ಸಿಬಿಎಸ್‍ಇ ಹತ್ತನೇ ತರಗತಿ ಫಲಿತಾಂಶ ಪ್ರಕಟ – ಶೇ.90.95 ಫಲಿತಾಂಶ ದಾಖಲು

Public TV
1 Min Read

ನವದೆಹಲಿ: ಇಂದು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) (ಸಿಬಿಎಸ್‍ಇ) ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಶೇ.90.95ರಷ್ಟು ಫಲಿತಾಂಶ ದಾಖಲಾಗಿದೆ.

2016ನೇ ಸಾಲಿನಲ್ಲಿ ಶೇ.96.21ರಷ್ಟು ಫಲಿತಾಂಶ ದಾಖಲಾಗಿತ್ತು. ಆದರೆ ಈ ವರ್ಷ ಶೇ.90.95 ಫಲಿತಾಂಶ ಬಂದಿದ್ದು ಶೇ.5ರಷ್ಟು ಕುಸಿತ ಕಂಡಿದೆ. ತಿರುವನಂತಪುರ ಪ್ರದೇಶ ಅತ್ಯಧಿಕ (ಶೇ.99.85) ಫಲಿತಾಂಶ ಪಡೆದಿದೆ. ಮದ್ರಾಸ್ ಶೇ.99.62 ಮತ್ತು ಅಲಹಾಬಾದ್  ಶೇ.98.23ರಷ್ಟು ಫಲಿತಾಂಶ ಪಡೆದುಕೊಂಡಿದೆ.

ಈ ಬಾರಿ ದೆಹಲಿಯ ಫಲಿತಾಂಶದಲ್ಲಿ ಶೇ. 13ರಷ್ಟು ಇಳಿಕೆಯಾಗಿದೆ. ಕಳೆದ ಬಾರಿ 91.06ರಷ್ಟು ಫಲಿತಾಂಶ ಪಡೆದಿತ್ತು. ಆದರೆ ಈ ಬಾರಿ ದೆಹಲಿ ಪ್ರಸಕ್ತ ಸಾಲಿನಲ್ಲಿ ಶೇ.78.09ರಷ್ಟು ಫಲಿತಾಂಶ ಬಂದಿದೆ.

 

Share This Article
Leave a Comment

Leave a Reply

Your email address will not be published. Required fields are marked *