‘ಉತ್ತರಕಾಂಡ’ ಚಿತ್ರದಲ್ಲಿ ಲಚ್ಚಿ ಪಾತ್ರ ಬಣ್ಣಿಸಿದ ಚೈತ್ರಾ ಆಚಾರ್

Public TV
1 Min Read

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar), ಡಾಲಿ ನಟನೆಯ ‘ಉತ್ತರಕಾಂಡ’ ಸಿನಿಮಾದಲ್ಲಿ ‘ಟೋಬಿ’ (Toby Film) ನಟಿ ಎಂಟ್ರಿ ಕೊಟ್ಟಿದ್ದಾರೆ. ‘ಲಚ್ಚಿ’ ಪಾತ್ರಕ್ಕೆ ಚೈತ್ರಾ ಆಚಾರ್ (Chaithra Achar) ಬಣ್ಣ ಹಚ್ಚಲಿದ್ದಾರೆ. ಹಾಗಾದ್ರೆ ಚಿತ್ರದಲ್ಲಿ ಚೈತ್ರಾ ಪಾತ್ರ ಹೇಗಿದೆ? ಎಂಬುದನ್ನು ನಟಿ ಪಬ್ಲಿಕ್ ಟಿವಿ ಡಿಜಿಟಲ್‌ಗೆ ನಟಿ ವಿವರಿಸಿದ್ದಾರೆ.

ಉತ್ತರ ಕರ್ನಾಟಕದ ಬಿಜಾಪುರದಲ್ಲಿ ವಾಸಿಸುತ್ತಿರುವ ಹೆಣ್ಣು ಮಗಳು. ನಾನು ಇದುವರೆಗೂ ಮಾಡಿರುವ ಪಾತ್ರಕ್ಕಿಂತ ಇದು ವಿಭಿನ್ನವಾಗಿದೆ. ನೈಜತೆಗೆ ಲಚ್ಚಿ ಪಾತ್ರ ಹತ್ತಿರವಿದೆ. ಜೀವನದಲ್ಲಿ ತುಂಬಾ ಆಸೆ ಇರುವಂತಹ ಹುಡುಗಿ, ಹೀಗೆ ಬದುಕಬೇಕೆಂದು ಆಸೆಗಳಿರುತ್ತದೆ. ತುಂಬಾ ಸೆನ್ಸಿಟಿವ್ ಆಗಿರುವ ಪಾತ್ರ ಇದಾಗಿದ್ದು, ಅದ್ಭುತವಾಗಿದೆ ಎಂದಿದ್ದಾರೆ ಚೈತ್ರಾ ಆಚಾರ್. ಇದನ್ನೂ ಓದಿ:ಶ್ರೀಲೀಲಾ ಕೈಬಿಟ್ಟ ಚಿತ್ರಕ್ಕೆ ರಾಶಿ ಖನ್ನಾ ಎಂಟ್ರಿ

ಮದುವೆಯಾಗಿರುವ ಯಂಗ್ ಹುಡುಗಿಯ ಪಾತ್ರವಾಗಿದ್ದು, ಚಿತ್ರತಂಡದ ಜೊತೆ ಕೈಜೋಡಿಸಿರುವುದಕ್ಕೆ ಖುಷಿಯಿದೆ ಎಂದಿದ್ದಾರೆ. ತಮ್ಮ ಪಾತ್ರಕ್ಕಾಗಿ ಸಕಲ ತಯಾರಿ ಮಾಡಿಕೊಂಡಿರುವುದಾಗಿ ನಟಿ ತಿಳಿಸಿದ್ದಾರೆ. ಇದನ್ನೂ ಓದಿ:ಮಾಲಿವುಡ್ ನಟ ಮೋಹನ್‌ಲಾಲ್‌ರನ್ನು ಭೇಟಿಯಾದ ರಿಷಬ್ ಶೆಟ್ಟಿ

ಚೈತ್ರ ಆಚಾರ್ ‘ಉತ್ತರಕಾಂಡ’ (Uttarakanda Film) ತಾರಾಬಳಗಕ್ಕೆ ಸೇರ್ಪಡೆ ಆಗಿದ್ದು, ಈಗಾಲೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ‘ಉತ್ತರಕಾಂಡ’ ಒಂದು ಆ್ಯಕ್ಷನ್ ಡ್ರಾಮಾ ಚಿತ್ರವಾಗಿದ್ದು, ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸಲಿದ್ದಾರೆ. ಕಾರ್ತಿಕ್ ಗೌಡ- ಯೋಗಿ ಜಿ.ರಾಜ್ ಕೆಆರ್‌ಜಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ.

ಅಂದಹಾಗೆ, ಟೋಬಿ, ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ, ಗಿಲ್ಕಿ, ಆ ದೃಶ್ಯ, ತಲೆದಂಡ, ಬ್ಲಿಂಕ್ ಸಿನಿಮಾಗಳ ಮೂಲಕ ಚೈತ್ರಾ ಆಚಾರ್ ಮನಗೆದ್ದಿದ್ದಾರೆ. ಗಾಯನದ ಮೂಲಕ ಕೂಡ ಸೈ ಎನಿಸಿಕೊಂಡಿದ್ದಾರೆ. ಉತ್ತರಕಾಂಡ ಚಿತ್ರದ ಅಪ್‌ಡೇಟ್ ಕೇಳಿ ಅಭಿಮಾನಿಗಳು ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.

Share This Article