ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ – ವರ್ಷದಲ್ಲಿ 3ನೇ ಬಾರಿಗೆ ಭರ್ತಿಯಾದ ಕೆಆರ್‌ಎಸ್‌ 

Public TV
1 Min Read

ಮಂಡ್ಯ: ಕಾವೇರಿ (Kaveri River) ಜಲಾನಯನ ಪ್ರದೇಶದಲ್ಲಿ ಉತ್ತಮ (Rain) ಹಿಂಗಾರುಮಳೆಯಾಗುತ್ತಿದೆ. ಇದರಿಂದ ಕೆಆರ್‌ಎಸ್‌ ಡ್ಯಾಮ್‍ಗೆ (KRS Dam) ಒಳಹರಿವು ಮತ್ತೆ ಹೆಚ್ಚಾಗಿದೆ.

ಡ್ಯಾಮ್‍ಗೆ 8,547 ಕ್ಯುಸೆಕ್ ಒಳಹರಿವು ಬರುತ್ತಿದೆ. ಒಳಹರಿವಿನ ಪ್ರಮಾಣ ಹೆಚ್ಚಾದ ಬೆನ್ನಲ್ಲೇ ಕೆಆರ್‌ಎಸ್ ಡ್ಯಾಮ್ ಸಂಪೂರ್ಣ ಭರ್ತಿಯಾಗಿದೆ. ಈ ಮೂಲಕ ವರ್ಷದಲ್ಲಿ 3ನೇ ಬಾರಿಗೆ ಡ್ಯಾಮ್ ಸಂಪೂರ್ಣ ಭರ್ತಿಯಾದಂತಾಗಿದೆ. ನೀರಿನ ಮಟ್ಟ 124.80 ಅಡಿ ತಲುಪಿದೆ.

ಕಳೆದ ಜು.27ರಂದು ಡ್ಯಾಮ್ ಸಂಪೂರ್ಣ ಭರ್ತಿಯಾಗಿತ್ತು. ಇದೀಗ ಮತ್ತೆ ಸಂಪೂರ್ಣ ಭರ್ತಿಯಾಗಿ ಕಣ್ಮನ ಸೆಳೆಯುತ್ತಿದೆ. ಸಂಪೂರ್ಣ ಭರ್ತಿಯಾಗಿರುವುದರಿಂದ 8,287 ಕ್ಯುಸೆಕ್ ನೀರನ್ನು ಡ್ಯಾಮ್‍ನಿಂದ ಬಿಡುಗಡೆ ಮಾಡಲಾಗಿದೆ.

ನೀರಿನ ಮಟ್ಟ ಮತ್ತೆ ಏರಿಕೆಯಾಗಿದ್ದರಿಂದ, ಬೇಸಿಗೆ ಬೆಳೆಗೂ ನೀರಿನ ಸಮಸ್ಯೆ ಆಗುವುದಿಲ್ಲ ಎಂದು ಮಂಡ್ಯ ರೈತರು ಸಂಭ್ರಮಿಸಿದ್ದಾರೆ. ಅಲ್ಲದೇ ಈ ಬಾರಿ ಬೇಸಿಗೆಯಲ್ಲಿ ಬೆಂಗಳೂರು ಜನರಿಗೂ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ.

Share This Article