ಎರಡು ತಿಂಗಳ GST ಪಾಲು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ- ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

Public TV
1 Min Read

ನವದೆಹಲಿ: ರಾಜ್ಯಗಳಲ್ಲಿ ವಿವಿಧ ಯೋಜನೆಗಳಿಗೆ ಹಣ ಹೂಡಿಕೆ ತ್ವರಿತಗೊಳ್ಳಲೆಂಬ ಉದ್ದೇಶದ ಹಿನ್ನೆಲೆಯಲ್ಲಿ ಮುಂದಿನ ತಿಂಗಳ ಸರಕು ಮತ್ತು ಸೇವಾ ತೆರಿಗೆ (GST) ಪಾಲನ್ನು ಸೇರಿಸಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ತಿಂಗಳಿಗೆ 59,140 ಕೋಟಿ ರೂ. ನೀಡಬೇಕಿದ್ದ ಕೇಂದ್ರ ಸರ್ಕಾರ (Central Government) ಈ ಬಾರಿ 1,18,280 ಕೋಟಿ ರೂ. ಹಣವನ್ನು ಸೋಮವಾರ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವರ್ಗಾಯಿಸಿದೆ.

ವಿವಿಧ ರಾಜ್ಯಗಳಿಗೆ ನೀಡಲಾಗಿರುವ 1,18,280 ಕೋಟಿ ರೂ. ಪೈಕಿ ಕರ್ನಾಟಕ (Karnataka) ಕ್ಕೆ 4,314 ಕೋಟಿ ರೂ. ಬಿಡುಗಡೆ ಮಾಡಿದೆ. ಮಹಾರಾಷ್ಟ್ರ (Maharastra) ಕ್ಕೆ 7,472 ಕೋಟಿ ರೂ. ಬಿಡುಗಡೆಯಾಗಿದ್ದು ಮಹಾರಾಷ್ಟ್ರ ಮತ್ತು ಕರ್ನಾಟಕ ದೇಶದಲ್ಲಿ ಅತಿ ಹೆಚ್ಚು ಜಿಎಸ್‍ಟಿ ಸಂಗ್ರಹ ಮಾಡಿ ಕೇಂದ್ರಕ್ಕೆ ತಲುಪಿಸುವ ರಾಜ್ಯಗಳಾಗಿವೆ.

ಜಿಎಸ್‍ಟಿ ಪಾಲಿನಲ್ಲಿ ಉತ್ತರಪ್ರದೇಶ (Uttarpradesh) ಕ್ಕೆ ದೊಡ್ಡ ಪಾಲು ದೊರಕಿದೆ. ಉತ್ತರ ಪ್ರದೇಶಕ್ಕೆ 21,218 ಕೋಟಿ ರೂ. ಬಿಡುಗಡೆಯಾಗಿದ್ದು, ಬಿಹಾರ (Bihar), ಮಧ್ಯಪ್ರದೇಶ (Madhyapradesh), ಪಶ್ಚಿಮ ಬಂಗಾಳ (West Bengal) ರಾಜ್ಯಗಳಿಗೆ 8,000 ಕೋಟಿ ರೂ.ಗಿಂತ ಹೆಚ್ಚು ಜಿಎಸ್‍ಟಿ ಪಾಲು ಜೂನ್ ತಿಂಗಳಲ್ಲಿ ಸಿಕ್ಕಿದೆ. ಇದನ್ನೂ ಓದಿ: ಅಮ್ಮ ಸಾಯುವ ಮುನ್ನ ನಮಗೆ ಈ ಮಾತು ಹೇಳಿದ್ದಳು..; ಅಮೆಜಾನ್‌ ಕಾಡಲ್ಲಿ ಸಿಲುಕಿದ್ದ ಮಕ್ಕಳ ಕರುಣಾಜನಕ ಕಥೆ ತೆರೆದಿಟ್ಟ ರಕ್ಷಣಾ ತಂಡ

ಗುಜರಾತ್‍ಗೆ 4,114 ರೂ., ಛತ್ತೀಸ್‍ಗಡಗೆ 4,030 ರೂ., ಜಾರ್ಖಂಡ್‍ಗೆ 3,912 ರೂ., ಅಸ್ಸಾಂಗೆ 3,700 ರೂ., ತೆಲಂಗಾಣಕ್ಕೆ 2,486 ರೂ., ಕೇರಳಕ್ಕೆ 2,277 ರೂ., ಪಂಜಾಬ್‍ಗೆ 2,137 ರೂ., ಅರುಣಾಚಲಪ್ರದೇಶಕ್ಕೆ 2,078 ರೂ., ಉತ್ತರಾಖಂಡ್‍ಗೆ 1,322 ರೂ., ಹರಿಯಾಣಕ್ಕೆ 1,293 ರೂ. ಬಿಡುಗಡೆಯಾಗಿದೆ. ಹಿಮಾಚಲಪ್ರದೇಶ, ಮೇಘಾಲಯ, ಮಣಿಪುರ, ತ್ರಿಪುರಾ, ಗೋವಾ, ನಾಗಾಲ್ಯಾಂಡ್ ಹಾಗೂ ಸಿಕ್ಕಿಂಗೆ 800-900 ಕೋಟಿ ರೂ. ಬಿಡುಗಡೆಯಾಗಿದೆ. ರಾಜ್ಯಗಳ ಆರ್ಥಿಕ ಸ್ಥಿತಿಗಳಿಗೆ ಅನುಸಾರವಾಗಿ ಜಿಎಸ್‍ಟಿ ಪಾಲು ಹಂಚಿಕೆಯನ್ನು ಕೇಂದ್ರ ಸರ್ಕಾರ ಮುಂದುವರಿದ ರಾಜ್ಯಗಳಿಗೆ ಕಡಿಮೆ ಮತ್ತು ಹಿಂದುಳಿದ ರಾಜ್ಯಗಳಿಗೆ ಹೆಚ್ಚಿನ ಪಾಲು ನೀಡುತ್ತದೆ.

Share This Article