ತಾಲಿಬಾನಿ ಬಿಜೆಪಿ ಸರ್ಕಾರದಿಂದ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿ

Public TV
1 Min Read

ಕೋಲ್ಕತ್ತಾ: ತಾಲಿಬಾನಿ ಬಿಜೆಪಿ ಸರ್ಕಾರದಿಂದ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ. ದೇಶದ ಜನ ಮುಂದಿನ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಮನೆ ದಾರಿ ತೋರಿಸುತ್ತಾರೆ ಎಂದು ಪಶ್ಟಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

ಭವಾನಿಪುರದಲ್ಲಿ ನಡೆಯಲಿರುವ ಉಪಚುನಾವಣೆಯ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಅಕ್ಟೋಬರ್‍ ನಲ್ಲಿ ಇಟಲಿಯಲ್ಲಿ ನಡೆಯಲಿರುವ ವಿಶ್ವ ಶಾಂತಿ ಸಮಾವೇಶದಲ್ಲಿ ಭಾಗವಹಿಸಲು ಏಷ್ಯಾದ ಪ್ರತಿನಿಧಿಯಾಗಿ ನನ್ನನ್ನು ಆಮಂತ್ರಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ನಿರಾಕರಿಸಿದೆ. ಕೇಂದ್ರ ಸರ್ಕಾರ ಅಸೂಯೆಯಿಂದ ಅನುಮತಿ ನಿರಾಕರಿಸಿದೆ. ಬಿಜೆಪಿ ಸರ್ಕಾರ ತಾಲಿಬಾನಿ ಸರ್ಕಾರ. ಉಪಚುನಾಣೆಯಲ್ಲಿ ಭವಾನಿಪುರ ಮತದಾರರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮನೆ ದಾರಿ ತೋರಿಸುತ್ತಾರೆ. ಮುಂದಿನ ಚುನಾವಣೆಗಳಲ್ಲಿ ದೇಶದ ಉಳಿದ ಭಾಗಗಳಲ್ಲೂ ಇದನ್ನೇ ಅನುಸರಿಸುತ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸೆ.28 ರಂದು ಕಾಂಗ್ರೆಸ್ ಸೇರಲಿದ್ದಾರೆ ಜಿಗ್ನೇಶ್ ಮೇವಾನಿ, ಕನ್ಹಯ್ಯ ಕುಮಾರ್

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಾನು ಇಟಲಿಗೆ ಹೋಗುವುದನ್ನು ತಡೆದಿದೆ. ಬಿಜೆಪಿಯವರು ಶಾಂತಿಯ ಬಗ್ಗೆ ಮಾತನಾಡುತ್ತಾರೆ. ಆದರೆ ನನ್ನನ್ನು ಶಾಂತಿ ಸಮಾವೇಶದಲ್ಲಿ ಭಾಗವಹಿಸದಂತೆ ತಡೆಯಲಾಗಿದೆ. ಏಷ್ಯಾದ ಪ್ರತಿನಿಧಿಯಾಗಿ ಭಾಗವಹಿಸಲು ನನಗೆ ಆಹ್ವಾನ ಬಂದಿತ್ತು. ಆದರೆ ಕೇಂದ್ರವು ರಾಜಕೀಯ ಕಾರಣಗಳನ್ನು ಉಲ್ಲೇಖಿಸಿ ಅನುಮತಿ ನಿರಾಕರಿಸಿದೆ ಮತ್ತು ಈ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸುವುದು ಸರಿಯಲ್ಲ ಎಂದು ಉತ್ತರಿಸಿದೆ. ದೇಶದ ಜನರಿಗೆ ಕಷ್ಟವನ್ನೇ ಕೊಡುವ ಬಿಜೆಪಿಯನ್ನು ಮುಂದಿನ ಬಾರಿ ಅಧಿಕಾರದಿಂದ ಕೆಳಗಿಳಿಸಬೇಕು. ಈ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಮತದಾರರನ್ನು ಒತ್ತಾಯಿಸಿದರು. ಇದನ್ನೂ ಓದಿ: ಭದ್ರತಾ ಮಂಡಳಿ ಜೊತೆ ಎನ್‍ಎಸ್‍ಜಿಯಲ್ಲೂ ಭಾರತ ಇರಬೇಕು: ಬೈಡನ್

Share This Article
Leave a Comment

Leave a Reply

Your email address will not be published. Required fields are marked *