳಲ್ಲಿ ನಾವು ಸೆಟ್ಲ್ ಮೆಂಟ್ ಮಾಡಿಕೊಳ್ಳುತ್ತಾ ಇದ್ದೀವಿ. ನನ್ನ ಹೆಸರನ್ನು ಹೇಳಿದ್ರೆ ನಿಮಗೆ ತೊಂದರೆ ಎಂದು ಚೈತ್ರಾ ಬೆದರಿಕೆ ಹಾಕಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ; ಡೀಲ್‍ನಲ್ಲಿ ‘ವಿಶ್ವನಾಥ್‌ ಜೀʼ ಪಾತ್ರಧಾರಿ ಚನ್ನನಾಯ್ಕ್ ತನ್ನ ಪಾತ್ರದ ಬಗ್ಗೆ ವಿವರಿಸಿದ್ದು ಹೀಗೆ..

ಆಕೆಯಿಂದ ನಮ್ಮ ಯಜಮಾನರು ಹಾಳಾಗಿ ಹೋದರು ಎಂದು ನಾಯ್ಕ್ ಪತ್ನಿ ಕಣ್ಣೀರು ಹಾಕಿದ್ದಾರೆ. ವಂಚನೆ ಪ್ರಕರಣದಲ್ಲಿ ವಿಶ್ವನಾಥ್ ಜೀ ಪಾತ್ರ ನಿರ್ವಹಿಸಿದ್ದ ಚನ್ನ ನಾಯ್ಕ್‍ನನ್ನ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಚೈತ್ರಾ ಕುಂದಾಪುರ ಮತ್ತು ತಂಡವನ್ನ ಸಿಸಿಬಿ ಪೊಲೀಸರು ಬಂಧಿಸಿದ್ದು, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೋರ್ಟ್ ಒಪ್ಪಿಸಿದೆ. ಈ ಬೆನ್ನಲ್ಲೇ 5ನೇ ಆರೋಪಿಯನ್ನ ಬಂಧಿಸಲಾಗಿದೆ. ಇದನ್ನೂ ಓದಿ; ಗಗನ್, ಧನಂಜಯ್, ಚೈತ್ರಾ ಕುಂದಾಪುರ ಪರಿಚಯವಾಗಿದ್ದು ಹೇಗೆ?: ಡೀಲ್ ಕೇಸ್‍ನ ಸಂಪೂರ್ಣ ಕಥೆ ಬಿಚ್ಚಿಟ್ಟ ಚನ್ನನಾಯ್ಕ್

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್