ಹಾಸನ: ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಸೈಕೋ ಕಾಮುಕನ ಕೃತ್ಯದ ಬಳಿಕ ಹಾಸನದಲ್ಲೂ ಇದೇ ರೀತಿಯ ಪ್ರಕರಣ ಬೆಳಕಿಗೆ ಬಂದಿದೆ. ತಡರಾತ್ರಿ ಹಾಸ್ಟೆಲ್‍ಗೆ ಪ್ರವೇಶಿಸಿ ವಿಚಿತ್ರವಾಗಿ ವರ್ತಿಸ್ತಾನಂತೆ ಆ ಸೈಕೋ.
ಹಾಸನ ನಗರದ ಚಿಕ್ಕಹೊನ್ನೇನಹಳ್ಳಿ ಬಳಿ ಇರೋ ಪಶುವೈದ್ಯಕೀಯ ಕಾಲೇಜು ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್ ಇದೆ. ಕಳೆದ ಭಾನುವಾರ ಮಧ್ಯರಾತ್ರಿ ಹಾಸ್ಟೆಲ್ ಕಟ್ಟಡದ ಒಳಗೆ ಪ್ರವೇಶಿಸಿರುವ ಕಾಮುಕನೊಬ್ಬ ಕೊಠಡಿಗಳಲ್ಲಿ ಇಣುಕುವುದು, ರೂಂಗಳ ಬಳಿ ನಿಂತು ಹೊಂಚು ಹಾಕುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಬೆಂಗಳೂರಿನ ಮಹಾರಾಣಿ ಕಾಲೇಜಿನ ಸೈಕೋ ಥರನೇ ಈತನೂ ವರ್ತನೆ ಮಾಡಿದ್ದಾನೆ. ಕೆಲವು ಸಲ ಈತ ಕಣ್ಣಿಗೆ ಬಿದ್ದಿದ್ದು, ವಿದ್ಯಾರ್ಥಿನಿಯೊಬ್ಬರು ಕೂಗಿಕೊಂಡಾಗ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಮಹಾರಾಣಿ ಕಾಲೇಜು ಹಾಸ್ಟೆಲ್‍ನಲ್ಲಿ ಬೆತ್ತಲೆಯಾಗಿ ಓಡಾಡಿ ಬೆಚ್ಚಿಬೀಳಿಸಿದ್ದ ಸೈಕೋ ಬಂಧನ
ಈತ ಸಾಕಷ್ಟು ಬಾರಿ ಹಾಸ್ಟೆಲ್‍ಗೆ ಬಂದಿದ್ದು, ಹಾಸ್ಟೆಲ್ ಎಲ್ಲಾ ಕಟ್ಟಡಗಳಲ್ಲಿ ಸುತ್ತುವುದು, ವಿದ್ಯಾರ್ಥಿನಿಯರ ರೂಂಗಳ ಬಳಿ, ಶೌಚಾಲಯಗಳ ಬಳಿ ನಿಂತು ನೋಡುತ್ತಾನೆ. ನಾಲ್ಕು ಕಡೆಯಿಂದ ಹಾಸ್ಟೆಲ್ ಬಾಗಿಲು ಮುಚ್ಚಿದ್ರೂ ಟೆರಸ್‍ನಿಂದ ಜಿಗಿದು ಮತ್ತೆ ಇಣುಕುತ್ತಾನೆ ಎನ್ನಲಾಗಿದೆ. ಘಟನೆಯಿಂದ ಎಚ್ಚೆತ್ತುಕೊಂಡು ಹಾಸ್ಟೆಲ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ.