ಠಾಣೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಆಡಿಯೋ ಹೊಂದಿರಬೇಕು: ದೆಹಲಿ ಹೈಕೋರ್ಟ್

Public TV
1 Min Read

ನವದೆಹಲಿ: ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿಗಳಲ್ಲಿ ವೀಡಿಯೋ ಫೂಟೇಜ್ ಜೊತೆ ಆಡಿಯೋ ಇರಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಆಡಿಯೋ ಸಿಸ್ಟಮ್ ಏಕೆ ಅಳವಡಿಸಿಲ್ಲ ಎಂಬುದನ್ನು ವಿವರಿಸುವಂತೆ ಸ್ಥಳೀಯ ಪೊಲೀಸ್ ಠಾಣೆಗೆ ಸೂಚಿಸಿದೆ.

ನ್ಯಾಯಮೂರ್ತಿ ಅನು ಮಲ್ಹೋತ್ರಾ ಪೀಠದಲ್ಲಿ ಮಸೀದಿಯ ಇಮಾಮ್ ಆಗಿ ತಮ್ಮ ಅಧಿಕೃತ ಮತ್ತು ಧಾರ್ಮಿಕ ಕರ್ತವ್ಯಗಳನ್ನು ನಿರ್ವಹಿಸಲು ಅಡ್ಡಿಯಾಗುತ್ತಿರುವ ಕುರಿತು ವಿಚಾರಣೆ ನಡೆಯುತ್ತಿತ್ತು. ಈ ವೇಳೆ, ನಬಿ ಕರೀಮ್ ಪೊಲೀಸ್ ಠಾಣೆಯ ವೀಡಿಯೋ ತುಣುಕನ್ನು ಸಂರಕ್ಷಿಸಲಾಗಿದ್ದರೂ, ಆಡಿಯೋ ದೃಶ್ಯಾವಳಿಗಳು ಲಭ್ಯವಿಲ್ಲದ ವಿಚಾರ ಪ್ರಸ್ತಾಪವಾಗಿದೆ. ಈ ವಿಚಾರ ತಿಳಿದ ಕೋರ್ಟ್, ಪೊಲೀಸ್ ಠಾಣೆಗಳ ಸಿಸಿಟಿವಿಯಲ್ಲಿ ಆಡಿಯೋ ಹಾಗೂ ವೀಡಿಯೋ ಫೂಟೇಜ್ ಕಡ್ಡಾಯವಾಗಿ ಅಳವಡಿಸಬೇಕು ಎಂದು ಆದೇಶ ಹೊರಡಿಸಿದೆ. ಇದನ್ನೂ ಓದಿ:  ದೇಶಕ್ಕೆ ಕನ್ನಡಿಗರ ಕೊಡುಗೆ ಅಪಾರ: ಬೊಮ್ಮಾಯಿ 

court order law

ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸುವ ಜೊತೆಗೆ ಸರಿಯಾಗಿ ಆಡಿಯೋ ಮತ್ತು ವೀಡಿಯೋ ಅಳವಡಿಸಬೇಕು ಎಂದು ನ್ಯಾಯಾಲಯವು ಮೇ 27 ರಂದು ಆದೇಶ ಹೊರಡಿಸಿದೆ. ಪೊಲೀಸ್ ಠಾಣೆಯ ಲಾಕ್-ಅಪ್‍ಗಳು, ಕಾರಿಡಾರ್‌ಗಳು, ಎಂಟ್ರಿ ಜಾಗಗಳು, ಇನ್‍ಸ್ಪೆಕ್ಟರ್‌ಗಳ ಕೊಠಡಿಗಳು, ಸ್ಟೇಷನ್ ಹಾಲ್, ಇತ್ಯಾದಿಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಠಾಣೆಯಲ್ಲಿ ನಡೆದಿದ್ದೇನು?
ಅರ್ಜಿದಾರರು, ಪೊಲೀಸ್ ಠಾಣೆಯಲ್ಲಿ ಎಸ್‍ಎಚ್‍ಒ ಸಮ್ಮುಖದಲ್ಲಿ ನನ್ನ ಮೇಲೆ ಅಮಾನವೀಯ ಮತ್ತು ಅವಮಾನಕರ ಪದಗಳನ್ನು ಒಳಸಲಾಗಿದೆ ಎಂದು ಆರೋಪಿಸಿದ್ದಾರೆ. ಇಡೀ ಘಟನೆಯನ್ನು ಎಸ್‍ಎಚ್‍ಒ ಕೊಠಡಿಯೊಳಗೆ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾ ಸೆರೆಹಿಡಿದಿದೆ. ಈ ವೇಳೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ವೀಡಿಯೋ ಇದ್ದರೂ, ಆಡಿಯೋ ಸರಿಯಾಗಿ ಕೇಳಿಸುತ್ತಿಲ್ಲ ಎಂಬುದು ದೊಡ್ಡ ಸಮಸ್ಯೆಯಾಗಿದೆ ಎಂದು ದೂರಿದ್ದರು. ಇದನ್ನೂ ಓದಿ: ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮಕ್ಕೆ ಪೊನ್ನಂಪೇಟೆಯಲ್ಲಿ ವಿದ್ಯುಕ್ತ ಚಾಲನೆ 

Share This Article
Leave a Comment

Leave a Reply

Your email address will not be published. Required fields are marked *