ನಾಗಿಣಿ 2 ಧಾರಾವಾಹಿಗೆ ಬಂದ ತಿಥಿ ಖ್ಯಾತಿಯ ಸೆಂಚ್ಯುರಿ ಗೌಡ, ಗಡ್ಡಪ್ಪ

Public TV
1 Min Read

ತಿಥಿ ಚಿತ್ರ ಖ್ಯಾತಿಯ ಸೆಂಚ್ಯುರಿ ಗೌಡ ಮತ್ತು ಗಡ್ಡಪ್ಪ ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರದ್ದೇ ಪ್ರಧಾನ ಭೂಮಿಕೆ ಇರುವ ಹಲವು ಚಿತ್ರಗಳು ತೆರೆ ಕಂಡಿವೆ. ತಿಥಿಯ ಹೊರತಾಗಿ ಬಹುತೇಕ ಚಿತ್ರಗಳು ಇವರನ್ನು ಕಾಮಿಡಿ ಪೀಸ್ ಗಳಂತೆಯೇ ಬಳಸಿಕೊಂಡಿದ್ದರಿಂದ ಅವರಿಗೂ ಸ್ವತಃ ಬೇಸರವಾಗಿತ್ತು. ಹಾಗಾಗಿ ಚಿತ್ರರಂಗದಿಂದ ಕೆಲ ತಿಂಗಳಿಂದ ದೂರವಿದ್ದರು. ಇದನ್ನೂ ಓದಿ : ಪುನೀತ್ ಅವರ ದ್ವಿತ್ವ ಸಿನಿಮಾದ ಮೇಲೆ ಹಲವರ ಕಣ್ಣು

ಇದೀಗ ಮತ್ತೆ ಗಡ್ಡಪ್ಪ ಹಾಗೂ ಸೆಂಚ್ಯುರಿ ಗೌಡ ಮುಖಕ್ಕೆ ಬಣ್ಣ ಹಚ್ಚಿದ್ದಾರೆ. ಆದರೆ, ಅವರು ಈ ಬಾರಿ ಸಿನಿಮಾದಲ್ಲಿ ನಟಿಸುತ್ತಿಲ್ಲ ಕಿರುತೆರೆ ಜಗತ್ತಿಗೆ ಹಾರಿ ಬಂದಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ 2 ಚಿತ್ರದಲ್ಲಿ ಅವರು ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಇವರ ನಟನೆಯ ಎಪಿಸೋಡ್ ಕೂಡ ಪ್ರಸಾರವಾಗಿದೆ. ಇದನ್ನೂ ಓದಿ : ಹರ್ಷ ಸಾವಿಗೆ ಸ್ಯಾಂಡಲ್ ವುಡ್, ಬಾಲಿವುಡ್ ಕಲಾವಿದರ ಆಕ್ರೋಶ

ತಿಥಿ ಸಿನಿಮಾದ ಮೂಲಕ ಚಿತ್ರೋದ್ಯಮಕ್ಕೆ ಪರಿಚಯವಾದವರು ಸೆಂಚ್ಯುರಿ ಗೌಡ ಮತ್ತು ಗಡ್ಡಪ್ಪ. ಜೀವನದಲ್ಲಿ ಯಾವತ್ತೂ ನಟಿಸಿದ ಈ ಇಳಿವಯಸ್ಸಿನ ಕಲಾವಿದರು, ಮೊದಲ ಸಿನಿಮಾದಲ್ಲಿಯೇ ನೈಜವಾಗಿ ನಟಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ಇಡೀ ಚಿತ್ರಜಗತ್ತಿಗೆ ಪರಿಚಯವಾದರು. ಆನಂತರ ಬಂದ ಅವರ ಸಿನಿಮಾಗಳು ಪ್ರೇಕ್ಷಕರಿಗೂ ತಲುಪಲಿಲ್ಲ, ಯಶಸ್ಸೂ ಕಾಣಲಿಲ್ಲ. ಆದರೂ, ಹಲವು ಚಿತ್ರಗಳಲ್ಲಿ ನಟಿಸಿದರು. ಇದನ್ನೂ ಓದಿ : ಸ್ಮಾರಕವಾಗಲಿದೆ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಮನೆ

ಇದೀಗ ಕಿರುತೆರೆಗೆ ಬರುವ ಮೂಲಕ ಮತ್ತೊಂದು ಇನ್ನಿಂಗ್ಸ್ ಶುರು ಮಾಡಿದ್ದಾರೆ. ಎಷ್ಟು ಕಂತುಗಳಲ್ಲಿ ಇವರು ಇರಲಿದ್ದಾರೆ ಎನ್ನುವುದೇ ಕುತೂಹಲ.

Share This Article
Leave a Comment

Leave a Reply

Your email address will not be published. Required fields are marked *