ತೆರಿಗೆ ವಿನಾಯ್ತಿ ಕೈಬಿಡಲು ಕೇಂದ್ರ ಚಿಂತನೆ – ವಿನಾಯ್ತಿ ಬೇಡ ಎಂದವರಿಗೆ ಮಾತ್ರ ಕಡಿಮೆ ತೆರಿಗೆ

Public TV
1 Min Read

ನವದೆಹಲಿ: ತೆರಿಗೆ ವಿನಾಯ್ತಿಗಳನ್ನು ಕೈಬಿಟ್ಟು, ವಿನಾಯ್ತಿ ಮುಕ್ತ ತೆರಿಗೆ ಪದ್ಧತಿ ಜಾರಿಗೊಳಿಸಲು ಹಾಗೂ ವಿನಾಯ್ತಿ ಬೇಡ ಎಂದವರಿಗೆ ಆದಾಯ ತೆರಿಗೆ ದರವನ್ನು ಕಡಿಮೆಮಾಡಲು ಕೇಂದ್ರ ವಿತ್ತ ಸಚಿವಾಲಯ ಹೊಸ ಪ್ರಸ್ತಾವ ಇರಿಸಿದೆ. ಈ ಮೂಲಕ ಗೊಂದಲಮುಕ್ತ ಹಾಗೂ ಆಕರ್ಷಕ ಆದಾಯ ತೆರಿಗೆ ಪದ್ಧತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.

2020-21ರಲ್ಲಿ ಈ ನಿಟ್ಟಿನಲ್ಲಿ ಹೊಸ ತೆರಿಗೆ ಪದ್ಧತಿಯೊಂದನ್ನು ಕೇಂದ್ರ ಜಾರಿಗೆ ತಂದಿತ್ತು. ಅದರಲ್ಲಿ ಮೊದಲ ವಿಧಾನದಲ್ಲಿ ಹಲವಾರು ತೆರಿಗೆ ವಿನಾಯ್ತಿ ಇರುತ್ತಿದ್ದವು. 2ನೇ ವಿಧಾನದಲ್ಲಿ ಯಾವುದೇ ತೆರಿಗೆ ವಿನಾಯ್ತಿ ಇರುತ್ತಿರಲಿಲ್ಲ. ಆದರೆ ಮೊದಲನೆಯ ವಿಧಕ್ಕೆ ಹೋಲಿಸಿದರೆ ಈ ವಿಧದಲ್ಲಿ ಕಡಿಮೆ ಪ್ರಮಾಣದ ತೆರಿಗೆ ಇತ್ತು. ತೆರಿಗೆದಾರರು ತಮಗೆ ಇಷ್ಟವಾದ ವಿಧಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ ಈಗ ಗೊಂದಲ ತೊಡೆದುಹಾಕುವ ನಿಟ್ಟಿನಲ್ಲಿ ವಿನಾಯ್ತಿ ಮುಕ್ತ ತೆರಿಗೆ ಪದ್ಧತಿಗೆ ಸರ್ಕಾರ ಮುಂದಾಗಿದೆ. ಇದನ್ನೂ ಓದಿ: ಪ್ರೀತಿಯ ಸುಳಿಗೆ ಸಿಕ್ಕಿಬಿದ್ದ ಬಾಲೆ – ಮದುವೆಯಾಗಲು ಪ್ರಿಯಕರ ಒಪ್ಪದ್ದಕ್ಕೆ ಆತ್ಮಹತ್ಯೆ

ಈಗಾಗಲೇ ಗೃಹ, ಶೈಕ್ಷಣಿಕ ಸಾಲ ಮುಗಿಸಿದವರಿಗೆ ಈ ಎರಡೂ ಕಾರಣ ಮುಂದಿಟ್ಟು ತೆರಿಗೆ ವಿನಾಯ್ತಿ ಕೇಳಲು ಆಗದು. ಇಂಥವರೆಲ್ಲ ವಿನಾಯ್ತಿ ಮುಕ್ತ ತೆರಿಗೆ ಪದ್ಧತಿಯ ಮೊರೆ ಹೋಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೇ ವಿನಾಯ್ತಿ ಮುಕ್ತ ತೆರಿಗೆಯಲ್ಲಿ ತೆರಿಗೆ ದರ ಕಡಿಮೆಯಿರುವ ಕಾರಣ ಜನರು ಇದರತ್ತ ಆಕರ್ಷಿತರಾಗುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *