ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾಗಿ ಬಿದ್ದಿರುವ ಘಟನೆ ನಗರದ ಹನುಮಂತನಗರದ ಜಿಂಕೆ ಪಾರ್ಕ ಬಳಿ ನಡೆದಿದೆ.
ಭಾನುವಾರ ರಾತ್ರಿ 12ಗಂಟೆ ಸುಮಾರಿಗೆ ಹೂಕೋಸು ತುಂಬಿದ ಲಾರಿಯೊಂದು ಹನುಮಂತನಗರದಿಂದ ಕೆಆರ್ ಮಾರ್ಕೆಟ್ ಕಡೆ ಸಾಗುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದಲ್ಲಿ ಲಾರಿ ಪಲ್ಟಿ ಹೊಡೆದಿದೆ.
ಲಾರಿ ಬಿದ್ದ ಪರಿಣಾಮ ಲೋಡ್ ಆಗಿದ್ದ ಹೂ ಕೋಸು ರಸ್ತೆಯಲ್ಲಿ ಬಿದ್ದಿದೆ. ಹೀಗಾಗಿ ರಸ್ತೆಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಈ ಕುರಿತು ಬಸವನಗುಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.