ಬೆಳ್ಳಿಹಬ್ಬ ಸಂಭ್ರಮದ ವೇಳೆ ಅವಘಡ – ಐರನ್‌ ಕೇಜ್‌ನಿಂದ ಕೆಳಗೆ ಬಿದ್ದು ವಿಸ್ಟೆಕ್ಸ್ CEO ಸಾವು

Public TV
1 Min Read

ಹೈದರಾಬಾದ್: ಇಲ್ಲಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಖಾಸಗಿ ಸಂಸ್ಥೆಯೊಂದರ ಬೆಳ್ಳಿಹಬ್ಬದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಅವಘಡದಲ್ಲಿ ಖಾಸಗಿ ಸಂಸ್ಥೆಯೊಂದರ ಸಿಇಒ ಸಾವನ್ನಪ್ಪಿದ್ದು, ಮತ್ತೊಬ್ಬ ಅಧಿಕಾರಿ ಗಂಭೀರ ಗಾಯಗೊಂಡಿದ್ದಾರೆ.

ಗುರುವಾರ ಸಂಜೆ ಸಂಭ್ರಮಾಚರಣೆ ವೇಳೆ ವಿಸ್ಟೆಕ್ಸ್ ಸಿಇಒ (Vistex CEO) ಸಂಜಯ್ ಷಾ ಮತ್ತು ಅವರ ಸಹೋದ್ಯೋಗಿ ಇಬ್ಬರನ್ನೂ ಐರನ್‌ ಕೇಜ್‌ನಲ್ಲಿ ಇರಿಸಲಾಗಿತ್ತು. ಅದನ್ನು ವೇದಿಕೆಯಲ್ಲಿ ಎತ್ತರದಿಂದ ಕೆಳಕ್ಕೆ ಇಳಿಸಬೇಕಾಗಿತ್ತು. ಇಳಿಸುವಾಗ ಇಬ್ಬರೂ ಸಂಭ್ರಮದಲ್ಲಿ ನೃತ್ಯ ಮಾಡುತ್ತಿದ್ದರು. ಈ ವೇಳೆ ಅಚಾನಕ್‌ ಐರನ್‌ ಕೇಜ್ ಮಗುಚಿದೆ. ಇಬ್ಬರೂ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಇದನ್ನೂ ಓದಿ: ಡಿವೋರ್ಸ್‌ ವದಂತಿ ಬೆನ್ನಲ್ಲೇ ಸಾನಿಯಾಗೆ ಕೈಕೊಟ್ಟ ಶೋಯೆಬ್‌ ಮಲಿಕ್‌ – ನಟಿ ಸನಾ ಜಾವೇದ್‌ ಕೈಹಿಡಿದ ಪಾಕ್‌ ಕ್ರಿಕೆಟಿಗ!

ಕೆಳಗೆ ಬಿದ್ದ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಸಿಇಒ ಸಂಜಯ್ ಷಾ ಚಿಕಿತ್ಸೆಯಲ್ಲಿ ಸಾವನ್ನಪ್ಪಿದ್ದಾರೆ. ಅವರ ಸಹೋದ್ಯೋಗಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಂಪನಿಯ ಮತ್ತೊಬ್ಬ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಫಿಲ್ಮ್ ಸಿಟಿ ಈವೆಂಟ್ ಮ್ಯಾನೇಜ್‌ಮೆಂಟ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಕಠಿಣ ವ್ರತ – ಪ್ರತಿದಿನ 1 ಗಂಟೆ ವಿಶೇಷ ಮಂತ್ರ ಪಠಣ

Share This Article