ಬೆಂಗಳೂರಿನಲ್ಲಿ ಇಂದಿನಿಂದ ಜಾತಿಗಣತಿ ಸಮೀಕ್ಷೆ – 32 ಲಕ್ಷ ಮನೆ, ಎರಡು ವಾರಗಳ ಟಾರ್ಗೆಟ್

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಇಂದಿನಿಂದ ಜಾತಿಗಣತಿ ಸಮೀಕ್ಷೆ (Caste Census) ಆರಂಭ ಆಗಲಿದೆ. ಸುಮಾರು 32 ಲಕ್ಷ ಮನೆಗಳ ಸಮೀಕ್ಷೆ ಆಗಲಿದೆ.

ಬೆಂಗಳೂರಿನಲ್ಲಿ ಇಂದಿನಿಂದ ಜಾತಿಗಣತಿ ಸಮೀಕ್ಷೆ ಆರಂಭ ಆಗುತ್ತಿದೆ. ಸುಮಾರು 32 ಲಕ್ಷ ಮನೆಗಳ ಸಮೀಕ್ಷೆ ಮಾಡುವ ಟಾರ್ಗೆಟ್ ಇಟ್ಟಿದ್ದು, ಎರಡು ವಾರಗಳ ಒಳಗೆ ಸಮೀಕ್ಷೆ ಮುಕ್ತಾಯ ಮಾಡುವ ಟಾರ್ಗೆಟ್‌ ಅನ್ನು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ನೀಡಿದ್ದಾರೆ. ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಲ್ಲಿ ಇಂದಿನಿಂದ ಸಮೀಕ್ಷೆ ಆರಂಭ ಆಗುತ್ತಿದೆ. ಸಮೀಕ್ಷೆ ಹೇಗೆ ನಡೆಯುತ್ತೆ ಅಂತಾ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ವಿವರಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ಧ್ವಜ ಸುಟ್ಟರೆ ತಕ್ಷಣ ಬಂಧನ, 1 ವರ್ಷ ಜೈಲು ಶಿಕ್ಷೆ: ಡೊನಾಲ್ಡ್‌ ಟ್ರಂಪ್‌ ಆದೇಶ

ಸಿಬ್ಬಂದಿ ಕೊರತೆಯಿಂದಾಗಿ ಜಿಬಿಎ ವ್ಯಾಪ್ತಿಯಲ್ಲಿ ಸಮೀಕ್ಷೆ ಆರಂಭ ಆಗಿರಲಿಲ್ಲ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕ್ಟೋಬರ್ 7ಕ್ಕೆ ಸಮೀಕ್ಷೆ ಮುಕ್ತಾಯ ಆಗಲಿದೆ. ಆದರೆ ಬೆಂಗಳೂರಿನಲ್ಲಿ ವಿಸ್ತರಣೆ ಆಗಲಿದೆ. ಒಟ್ಟು 32 ಲಕ್ಷ ಮನೆಗಳ ಸಮೀಕ್ಷೆ ಆಗಬೇಕಿದ್ದು, ಸಮೀಕ್ಷೆಗೆ 17 ಸಾವಿರ ಸಿಬ್ಬಂದಿಯನ್ನ ಬಳಕೆ ಮಾಡಿಕೊಳ್ಳುತ್ತಿದ್ದಾರೆ. 100ರಿಂದ 150 ಮನೆ ಒಬ್ಬೊಬ್ಬರಿಗೆ ನೀಡಲಿದ್ದಾರೆ. ಸಮೀಕ್ಷೆ ಸಿಬ್ಬಂದಿ ಕಡಿಮೆ ಇರುವ ಸಮೀಕ್ಷೆ ಮುಕ್ತಾಯಕ್ಕೆ ಮೂರರಿಂದ ನಾಲ್ಕು ತಿಂಗಳಾದರೂ ತೆಗೆದುಕೊಳ್ಳಲಿದೆ ಎಂದು ಅಂದಾಜಿಸಲಿದೆ. ಇದನ್ನೂ ಓದಿ: ಪ್ರಿಯಕರ ಸ್ನೇಹಿತೆಯೊಟ್ಟಿಗೆ ಓಯೋ ರೂಂನಲ್ಲಿ ಇದ್ದಿದ್ದನ್ನ ಕಂಡು ಮನನೊಂದು ಮಹಿಳೆ ಆತ್ಮಹತ್ಯೆ

ಒಟ್ಟಾರೆ ಒಂದು ಕಡೆ ರಾಜ್ಯದಲ್ಲಿ 64% ಸಮೀಕ್ಷೆ ಮುಕ್ತಾಯ ಆಗಿದೆ. ಮತ್ತೊಂದು ಕಡೆ ಬೆಂಗಳೂರಿನಲ್ಲಿ ಸಮೀಕ್ಷೆ ಇಂದಿನಿಂದ ಆರಂಭ ಆಗುತ್ತಿದೆ. ಹಾಗಾಗಿ ಒಟ್ಟು ರಾಜ್ಯದ ಸಮೀಕ್ಷೆ ಯಾವಾಗ ಮುಕ್ತಾಯ ಆಗಲಿದೆ ಎಂದು ಕಾದು ನೋಡಬೇಕಿದೆ.  ಇದನ್ನೂ ಓದಿ: Belagavi | ಉರುಸ್ ಮೆರವಣಿಗೆಯಲ್ಲಿ ‘ಐ ಲವ್ ಮುಹಮ್ಮದ್’ ಘೋಷಣೆ – ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ

Share This Article