ಕ್ಯಾನ್ಸರ್‌ನಿಂದ ನಟಿ ಪೂನಂ ಪಾಂಡೆ ನಿಧನ

Public TV
1 Min Read

ಬಾಲಿವುಡ್ ನಟಿ ಪೂನಂ ಪಾಂಡೆ (Poonam Pandey) ವಿಧಿವಶರಾಗಿದ್ದಾರೆ. ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೂನಂ ಇದೀಗ 32ನೇ ವಯಸ್ಸಿಗೆ ನಿಧನರಾಗಿದ್ದಾರೆ. ಅವರ ಹಠಾತ್‌ ನಿಧನ ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದೆ.

ಮಾಡೆಲ್ ಕಂ ನಟಿಯಾಗಿದ್ದ ಪೂನಂ ಪಾಂಡೆ ಸದಾ ಕಾಂಟ್ರವರ್ಸಿಗಳಿಂದ ಸದ್ದು ಮಾಡುತ್ತಿದ್ದರು. ಇದೀಗ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟಿ ಪೂನಂ ಇಂದು (ಫೆ.2)ರಂದು ಇಹಲೋಕ ತ್ಯಜಿಸಿದ್ದಾರೆ.ಇದನ್ನೂ ಓದಿ:ತಂದೆ ಸಿ.ವಿ ಶಿವಶಂಕರ್ ಹಾದಿಯಲ್ಲಿ ಪುತ್ರ ವೆಂಕಟ್ ಭಾರದ್ವಾಜ್!

 

View this post on Instagram

 

A post shared by Poonam Pandey (@poonampandeyreal)

ಪೂನಂ ಪಾಂಡೆ ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಲಾಗಿದೆ. ಇಂದು ಮುಂಜಾನೆ ಸಾಕಷ್ಟು ಕಷ್ಟಕರವಾಗಿತ್ತು. ಸರ್ವಿಕಲ್ ಕ್ಯಾನ್ಸರ್‌ನಿಂದ ನಮ್ಮ ಪ್ರೀತಿಯ ಪೂನಂ ಪಾಂಡೆ ಅವರನ್ನು ಕಳೆದುಕೊಂಡಿದ್ದೇವೆ. ಈ ದುಃಖದ ಸಂದರ್ಭದಲ್ಲಿ ನಮಗೆ ಪ್ರೈವಸಿ ನೀಡಿ ಎಂದು ಪೋಸ್ಟ್ ಮಾಡಲಾಗಿದೆ.

ಅಂದಹಾಗೆ, ಪೂನಂ ಪಾಂಡೆ ಕನ್ನಡ ಸಿನಿಮಾವೊಂದರಲ್ಲಿ ನಟಿಸಿದ್ದರು. ‘ಲವ್ ಈಸ್ ಪಾಯಿಸನ್’ ಎಂಬ ಸಿನಿಮಾದಲ್ಲಿ ಐಟಂ ಡ್ಯಾನ್ಸ್ ಮಾಡಿದ್ದರು.

Share This Article