ಲೈಟ್ ಚಾಪರ್‌ಗಾಗಿ ಹೆಚ್‍ಎಎಲ್‍ನೊಂದಿಗೆ 8073.17 ಕೋಟಿ ರೂ. ಒಪ್ಪಂದ ಮಾಡಿಕೊಂಡ ರಕ್ಷಣಾ ಸಚಿವಾಲಯ

Public TV
1 Min Read

ನವದೆಹಲಿ: ಭಾರತೀಯ ಸೇನೆ (Indian Army) ಮತ್ತು ಕೋಸ್ಟ್ ಗಾರ್ಡ್‍ಗಾಗಿ 34 ಸುಧಾರಿತ ಲಘು ಹೆಲಿಕಾಪ್ಟರ್‌  ಮತ್ತು ಅದಕ್ಕೆ ಸಂಬಂಧಿಸಿದ ಸಲಕರಣೆಗಳಿಗಾಗಿ ರಕ್ಷಣಾ ಸಚಿವಾಲಯವು ಬೆಂಗಳೂರಿನ (Bengaluru) ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‍ನೊಂದಿಗೆ 8073.17 ಕೋಟಿ ರೂ. ಮೌಲ್ಯದ ಎರಡು ಒಪ್ಪಂದಗಳಿಗೆ ಸಹಿ ಹಾಕಿದೆ.

34 ಧ್ರುವ ಎಮ್‍ಕೆ ಹೆಲಿಕಾಪ್ಟರ್‌ಗಳಲ್ಲಿ ಸೇನೆಯು 25 ಮತ್ತು ಕೋಸ್ಟ್ ಗಾರ್ಡ್ 9ನ್ನು ಪಡೆಯಲಿದೆ ಎಂದು ಸಚಿವಾಲಯ ತಿಳಿಸಿದೆ. ಭದ್ರತಾ ಕ್ಯಾಬಿನೆಟ್ ಸಮಿತಿ (ಸಿಸಿಎಸ್) ಕಳೆದ ವಾರ ಎರಡು ಖರೀದಿ ಯೋಜನೆಗಳಿಗೆ ಅನುಮತಿ ನೀಡಿತ್ತು.

ALH Mk III MR ಹೆಲಿಕಾಪ್ಟರ್‌ನ್ನು ಸೈನಿಕರನ್ನು ಕರೆದೊಯ್ಯಲು, ಹುಡುಕಾಟ ಮತ್ತು ಅಪಘಾತದ ವೇಳೆ ರಕ್ಷಣಾ ಕಾರ್ಯಾಚರಣೆಗಾಗಿ ವಿನ್ಯಾಸಗೊಳಿಸಲಾಗಿದೆ.

ಈ ಹೆಲಿಕಾಪ್ಟರ್, ಸಿಯಾಚಿನ್ ಗ್ಲೇಸಿಯರ್ ಮತ್ತು ಲಡಾಖ್‍ನಂತಹ ಎತ್ತರದ ಪ್ರದೇಶಗಳಲ್ಲಿ ತನ್ನ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದೆ. ಸಮುದ್ರ ಮತ್ತು ಭೂಮಿಯ ಮೇಲಿನ ಪ್ರತಿಕೂಲ ವಾತಾವರಣದ ಪರಿಸ್ಥಿತಿಗಳಲ್ಲಿಯೂ ಇದು ತನ್ನ ಸಾಮಥ್ರ್ಯವನ್ನು ಸಾಬೀತುಪಡಿಸಿದೆ.

Share This Article