ಅದ್ಧೂರಿಯಾಗಿ ನಡೆದ ಮುಕೇಶ್ ಪುತ್ರಿಯ ವಿವಾಹಕ್ಕೆ ಗಣ್ಯರ ದಂಡು ಹಾಜರ್

Public TV
1 Min Read

ಮುಂಬೈ: ದೇಶದ ನಂಬರ್ ಒನ್ ಶ್ರೀಮಂತ ಮುಕೇಶ್ ಅಂಬಾನಿಯ ಪುತ್ರಿ ಇಶಾ ಅಂಬಾನಿ ಮತ್ತು ಉದ್ಯಮಿ ಆನಂದ್ ಪಿರಾಮನ್ ಅವರ ವಿವಾಹ ಮುಂಬೈಯಲ್ಲಿರುವ ಆಂಟಿಲ್ಲಾ ನಿವಾಸದಲ್ಲಿ ವಿಜೃಂಭಣೆಯಿಂದ ನಡೆದಿದೆ.

ಈ ಮೂಲಕ ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಾಲ್ ಅವರ ಮದುವೆಯು ಭಾರತದಲ್ಲಿ ನಡೆದ ಅತೀ ದುಬಾರಿ ಮದುವೆಗಳಲ್ಲಿ ಒಂದಾಗಿದೆ.

ಈ ಅದ್ದೂರಿ ಮದುವೆಗೆ ಬಚ್ಚನ್ ಕುಟುಂಬದವರು, ಸೂಪರ್ ಸ್ಟಾರ್ ರಜನಿಕಾಂತ್, ಸಲ್ಮಾನ್ ಖಾನ್, ಆಮೀರ್ ಖಾನ್, ಸಚಿನ್ ತೆಂಡೂಲ್ಕರ್, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಿಲರಿ ಕ್ಲಿಂಟನ್ ಸೇರಿದಂತೆ ಹಲವು ಖ್ಯಾತ ನಟ-ನಟಿಯರು, ಕ್ರೀಡಾಪಟುಗಳು, ರಾಜಕಾರಣಿಗಳು ಆಗಮಿಸಿ ನವ ವಧುವರರಿಗೆ ಶುಭಹಾರೈಸಿದರು. ಹಾಗೆಯೇ ಬಿಟೌನ್ ಸ್ಟಾರ್ ಜೋಡಿಗಳಾದ ದೀಪಿಕಾ ಪಡುಕೋಣೆ, ರಣ್‍ವೀರ್ ಸಿಂಗ್ ಹಾಗೂ ಪ್ರಿಯಾಂಕಾ ಚೋಪ್ರಾ, ನಿಕ್ ಜೋನ್ಸ್ ಕೂಡ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಯುವ ಉದ್ಯಮಿ ಆನಂದ್ ಪಿರಾಮಾಲ್ ಹಾಗೂ ಇಶಾ ಅಂಬಾನಿ ಇಬ್ಬರು ಬಾಲ್ಯದ ಸ್ನೇಹಿತರು. ಅಲ್ಲದೆ ಇಬ್ಬರು ಖ್ಯಾತ ಉದ್ಯಮಿಗಳಾದ ಮುಕೇಶ್ ಅಂಬಾನಿ ಹಾಗೂ ಅಜಯ್ ಪಿರಾಮಾಲ್ ಅವರ ಮಕ್ಕಳು. ಎರಡು ಉದ್ಯಮಿಗಳು ಸೇರಿ ತಮ್ಮ ಮಕ್ಕಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದಾರೆ. ಅದರಲ್ಲೂ ತಮ್ಮ ಏಕೈಕ ಪುತ್ರಿಯ ಮದುವೆಯನ್ನು ಮುಕೇಶ್ ಅಂಬಾನಿ ಒಟ್ಟು 718 ಕೋಟಿ ರೂ. ಖರ್ಚು ಮಾಡಿ ಅದ್ದೂರಿಯಾಗಿ ನೆರವೇರಿಸಿದ್ದಾರೆ.

ಉದಯ್‍ಪುರದಲ್ಲಿ ನಡೆದ ಇಶಾ ಹಾಗೂ ಆನಂದ್ ಅವರ ಮದುವೆ ಪೂರ್ವ ಸಮಾರಂಭಗಳಿಗೆ ಅಂದಾಜು 70 ಕೋಟಿ ರೂ ವೆಚ್ಚವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಇಶಾ ಹಾಗೂ ಆನಂದ್ ಅವರ ಆರತಕ್ಷತೆ ಕಾರ್ಯಕ್ರಮವು ಮುಂಬೈನಲ್ಲಿ ನಡೆಯಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *