ಬಿಡಿಎ ಅಕ್ರಮ ಕೇಸ್ ಮುಚ್ಚಿಹಾಕಲು ಲಂಚ ಪಡೆದ ಆರೋಪ – ಸಿಸಿಬಿ ಅಧಿಕಾರಿ ಯತೀಶ್ ಅಮಾನತು

Public TV
1 Min Read

ಬೆಂಗಳೂರು: ಬಿಡಿಎ (BDA) ಅಕ್ರಮ ಪ್ರಕರಣವನ್ನ ಮುಚ್ಚಿಹಾಕಲು ಲಂಚ ಪಡೆದ ಆರೋಪದ ಹಿನ್ನೆಲೆ ಸಿಸಿಬಿ ಪೊಲೀಸ್ (CCB Police) ಸಿಬ್ಬಂದಿ ಯತೀಶ್ ಅವರನ್ನು ಅಮಾನತು (Suspend) ಮಾಡಲಾಗಿದೆ.

ಸಿಸಿಬಿ ಮುಖ್ಯಸ್ಥರು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಬಿಡಿಎ ಸೈಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ಕಮಿಷನರ್ ಗಂಭೀರವಾಗಿ ಪರಿಗಣಿಸಿ ಎಲ್ಲಾ ಕೇಸ್‌ಗಳನ್ನು ಸಿಸಿಬಿ ತನಿಖೆಗೆ ವರ್ಗಾವಣೆ ಮಾಡಿದ್ದರು.  ಇದನ್ನೂ ಓದಿ: ʻಮಹಾʼ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಗೆಲುವು; 11ರ ಪೈಕಿ 9 ಸ್ಥಾನಗಳಲ್ಲಿ ಜಯ!

ಕೇಸ್ ಕ್ಲೋಸ್ ಮಾಡಿಸಲು ಸಿಬ್ಬಂದಿ ಯತೀಶ್ ಬಿಡಿಎ ಕೇಸ್‌ನಲ್ಲಿರುವ ಆರೋಪಿಯಿಂದ 55 ಲಕ್ಷ ರೂ. ಲಂಚ ಪಡೆದಿದ್ದರು. ಈ ಬಗ್ಗೆ ಸಿಸಿಬಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು.  ಇದನ್ನೂ ಓದಿ: ಕಂಬಳದಲ್ಲಿ ಅಪರ್ಣಾ ಜಾಣ ನಿರೂಪಣೆ – ನೆನಪಿನ ಬುತ್ತಿ ಬಿಚ್ಚಿಟ್ಟ ಸಂಸದ ಕೋಟ

ವಿಚಾರಣೆ ವೇಳೆ ಆರೋಪಿಯಿಂದ ಸಿಸಿಬಿ ಸಿಬ್ಬಂದಿ ಯತೀಶ್ ಹಣ ಪಡೆದಿರೋದು ಸಾಬೀತಾಗಿದೆ. ಹೀಗಾಗಿ ಸಿಸಿಬಿ ಸಿಬ್ಬಂದಿ ಯತೀಶ್ ಅವರನ್ನು ಅಮಾನತು ಮಾಡಿ ಆದೇಶಿಸಿದೆ. ಸದ್ಯ ಸಿಸಿಬಿ ಹಿರಿಯ ಅಧಿಕಾರಿಗಳು ಇಲಾಖಾ ತನಿಖೆಗೆ ಕೂಡ ಆದೇಶಿಸಿದ್ದಾರೆ. ಇದನ್ನೂ ಓದಿ: Dengue Alert: ರಾಜ್ಯದಲ್ಲಿ ಒಂದೇ ದಿನ 400ಕ್ಕೂ ಹೆಚ್ಚು ಕೇಸ್‌ ಪತ್ತೆ!

 

Share This Article