ಶಂಕಿತ ಉಗ್ರ ಜುನೈದ್‍ಗೆ ಲುಕ್ ಔಟ್ ನೋಟಿಸ್ – ಸಿಸಿಬಿ ಸಿದ್ಧತೆ

By
1 Min Read

ಬೆಂಗಳೂರು: ಶಂಕಿತ ಉಗ್ರರ ಮಾಸ್ಟರ್ ಮೈಂಡ್ ಜುನೈದ್‍ನನ್ನು ಪತ್ತೆಹಚ್ಚಲು ಇಂಟರ್‌ಪೋಲ್‌ ಮೂಲಕ ಲುಕ್ ಔಟ್ ನೋಟಿಸ್‍ಗೆ (Look Out Circular) ಸಿಸಿಬಿ ಪೊಲೀಸರು (CCB Police) ತಯಾರಿ ನಡೆಸಿದ್ದಾರೆ. ಆರೋಪಿ ವಿದೇಶಕ್ಕೆ ತೆರಳಿರುವ ಶಂಕೆ ಇದ್ದು ಆತನನ್ನು ಬಂಧಿಸಲು ಸೂಕ್ತ ಕ್ರಮಕ್ಕೆ ಪೊಲೀಸರು ಈಗ ಮುಂದಾಗಿದ್ದಾರೆ.

ಅಪರಾಧ ಕ್ರತ್ಯಗಳಲ್ಲಿ ತೊಡಗಿಕೊಂಡಿದ್ದ ಜುನೈದ್ ಕಳೆದ ಎರಡು ವರ್ಷಗಳ ಹಿಂದೆ ಜೈಲಿನಿಂದ ಹೊರಬಂದಿದ್ದ. ಬಳಿಕ ಜೈಲಿನಿಂದ ಹೊರ ಬಂದು ದುಬೈಗೆ ತೆರಳಿರುವ ಅನುಮಾನ ವ್ಯಕ್ತವಾಗಿದೆ. 2021ರಲ್ಲಿ ದುಬೈಗೆ ಪ್ರಯಾಣ ಮಾಡಿರುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೆ (NIA) ಮಾಹಿತಿ ನೀಡಿರುವ ಸಿಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿ ಶೀಘ್ರ ಲುಕ್ ಔಟ್ ನೋಟಿಸ್ ಜಾರಿಗೊಳಿಸಲು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಸ್ಫೋಟಕ್ಕೆ ಸಂಚು – ಐವರು ಶಂಕಿತ ಉಗ್ರರು ಅರೆಸ್ಟ್‌

ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದ ಶಂಕಿತ ಉಗ್ರರಿಗೆ ಜುನೈದ್ ಹಣ ಸಹಾಯ ಮಾಡುತ್ತಿದ್ದ. ಅಲ್ಲದೇ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ್ದ ಮಾಹಿತಿ ಇದೆ. ಇದೀಗ ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರೂ ಆತನನ್ನು ಬಂಧಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಪೊಲೀಸರು ಮಾಡಿಕೊಂಡಿದ್ದಾರೆ. ಇದರಿಂದಾಗಿ ಪ್ರಮುಖ ಆರೋಪಿ ಶೀಘ್ರದಲ್ಲೇ ಪೊಲೀಸರ ಬಲೆಗೆ ಬೀಳುವ ಸಾಧ್ಯತೆ ಇದೆ.

ಜುಲೈ 19 ರಂದು ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಶಂಕಿತರಿಂದ ಅಪಾರ ಪ್ರಮಾಣದ ಸ್ಫೋಟಕ ಸಾಮಾಗ್ರಿ ಹಾಗೂ ಪಿಸ್ತೂಲ್‍ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬೆಂಗಳೂರು ಸೇರಿದಂತೆ ಹಲವೆಡೆ ಆರೋಪಿಗಳು ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂಬುದು ತನಿಖೆ ವೇಲೆ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: 2 ದಿನದೊಳಗೆ ದೊಡ್ಡ ಮಟ್ಟದ ಸ್ಪೋಟಕ್ಕೆ ನಡೆದಿತ್ತು ಸಿದ್ಧತೆ!

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್