ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಏರ್ ಶೋ ನಡೆಸಲು ಕೇಂದ್ರ ಒಪ್ಪಿಗೆ

Public TV
1 Min Read

-6 ನೀರಾವರಿ ಯೋಜನೆಗಳಿಗೆ 11.122 ಕೋಟಿ ಅನುದಾನಕ್ಕಾಗಿ ಮನವಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಈ ಬಾರಿ 11 ದಿನಗಳ ಕಾಲ ನಡೆಯಲಿದ್ದು, ಇದೇ ವೇಳೆ ಏರ್ ಶೋ (Air Show) ನಡೆಸಲು ಕೇಂದ್ರ ಸರ್ಕಾರ (Central Govt) ಒಪ್ಪಿಗೆ ನೀಡಿದೆ.

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದ ನಿಯೋಗ ರಾಜನಾಥ್ ಸಿಂಗ್ (Rajanath Singh) ಅವರನ್ನು ಭೇಟಿಯಾಗಿ ಏರ್‌ಶೋಗೆ ಮನವಿ ಸಲ್ಲಿಸಿತ್ತು. ರಾಜ್ಯ ಸರ್ಕಾರದ ಕೋರಿಕೆ ಬೆನ್ನಲ್ಲೇ ರಾಜನಾಥ್ ಸಿಂಗ್ ಮನವಿಗೆ ಒಪ್ಪಿಗೆ ಸೂಚಿಸಿರುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.ಇದನ್ನೂ ಓದಿ: ಹೊಂಬಾಳೆ ಫಿಲಂಸ್ ಪ್ರಸ್ತುತಿ: ಮಹಾವತಾರ್ ನರಸಿಂಹ ಟ್ರೈಲರ್ ರಿಲೀಸ್

ಭೇಟಿ ವೇಳೆ ಬೆಂಗಳೂರಿನ (Bengaluru) ಟನಲ್ ಯೋಜನೆ, ಲಿಂಕ್ ರೋಡ್ ಹಾಗೂ ಏರ್‌ಪೋರ್ಟ್ ರಸ್ತೆಯಲ್ಲಿ ಡಬಲ್ ಡೆಕ್ಕರ್ ರಸ್ತೆಗೆ ರಕ್ಷಣಾ ಇಲಾಖೆಗೆ ಜಾಗ ಕೇಳಲಾಗಿತ್ತು. ಇದಕ್ಕೂ ಸರ್ಕಾರ ಸ್ಪಂದಿಸಿದೆ ಹಾಗೂ ನಾಳೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಭೇಟಿಗೂ ಅವಕಾಶ ಕೇಳಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ಇದೇ ವೇಳೆ ಡಿಕೆಶಿ ಮಾತನಾಡಿ, ರಾಜ್ಯದ ಆರು ನೀರಾವರಿ ಯೋಜನೆಗಳಿಗೆ 11,122.76 ಕೋಟಿ ರೂ. ಅನುದಾನಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಕುಡಿಯುವ ನೀರಿನ ಉದ್ದೇಶದ ಎತ್ತಿನಹೊಳೆ ಯೋಜನೆಗೆ ಶೇ.25ರಷ್ಟು ಆರ್ಥಿಕ ಸಹಾಯ, ಕಳಸಾ ಬಂಡೂರಿ ಯೋಜನೆ, ಕೃಷ್ಣಾ ನದಿ ನೀರಿನ ವಿಚಾರವಾಗಿ ಕೇಂದ್ರ ಜಲಶಕ್ತಿ ಹಾಗೂ ಪರಿಸರ ಸಚಿವರನ್ನು ಭೇಟಿ ಮಾಡಿ, ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಸುರಂಗ ಮಾರ್ಗ ವಿಚಾರವಾಗಿ ಕೇಂದ್ರ ಸಚಿವ ಕುಮಾರಸ್ವಾಮಿಯವರನ್ನು ಛೇಡಿಸಿದ್ದಾರೆ. ಟನಲ್ ನಿರ್ಮಾಣಕ್ಕಾಗಿ ಕುಮಾರಸ್ವಾಮಿ ನೆರವು ಕೇಳಿರುವ ಡಿಕೆ ಶಿವಕುಮಾರ್, ಮೊದಲು ದುಡ್ಡು ಕೊಡಿಸಲಿ, ಕೇವಲ ಖಾಲಿ ಮಾತನಾಡುವುದು ಬೇಡ ಎಂದು ಟೀಕಿಸಿದ್ದಾರೆ. ಟನಲ್ ನಿರ್ಮಾಣದಲ್ಲಿ ಹೆಚ್‌ಡಿಕೆ ಸಲಹೆ ಪಡೆಯಲಾಗುವುದು. ಅವರು ಗಡ್ಕರಿ ಭೇಟಿಯಾಗಿದ್ದು ಗೊತ್ತು. ಕೇಂದ್ರದಿಂದ ದುಡ್ಡು ಕೊಡಿಸಲಿ ಸಾಕು. ಕ್ರೇಡಿಟ್ ಯಾರು ಬೇಕಾದರೂ ತೆಗೆದುಕೊಳ್ಳಲಿ ಎಂದಿದ್ದಾರೆ.ಇದನ್ನೂ ಓದಿ: ಕಾಡಾನೆ ದಾಳಿಗೆ ಮಾಜಿ ಶಾಸಕ ಬಲಿ

Share This Article