ಸಿಂಹಕ್ಕೇ ಚಮಕ್ ಕೊಟ್ಟ ಪುಟಾಣಿ ಬೆಕ್ಕು- ವಿಡಿಯೋ ನೋಡಿ

Public TV
1 Min Read

ವಾಷಿಂಗ್ಟನ್: ಸಾಕುಬೆಕ್ಕೊಂದು ಕಾಡಿನ ರಾಜ ಎನಿಸಿಕೊಂಡ ಸಿಂಹಕ್ಕೇ ಚಮಕ್ ಕೊಡೋ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

ಡೆರೆಕ್ ಕ್ರಾನ್ ಅನ್ನೋರು ಈ ವಿಡಿಯೋವನ್ನ ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಮಾಡಿದ್ದಾರೆ. ಅಮೆರಿಕದ ಟೆಕ್ಸಾಸ್‍ನಲ್ಲಿರುವ ದಿ ಸೆಂಟರ್ ಆಫ್ ಅನಿಮಲ್ ರಿಸರ್ಚ್ ಅಂಡ್ ಎಜುಕೇಷನ್‍ನಲ್ಲಿ ಈ ವಿಡಿಯೋವನ್ನ ಸೆರೆಹಿಡಿಯಲಾಗಿದೆ.

ಬ್ಯಾಗಿ ಎಂಬ ಹೆಸರಿನ ಈ ಬೆಕ್ಕು ನೋಯ್ ಎಂಬ ಸಿಂಹಕ್ಕೆ ಸವಾಲೆಸೆದಿದೆ. ಯಾವುದೇ ಅಳುಕು ಆತಂಕವಿಲ್ಲದೆ ಸಿಂಹದ ಮೇಲೆಯೇ ಎರಗಿ ಬೀಳುವಂತೆ ಸಖತ್ ಚಮಕ್ ನೀಡಿದೆ. ಬೆಕ್ಕಿನ ರೋಷ ನೋಡಿ ಸಿಂಹ ಕೂಡ ಕೊಂಚ ಹಿಂದೆ ಸರಿದಿದ್ದು ಸುಳ್ಳಲ್ಲ. ಆದ್ರೆ ಇವೆರಡರ ಮಧ್ಯೆ ತಂತಿ ಬೇಲಿ ಇದ್ದಿದ್ದರಿಂದ ಬೆಕ್ಕು ನಾನೇ ಬಾಸ್ ಎಂಬಂತೆ ಸಿಂಹವನ್ನ ಬೆದರಿಸೋ ಪ್ರಯತ್ನ ಮಾಡಿದೆ. ಈ ವೇಳೆ ಬೆಕ್ಕಿನ ಮಾಲೀಕ, ಬ್ಯಾಗಿ ನೀನು ಸೋತು ಹೋಗ್ತೀಯಾ…. ಸಾಕು ನಿಲ್ಲಿಸು…ಅಂತ ಹೇಳಿದ್ರೂ ಅದು ಕೇರ್ ಮಾಡಿಲ್ಲ. ಒಂದು ವೇಳೆ ಬೇಲಿ ಇಲ್ಲದಿದ್ರೆ ಏನಾಗ್ತಿತ್ತೋ ಗೊತ್ತಿಲ್ಲ.

ಈ ವಿಡಿಯೋ ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಆದ ಒಂದೇ ದಿನದಲ್ಲಿ 77 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *