ಚಡ್ಡಿ ಚಿಕ್ಕಿ ಸೋನು ಗೌಡ: ಏನ್ ಹಾವಳಿ ಗುರು ಎಂದಿದ್ದಾರೆ ಫ್ಯಾನ್ಸ್

By
2 Min Read

ಬಿಗ್ ಬಾಸ್ ಮಾಜಿ ಸ್ಪರ್ಧಿ ಸೋನು ಗೌಡ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಹಾಟ್ (Hot) ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದ ಸೋನು, ಈ ಬಾರಿ ಕೆಂಪು ಚಡ್ಡಿ, ಬಿಳಿ ಟಿ ಶರ್ಟ್ ನಲ್ಲಿ ಮತ್ತೆ ಪಡ್ಡೆಗಳ ಹೃದಯಕ್ಕೆ ಬೆಂಕಿ ಹಚ್ಚಿದ್ದಾರೆ. ಈ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಸೋನು ಗೌಡ (Sonu Srinivas Gowda) ಒಂದರ ಮೇಲೊಂದು ಫೋಟೋಗಳನ್ನು ಶೇರ್ ಮಾಡುತ್ತಲೇ ಇದ್ದಾರೆ. ಆ ಫೋಟೋಗಳು ಕೂಡ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ನೆಗೆಟಿವ್ ಕಾಮೆಂಟ್ ಗಳ ಮಹಾಪುರವೇ ಹರಿದು ಬರುತ್ತಿವೆ. ಇಂತಹ ಕಾಮೆಂಟ್ ಗಳಿಗೆ ಉತ್ತರ ಕೊಡುವಂತೆ ಮತ್ತೊಂದು ಫೋಟೋ ಈ ಹಿಂದೆ ಶೇರ್ ಮಾಡಿದ್ದರು. ಆ ಫೋಟೋದಲ್ಲಿ ಅವರು ಹಳದಿ ಸೀರೆ ತೊಟ್ಟಿದ್ದರು.

ನಮ್ಮ ನೋಡುವ ಕಣ್ಣುಗಳು ಹೇಗಿರುತ್ತವೋ ಹಾಗೆ ಜನರು ಕಾಣುತ್ತಾರೆ ಎನ್ನುವುದು ಲೋಕರೂಢಿ. ಅದನ್ನು ಹೇಳುವ ರೀತಿಯಲ್ಲಿ ಹಳದಿ ಸೀರೆಯುಟ್ಟು ಹಳದಿ ಕಂಗಳಿಗೆ ಉತ್ತರಿಸಿದ್ದಾರೆ ಎಂದು ಹೇಳಲಾಗುತ್ತಿದೆ.  ಹಳದಿ ತೆಳುವಾದ ಸೀರೆಯಲ್ಲಿ ಮತ್ತೆ ಹಾಟ್ ಹಾಟ್ ಆಗಿ ಸೋನು ಕಾಣಿಸಿಕೊಂಡಿದ್ದು, ನೀವು ಏನೇ ಕಾಮೆಂಟ್ ಬರೆದರೂ ನಾನು ಇರುವುದೇ ಹೀಗೆ ಎಂದು ಸಾರಿದ್ದರು.

ಈ ಹಿಂದೆಯೂ ಅವರು ಮಾಲ್ಡೀವ್ಸ್ (Maldives) ವೆಕೇಷನ್ ಎಂಜಾಯ್ ಮಾಡಿದ್ದರು. ಆ ವಿವರವನ್ನು ಫೋಟೋಗಳ ಮೂಲಕ ಹಂಚಿಕೊಂಡಿದ್ದರು. ಒಳ ಉಡುಪಿನ ಫೋಟೋ ಶೇರ್ ಮಾಡಿ ವಿಚಿತ್ರ ಪೋಸ್ ಕೊಟ್ಟಿದ್ದ ನಟಿ ಬಿಕಿನಿ ಫೋಟೋ ಕೂಡ ಶೇರ್ ಮಾಡಿದ್ದರು. ಆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದವು.

ಕಪ್ಪು ಬಣ್ಣದ ಬಿಕಿನಿ ಧರಿಸಿ ಕ್ಯಾಮೆರಾ ಕಣ್ಣಿಗೆ ಸಖತ್ ಹಾಟ್ ಆಗಿ ಪೋಸ್ ಕೊಟ್ಟಿದ್ದರು. ವಿವಿಧ ಭಂಗಿಗಳ ಫೋಟೋಗಳನ್ನ ನಟಿ ಶೇರ್ ಮಾಡಿದ್ದರು. ಸೋನು ಅವತಾರಕ್ಕೆ ಒಂದಿಷ್ಟು ಜನ ಮೆಚ್ಚುಗೆ ಸೂಚಿಸಿದ್ರೆ, ಮತ್ತೊಂದಿಷ್ಟು ಜನ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದರು.

 

ತನ್ನ ವಿಚಾರದಲ್ಲಿ ಯಾರಾದರೂ ಟ್ರೋಲ್ ಮಾಡಿದರೆ ಕಣ್ಣೀರು ಹಾಕುವ ಸೋನು ಶ್ರೀನಿವಾಸ್ ಗೌಡ, ಟ್ರೋಲ್ ಆಗುವಂತಹ ಹಲವಾರು ವಿಚಾರಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಹಾಗಾಗಿಯೇ ಟ್ರೋಲ್ ಮಾಡುವವರು ಇವರ ವಿಡಿಯೋಗಾಗಿ ಕಾಯುತ್ತಿರುತ್ತಾರೆ ಎನ್ನುವುದು ಸುಳ್ಳಲ್ಲ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್