ಚೈತ್ರಾ ಗ್ಯಾಂಗ್ ವಂಚನೆ ಪ್ರಕರಣ – ಸಿಸಿಬಿಯಿಂದ ಸ್ಥಳ ಮಹಜರು

By
1 Min Read

ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಕೋಟಿ ಕೋಟಿ ವಂಚಿಸಿರುವ (Fraud Case) ಚೈತ್ರಾ ಕುಂದಾಪುರ (Chaitra Kundapura) ಗ್ಯಾಂಗ್ ವಿರುದ್ಧದ ತನಿಖೆ ಚುರುಕುಗೊಂಡಿದೆ. ತನಿಖಾಧಿಕಾರಿಗಳು ಪ್ರಕರಣ ನಡೆದ ಸ್ಥಳಗಳ ಮಹಜರು ನಡೆಸಿದ್ದಾರೆ.

ಈಗಾಗಲೇ ಮಂಗಳೂರಿಗೆ (Mangaluru) ತೆರಳಿರುವ ಅಧಿಕಾರಿಗಳು ಮೂರು ಸ್ಥಳಗಳಲ್ಲಿ ಮಹಜರು ನಡೆಸಲಿದ್ದಾರೆ. ಉದ್ಯಮಿಯನ್ನು ಭೇಟಿಯಾದ ಜಾಗ, ಮಾತುಕತೆ ನಡೆದ ಜಾಗ ಹಾಗೂ ಹಣ ಪಡೆದ ಜಾಗಗಳ ಮಹಜರು ನಡೆಯಲಿದೆ. ಈಗಾಗಲೇ ವಂಚಕರ ಗ್ಯಾಂಗ್ ಉದ್ಯಮಿಯನ್ನು ಭೇಟಿಯಾದ ಬೆಂಗಳೂರಿನ ನಾರಾಯಣ ಗುರು ಕೋ ಅಪರೇಟಿವ್ ಬ್ಯಾಂಕ್, ಗೋವಿಂದ ಬಾಬು ಕಚೇರಿ ಹಾಗೂ ಕುಮಾರ ಕೃಪಾದಲ್ಲಿ ಸಿಸಿಬಿ ಪೊಲೀಸರು ಮಹಜರು ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟ ಒಂದಷ್ಟು ದಾಖಲೆಗಳ ಮಾಹಿತಿಯನ್ನು ಸಿಸಿಬಿ ಪೊಲೀಸರು (CCB) ಕಲೆಹಾಕಿದ್ದರು. ಇದನ್ನೂ ಓದಿ: ಚೈತ್ರಾ ಗ್ಯಾಂಗ್ ಮಾದರಿಯಲ್ಲೇ ಮತ್ತೊಂದು ಪ್ರಕರಣ – ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಲಕ್ಷ ಲಕ್ಷ ವಂಚನೆ

ಕುಮಾರ ಕೃಪಾದಲ್ಲಿ ಆರೋಪಿಗಳು ಚೆನ್ನನಾಯ್ಕ್ ಹೆಸರಲ್ಲಿ ನಕಲಿ ಪಾತ್ರಧಾರಿಯನ್ನು ಸೃಷ್ಟಿಸಿ ನಾಟಕವಾಡಿದ್ದರು. ಈ ವೇಳೆ ಕೇಂದ್ರ ಚುನಾವಣಾ ಸಮಿತಿ ಸದಸ್ಯರು ಬಂದಿದ್ದಾರೆ ಎಂದು ಕತೆ ಹೆಣೆದಿದ್ದರು. ಈಗ ತನಿಖೆ ಚುರುಕುಗೊಂಡಿದ್ದು ಮತ್ತಷ್ಟು ಮಹತ್ವದ ಮಾಹಿತಿಗಳು ಸಂಗ್ರಹದ ಬಳಿಕ ಪ್ರಕರಣದ ಮತ್ತಷ್ಟು ವಿಚಾರಗಳು ಬೆಳಕಿಗೆ ಬರಲಿವೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಗೆಳೆಯ ಶ್ರೀಕಾಂತ್ ವಿರುದ್ಧ ಮತ್ತೊಂದು ಸೆಕ್ಷನ್ ದಾಖಲಾಗಿದೆ. ಬಂಡೆಪಾಳ್ಯ ಠಾಣೆಯಲ್ಲಿ ಸಿಸಿಬಿ ಪೊಲೀಸರು ಐಪಿಸಿ ಸೆಕ್ಷನ್ 201ನ್ನು ಹೊಸದಾಗಿ ಸೇರಿಸಿದ್ದಾರೆ. ಸಿಸಿಬಿ ತನಿಖೆ ವೇಳೆ ಚೈತ್ರಾ ಹಾಗೂ ಗೆಳೆಯ ಆರೋಪಿ ಶ್ರೀಕಾಂತ್ ಕಳ್ಳಾಟ ಬಯಲಾಗಿದ್ದು, ಶ್ರೀಕಾಂತ್ ಮೊಬೈಲ್ ಸಂಪೂರ್ಣ ನಾಶ ಮಾಡಲಾಗಿದೆ ಎಂಬ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: ಚೈತ್ರಾ ಗೆಳೆಯ ಶ್ರೀಕಾಂತ್‌ ವಿರುದ್ಧದ ಕೇಸ್‌ಗೆ ಮತ್ತೊಂದು ಸೆಕ್ಷನ್‌ ದಾಖಲು

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್