ರಾಜ್ಯಸಭೆಯಲ್ಲಿ ವೆಂಕಯ್ಯ ನಾಯ್ಡುಗೆ ಬೀಳ್ಕೊಡುಗೆ – ಕನ್ನಡದಲ್ಲಿ ಭಾಷಣ ಮಾಡಿ ಜೋಶಿ ಶುಭ ಹಾರೈಕೆ

Public TV
2 Min Read

ನವದೆಹಲಿ: ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಇಂದು ಭಾವುಕ ದಿನ, ಭಾವನಾತ್ಮಕ ಕ್ಷಣ. ನೂತನ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಅವರು ಆಯ್ಕೆ ಆದ ಹಿನ್ನೆಲೆಯಲ್ಲಿ ವೆಂಕಯ್ಯ ನಾಯ್ಡು ಅವರು ಇಂದು ರಾಜ್ಯಸಭೆಯಲ್ಲಿ ಸಭಾಪತಿಯಾಗಿ ಕೊನೆಯ ದಿನದ ಕಲಾಪ ನಡೆಸಿದರು.

ಈ ವೇಳೆ ಮಾತನಾಡಿದ ಕೇಂದ್ರ ಸಚಿವರು ಹಾಗೂ ರಾಜ್ಯಸಭೆಯ ಹಲವು ಸದಸ್ಯರು ವೆಂಕಯ್ಯ ನಾಯ್ಡು ಅವರ ಕಾರ್ಯವೈಖರಿ ಶ್ಲಾಘಿಸಿದರು. ವಿಶೇಷವಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಕನ್ನಡದಲ್ಲಿಯೇ ಭಾಷಣ ಮಾಡಿ ಗಮನ ಸೆಳೆದರು. ಇದನ್ನೂ ಓದಿ: ಪ್ರಧಾನಿ ಮೋದಿ ಅವರ ತಿರಂಗಾ ಡಿಪಿ ಕರೆಯನ್ನು ಆರ್‌ಎಸ್‌ಎಸ್‌ ತಿರಸ್ಕರಿಸಿದೆ – ಬಿಜೆಪಿ ಕಾಲೆಳೆದ ಕಾಂಗ್ರೆಸ್‌

ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ಕನ್ನಡದಲ್ಲೇ ಭಾಷಣ ಮಾಡುವ ಮೂಲಕ ಬೀಳ್ಕೊಡುಗೆ ನೀಡಿದ ಪ್ರಲ್ಹಾದ್ ಜೋಶಿಯವರು, ಕರ್ನಾಟಕದ ಜೊತೆಗಿನ ವೆಂಕಯ್ಯ ನಾಯ್ಡು ಅವರ ಬಾಂಧವ್ಯ, ಮಾತೃ ಭಾಷೆ ಬಗ್ಗೆ ಅವರಿಗಿದ್ದ ಅಭಿಮಾನ, ಪ್ರಾಸಬದ್ಧ ಭಾಷಣ, ವಿಶೇಷವಾಗಿ ದಕ್ಷಿಣ ಭಾರತದ ಡ್ರೆಸ್ ಕೋಡ್ ಪಾಲನೆಯಲ್ಲಿ ವೆಂಕಯ್ಯ ನಾಯ್ಡು ಅವರ ಶಿಸ್ತಿನ ಬಗ್ಗೆ ಜೋಶಿ ಸ್ಮರಿಸಿದರು.

ವೆಂಕಯ್ಯ ನಾಯ್ಡು ಅವರು ರಾಜ್ಯಸಭೆ ಸಭಾಪತಿಯಾಗಿ ಸದನದಲ್ಲಿ ಭಾರತದ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು. ರಾಜ್ಯಸಭೆಯಲ್ಲಿ ಸದಸ್ಯರು ತಮ್ಮ ಮಾತೃಭಾಷೆಯಲ್ಲಿ ಮಾತನಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಸುಮಾರು 22 ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡಲು ರಾಜ್ಯಸಭೆಯಲ್ಲಿ ಅನುಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ವೆಂಕಯ್ಯ ನಾಯ್ಡು ಅವರಿಗೆ ವಂದನಾ ಭಾಷಣದಲ್ಲಿ ಪ್ರಲ್ಹಾದ್ ಜೋಶಿ ತಮ್ಮ ಮಾತೃ ಭಾಷೆ ಕನ್ನಡದಲ್ಲಿಯೇ ಮಾತನಾಡುವ ಮೂಲಕ ನಾಯ್ಡು ಅವರು ಹಾಕಿದ್ದ ಮೇಲ್ಪಂಕ್ತಿಗೆ ಪ್ರಶಂಸೆ ವ್ಯಕ್ತಪಡಿಸಿದರು.

ವೆಂಕಯ್ಯ ನಾಯ್ಡು ಸರಳ ಸ್ವಭಾವ, ಬೆಂಗಳೂರಿಗೆ ಬಂದ್ರೆ ಸಣ್ಣ ಜನಾರ್ದನ ಹೋಟೆಲ್‍ಗೆ ಹೋಗೋ ಅವರ ಸರಳತೆ, ಯಾವ ಹುದ್ದೆಯಲ್ಲಿದ್ರೂ ಜನಕ್ಕೆ ಮುಕ್ತವಾಗಿ ಸಿಗೋ ಅವರ ಸರಳತೆಯನ್ನೂ ಪ್ರಶಂಸಿದ್ರು. ದಣಿವರಿಯದ ನಾಯಕರಾದ ನಿಮ್ಮ ಮಾರ್ಗದರ್ಶನವಿರಲಿ ಅಂತ ವೆಂಕಯ್ಯ ನಾಯ್ಡುಗೆ ಜೋಶಿಯವರು ಇದೇ ವೇಳೆ ತುಂಬು ಹೃದಯದ ಶುಭಾಶಯ ಕೋರಿದ್ದು ವಿಶೇಷ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *