– 6 ಜಾಗದಲ್ಲಿ ಅಧಿಕಾರಿಗಳಿಂದ ಶೋಧ
ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2,000 ಕೋಟಿ ರೂ.ಗಳಿಗೂ ಹೆಚ್ಚು ನಷ್ಟ ಉಂಟುಮಾಡಿದ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಕಮ್ಯುನಿಕೇಷನ್ಸ್ (RCOM)) ಮತ್ತು ಅದರ ಪ್ರವರ್ತಕ ನಿರ್ದೇಶಕ ಅನಿಲ್ ಅಂಬಾನಿಗೆ (Anil Ambani) ಸಂಬಂಧಿಸಿದ ಸ್ಥಳಗಳ ಮೇಲೆ ಕೇಂದ್ರೀಯ ತನಿಖಾ ದಳ (CBI) ಶನಿವಾರ ದಾಳಿ ನಡೆಸಿದೆ.
ಆರ್‌ಕಾಮ್ ಮತ್ತು ಮುಂಬೈನಲ್ಲಿರುವ 66 ವರ್ಷದ ಅನಿಲ್‌ಗೆ ಸಂಬಂಧಿಸಿದ ಆರು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಬ್ಯಾಂಕ್ ಹಣವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗಿದೆ ಮತ್ತು ಸಾಲಗಳನ್ನು ಬೇರೆಡೆಗೆ ತಿರುಗಿಸಲಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ಈ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.
ಜೂನ್ 13 ರಂದು ಎಸ್‌ಬಿಐ ಆರ್‌ಸಿಒಎಂ ಮತ್ತು ಅನಿಲ್ ಅಂಬಾನಿಯನ್ನು ವಂಚನೆ ಎಸಗಿದ್ದಾರೆ ಎಂದು ವರ್ಗೀಕರಿಸಿ ಜೂನ್ 24 ರಂದು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (RBI) ವರದಿಯನ್ನು ಕಳುಹಿಸಿತ್ತು. ಇದನ್ನೂ ಓದಿ: ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿ ರಿಲೀಸ್ – ಸಿಎಂ ಸಿದ್ದರಾಮಯ್ಯಗೆ ಮೂರನೇ ಸ್ಥಾನ
VIDEO | Mumbai: CBI registers case, conducts raids at Reliance Communications premises linked to Anil Ambani in connection with alleged SBI bank fraud of Rs 2,000 crore.
(Full video available on PTI Videos – https://t.co/n147TvrpG7) https://t.co/MJxJBm3VF6 pic.twitter.com/pnq3djSoik
— Press Trust of India (@PTI_News) August 23, 2025
ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕ್ ಒಂದು ಖಾತೆಯನ್ನು ‘ವಂಚನೆ’ ಎಂದು ವರ್ಗೀಕರಿಸಿದ ನಂತರ ಸಾಲದಾತನು ಪತ್ತೆಯಾದ 21 ದಿನಗಳಲ್ಲಿ ಆರ್‌ಬಿಐಗೆ ವರದಿ ಮಾಡಬೇಕು ಮತ್ತು ಪ್ರಕರಣವನ್ನು ಸಿಬಿಐ ಅಥವಾ ಪೊಲೀಸರಿಗೆ ವರದಿ ಮಾಡಬೇಕಾಗುತ್ತದೆ.
ಜಾರಿ ನಿರ್ದೇಶನಾಲಯ (ED) ಅಂಬಾನಿ ಅವರನ್ನು ಅವರ ಸಮೂಹ ಕಂಪನಿಗಳ ವಿರುದ್ಧ ಕೋಟ್ಯಂತರ ರೂಪಾಯಿ ಮೌಲ್ಯದ ಬಹು ಬ್ಯಾಂಕ್ ಸಾಲ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಶ್ನಿಸಿದ ವಾರಗಳ ನಂತರ ಈ ಶೋಧಗಳನ್ನು ನಡೆಸಲಾಗಿದೆ.
ಯೆಸ್ ಬ್ಯಾಂಕಿನಿಂದ 2017 ಮತ್ತು 2019 ರ ನಡುವೆ 3,000 ಕೋಟಿ ರೂ. ಸಾಲಗಳನ್ನು ಬೇರೆ ಕಡೆ ಹೂಡಿಕೆ ಮಾಡಿದ ವಿಚಾರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ರಿಲಯನ್ಸ್ ಕಮ್ಯುನಿಕೇಷನ್ಸ್ ಕೂಡ ಇದೇ ರೀತಿಯ 14,000 ಕೋಟಿ ರೂ.ಗಳಿಗೂ ಹೆಚ್ಚಿನ ವಂಚನೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.