ಕೋಟಿ ಕೋಟಿ ವಂಚನೆ ಪ್ರಕರಣ – ಹಾಲಶ್ರೀ ನಿರೀಕ್ಷಣಾ ಜಾಮೀನು ಅರ್ಜಿಗೆ ಸಿಸಿಬಿ ಆಕ್ಷೇಪಣೆ ಸಾಧ್ಯತೆ

Public TV
2 Min Read

ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಂಚಿಸಿ ಬಂಧನಕ್ಕೊಳಗಾಗಿರುವ ಚೈತ್ರಾ (Chaitra Kundapura) ಗ್ಯಾಂಗ್‍ನ ಎ3 ಆರೋಪಿ ಅಭಿನವ ಹಾಲಶ್ರೀ (Abhinava Halashri) ನಿರೀಕ್ಷಣಾ ಜಾಮೀನು ಅರ್ಜಿ ವಿಚಾರವಾಗಿ ಇಂದು (ಮಂಗಳವಾರ) ಸಿಸಿಬಿ (CCB) ಪರ ವಕೀಲರಿಂದ ಆಕ್ಷೇಪಣೆ ಸಲ್ಲಿಸುವ ಸಾಧ್ಯತೆ ಇದೆ.

ಸದ್ಯ ತಲೆಮರೆಸಿಕೊಂಡಿರುವ ಹಾಲಶ್ರೀ, ಪ್ರಕರಣ ದಾಖಲಾಗಿ ಹತ್ತು ದಿನ ಕಳೆದರೂ ಪತ್ತೆಯಾಗಿಲ್ಲ. ಆರೋಪಿ ಬಂಧನಕ್ಕೆ ಸಿಸಿಬಿ ಅಧಿಕಾರಿಗಳು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಬಂಧನಕ್ಕೆ ಅಧಿಕಾರಿಗಳ ತಂಡ ಹೈದರಾಬಾದ್‍ಗೆ ತೆರಳಿದೆ. ಅಲ್ಲದೇ ಸ್ವಾಮೀಜಿ ಆಪ್ತರನ್ನು ವಿಚಾರಣೆ ನಡೆಸಿ ಅಡಗಿರುವ ಸ್ಥಳದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ಡೀಲ್ ಕೇಸ್- RSS ಕದ ತಟ್ಟಿದ್ದ ಗೋವಿಂದ ಪೂಜಾರಿ!

ಆರೋಪಿ ಹಾಲಶ್ರೀ ಫೋನ್ ಬಳಸದೆ ಪದೇ ಪದೇ ಇರುವ ಸ್ಥಳ ಬದಲಾಯಿಸುತ್ತಿರುವ ಮಾಹಿತಿ ಸಿಸಿಬಿಗೆ ದೊರೆತಿದೆ. ಇದೇ ಕಾರಣಕ್ಕೆ ಆರೋಪಿಯ ಆತ್ಮೀಯರು ಹಾಗೂ ಕೊನೆ ಕ್ಷಣದ ಕರೆ ಆಧಾರದ ಮೇಲೆ ತನಿಖೆ ಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಚೈತ್ರಾ ಹೊರತು ಪಡಿಸಿ ಉಳಿದೆಲ್ಲಾ ಆರೋಪಿಗಳ ಹೇಳಿಕೆ ದಾಖಲಿಸಲಾಗಿದೆ. ಎಲ್ಲಾ ಆರೋಪಿಗಳು ಚೈತ್ರಾ ಹಾಗೂ ಗಗನ್ ವಿರುದ್ಧ ಬೆರಳು ಮಾಡಿದ್ದಾರೆ.

ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಎ1 ಆರೋಪಿ ಚೈತ್ರಾ ಮೌನಕ್ಕೆ ಜಾರಿದ್ದು, ಸಿಸಿಬಿ ಅಧಿಕಾರಿಗಳ ಪ್ರಶ್ನೆಗೆ ಯಾವುದೇ ಉತ್ತರವನ್ನು ನೀಡುತ್ತಿಲ್ಲ. ಇದೇ ಕಾರಣಕ್ಕೆ 30 ಪ್ರಶ್ನೆಗಳನ್ನೊಳಗೊಂಡ ಪ್ರಶ್ನಾವಳಿಯನ್ನು ಸಿದ್ಧಪಡಿಸಿ ವಿಚಾರಣೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಆರೋಪಿಗಳ ಮೊಬೈಲ್‍ಗಳಲ್ಲಿನ ಎಲ್ಲಾ ಸಂದೇಶಗಳು, ಕರೆಗಳು, ಫೋಟೋಗಳು ಹಾಗೂ ಕರೆಯ ಡೀಟೆಲ್ಸ್ ಡಿಲೀಟ್ ಆಗಿದ್ದು, ರಿಟ್ರೀವ್‍ಗೆ ಕೊಡಲಾಗಿತ್ತು. ಇಂದು ಕೆಲವು ಆರೋಪಿಗಳ ಮೊಬೈಲ್‍ನ ರಿಟ್ರೀವ್ ರಿಪೋರ್ಟ್ ಬರುವ ಸಾಧ್ಯತೆ ಇದ್ದು ತನಿಖೆಯಲ್ಲಿ ಮಹತ್ತರ ಸುಳಿವು ಸಿಗುವ ಸಾಧ್ಯತೆ ಇದೆ. ಇದನ್ನೂ ಓದಿ: CCB ಅಧಿಕಾರಿಗಳ ಮುಂದೆ ಮೌನಾಚರಣೆ – ಚೈತ್ರಾಳ ಮುಂದಿರುವ ಆ 30 ಪ್ರಶ್ನೆಗಳೇನು?

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್