ಕಾಶ್ಮೀರದ ಹತ್ಯೆಗಳಿಗೆ ಪಾಕಿಸ್ತಾನವನ್ನು ದೂರಿದ ಕೇಂದ್ರ

Public TV
1 Min Read

ನವದೆಹಲಿ: ಕಾಶ್ಮೀರದ ಕಣಿವೆಯಲ್ಲಿ ಹೆಚ್ಚುತ್ತಿರುವ ಹಿಂಸಾಚಾರ ಹಾಗೂ ಹತ್ಯೆಗೆ ಕೇಂದ್ರ ಪಾಕಿಸ್ತಾನದ ಮೇಲೆ ಆರೋಪ ಹೊರಿಸುತ್ತಿದೆ.

ಶುಕ್ರವಾರ ನಾರ್ತ್ ಬ್ಲಾಕ್‌ನಲ್ಲಿ ನಡೆದ ಸರಣಿ ಸಭೆಗಳ ಸಂದರ್ಭ ಕೇಂದ್ರ ಗುಪ್ತಚರ ಸಂಸ್ಥೆಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಾಹಿತಿ ನೀಡುವ ಸಂದರ್ಭ ಕಾಶ್ಮೀರ ಕಣಿವೆಯಲ್ಲಿ ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಪಾಕಿಸ್ತಾನವೇ ಕಾರಣ ಎಂದು ದೂಷಿಸಿದೆ.

Kashmiri_Pandits

ಕಾಶ್ಮೀರದಲ್ಲಿ ಹಿಂಸಾಚಾರದ ಮಟ್ಟಗಳು ಹೆಚ್ಚಿರಬಹುದು ಆದರೆ ಅದು ಜಿಹಾದ್ ಅಲ್ಲ. ಕೆಲವು ಹತಾಶ ಶಕ್ತಿಗಳು ಇದನ್ನು ಮಾಡುತ್ತಿದೆ. ಹಿಂಸಾಚಾರಕ್ಕೆ ಸಂಬಂಧಪಟ್ಟವರು ಕಾಶ್ಮೀರದ ಗಡಿಯುದ್ದಕ್ಕೂ ಕುಳಿತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ:  JNU ಕ್ಯಾಂಪಸ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಕಾಶ್ಮೀರದ ಕಣಿವೆಯಲ್ಲಿ ತಾಲಿಬಾನ್ ಇರುವಿಕೆಗೆ ಪುರಾವೆಗಳಿಲ್ಲ. ಪಾಕಿಸ್ತಾನಿಗಳು ಇದಕ್ಕಾಗಿಯೇ ಭಾರತದ ಗಡಿ ಪ್ರವೇಶಿಸಲು ಸಂಚು ರೂಪಿಸುತ್ತಿದ್ದಾರೆ. ಕಾಶ್ಮೀರದಲ್ಲಿ ಹೆಚ್ಚಾಗಿ ಅಲ್ಪಸಂಖ್ಯಾತ ಸಮುದಾಯ ಹಾಗೂ ಸ್ಥಳೀಯರಲ್ಲದವರನ್ನು ಗುರಿಯಾಗಿಸಿಕೊಂಡು ಹೆಚ್ಚಿನ ಹತ್ಯೆಗಳು ನಡೆದಿವೆ. ಕಾಶ್ಮೀರಿ ಪಂಡಿತರ ಬೇಡಿಕೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಲ್ಲಿಂದ ಹೊರಗೆ ಸ್ಥಳಾಂತರಿಸುವ ಬದಲು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ನಿರ್ಧರಿಸಿದೆ. ಅವರ ಗುರಿ ಕಾಶ್ಮೀರದಿಂದ ಜನಾಂಗೀಯ ನಿರ್ಮೂಲನೆ ಮಾಡುವುದು ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ ಎಂದರು.

ಕಾಶ್ಮೀರಿ ಪಂಡಿತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಆದರೆ ಕಾಶ್ಮೀರದಿಂದ ಹೊರಗಲ್ಲ ಎಂದು ಸರ್ವಾನುಮತದಿಂದ ನಿರ್ಧರಿಸಲಾಗಿದೆ. ಕೇಂದ್ರ ಯಾವುದೇ ಜನಾಂಗೀಯ ಶುದ್ಧೀಕರಣಕ್ಕೆ ಮುಂದಾಗುವುದಿಲ್ಲ. ಈ ಸರ್ಕಾರದಲ್ಲಿ ನಾವು ಬಹು ಸಾಂಸ್ಕೃತಿಕ ಸಮಾಜವನ್ನು ನಂಬುತ್ತೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧಕ್ಕೆ 100 ದಿನ ಪೂರ್ಣ- ಮತ್ತೆ ನಗರವನ್ನು ವಶಪಡಿಸಿಕೊಂಡ ಉಕ್ರೇನ್

Share This Article
Leave a Comment

Leave a Reply

Your email address will not be published. Required fields are marked *