ತೀವ್ರ ಜಲಕ್ಷಾಮದ ನಡುವೆಯೂ ತಮಿಳುನಾಡಿಗೆ ಹರಿದ ಕಾವೇರಿ

Public TV
1 Min Read

– ಕೆಆರ್‌ಎಸ್‌ನಿಂದ 4,000 ಕ್ಯೂಸೆಕ್‌ಗೂ ಅಧಿಕ ನೀರು ಬಿಡುಗಡೆ

ಮಂಡ್ಯ: ಬೇಸಿಗೆ ಆರಂಭವಾಗಿದ್ದು, ರಾಜ್ಯದಲ್ಲೇ ತೀವ್ರ ಜಲಕ್ಷಾಮ ಎದುರಾಗಿದೆ. ಈ ನಡುವೆಯೂ ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸಿದೆ. ಕೆಆರ್‌ಎಸ್‌ ಜಲಾಶಯದಿಂದ 4,000 ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರನ್ನು ಬಿಡುಗಡೆ ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಬೆಂಗಳೂರಿಗೆ ಜಲಕ್ಷಾಮ ಎದಾರಾಗಿದ್ರೂ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯದಿಂದ ಶನಿವಾರ (ಮಾ.9) ಮಧ್ಯಾಹ್ನದಿಂದ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ಇದನ್ನೂ ಓದಿ: ಬಿಜೆಪಿ ಜೊತೆ ಕೈಜೋಡಿಸಿದ ಟಿಡಿಪಿ, ಜೆಎಸ್‌ಪಿ – ಆಂಧ್ರದ ಲೋಕಸಭಾ, ವಿಧಾನಸಭಾ ಚುನಾವಣೆಗೆ ಮೈತ್ರಿ ಸ್ಪರ್ಧೆ

ಸದ್ಯ ಬೆಳೆಗಳಿಗೆ ನೀರಿಲ್ಲದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಬೆಂಗಳೂರಿಗೂ ಬೇಸಿಗೆಯ ಬಿಸಿ ತಟ್ಟಿದ್ದು, ಕುಡಿಯಲು ಟ್ಯಾಂಕರ್ ನೀರನ್ನು ಅವಲಂಬಿಸುತ್ತಿದ್ದಾರೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಕೇವಲ 88 ಅಡಿಗಳಷ್ಟು ಮಾತ್ರ ನೀರು ಮಾತ್ರ ಲಭ್ಯವಿದೆ. ಹೀಗಿದ್ದರೂ ಸರ್ಕಾರ ತಮಿಳುನಾಡಿಗೆ ಭಾರೀ ಪ್ರಮಾಣದ ನೀರು ಹರಿಸುತ್ತಿರುವುದು ಸಾರ್ವಜನಿಕರು ಹಾಗೂ ಪ್ರತಿಪಕ್ಷ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

124.80 ಅಡಿಗಳಷ್ಟು ಗರಿಷ್ಠ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್ ಜಲಾಶಯದಲ್ಲಿ 89.46 ಅಡಿಗಳಷ್ಟು ಮಾತ್ರವೇ ನೀರನ್ನು ಒಳಗೊಂಡಿದೆ. ತಮಿಳುನಾಡಿಗೆ ನೀರು ಹರಿಸಿದ್ರೆ, 70 ಅಡಿಗಳಿಗೆ ನೀರಿನ ಮಟ್ಟ ಕುಸಿಯುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಕೆಆರ್‌ಎಸ್ ಡ್ಯಾಮ್ ನೀರಿನ ಮಟ್ಟ
ಗರಿಷ್ಠ ಮಟ್ಟ : 124.80 ಅಡಿ
ಇಂದಿನ ಮಟ್ಟ: 89.46 ಅಡಿ
ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
ಇಂದಿನ ಸಂಗ್ರಹ : 15.619 ಟಿಎಂಸಿ

Share This Article