ಬೆಂಗಳೂರು: ಜಾತಿಗಣತಿ ಸಮೀಕ್ಷೆ (Caste Census) ಆರಂಭವಾಗಿ ಇಂದಿಗೆ (ಸೆ.26) 4 ದಿನಗಳು ಕಳೆದಿವೆ. ಸಮೀಕ್ಷೆಯ ಅಂಕಿಅಂಶ `ಪಬ್ಲಿಕ್ ಟಿವಿ’ಗೆ ಲಭ್ಯವಾಗಿದ್ದು, ಇದುವರೆಗೂ 2,62,626 ಮನೆಗಳ ಸಮೀಕ್ಷೆ ಮುಕ್ತಾಯಗೊಂಡಿದೆ.
ಒಂದು ದಿನದ ಸಮೀಕ್ಷೆಗೆ ಟಾರ್ಗೆಟ್ 11.87 ಲಕ್ಷ ಮನೆಗಳ ಟಾರ್ಗೆಟ್ ನೀಡಲಾಗಿತ್ತು. ಅದರಂತೆ ಸಮೀಕ್ಷೆಯ ಟಾರ್ಗೆಟ್ ರೀಚ್ ಆಗಿಲ್ಲ. ಇನ್ನೂ ಸೆ.25 ರಂದು ರಾಜ್ಯಾದ್ಯಂತ 79,804 ಮನೆಗಳ ಸಮೀಕ್ಷೆ ನಡೆದಿದೆ. ಇದನ್ನೂ ಓದಿ: ಇಂದಿನಿಂದ ಜಾತಿ ಗಣತಿ ಆರಂಭ – ಬೆಂಗಳೂರಲ್ಲಿ 3 ದಿನ ವಿಳಂಬ
19 ಜಿಲ್ಲೆಗಳ 526 ಬ್ಲಾಕ್‍ಗಳಲ್ಲಿ ಸಮೀಕ್ಷೆಗೆ ಇನ್ನೂ ಸಿಬ್ಬಂದಿ ನಿಯೋಜನೆ ಮಾಡಲಾಗಿಲ್ಲ. ಒಟ್ಟು 1,43,81,702 ಕುಟುಂಬಗಳ ಸಮೀಕ್ಷೆಯ ಗುರಿಯನ್ನು ಸರ್ಕಾರ ಹೊಂದಿದೆ.
ಅಕ್ಟೋಬರ್ 7ರವರೆಗೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸಲಿದ್ದಾರೆ. ಜಾತಿ ಗಣತಿಗೆ ಹಿಂದುಳಿದ ವರ್ಗಗಳ ಆಯೋಗ (Commission for Backward Classes) 1.75 ಲಕ್ಷ ಶಿಕ್ಷಕರನ್ನು ಬಳಸಿಕೊಳ್ಳಲಿದ್ದು, ಗಣತಿಗೆ ನಿಯೋಜಿತರಾಗಿರುವ ಶಿಕ್ಷಕರಿಗೆ ಗಣತಿ ಕಾರ್ಯವನ್ನು ಯಾವ ರೀತಿ ನಡೆಸಬೇಕು, ಯಾವೆಲ್ಲಾ ಮಾಹಿತಿಗಳನ್ನು ಸಂಗ್ರಹಿಸಬೇಕು ಎಂಬ ಬಗ್ಗೆ ಈಗಾಗಲೇ ತರಬೇತಿಯನ್ನು ನೀಡಿದೆ. ಇದನ್ನೂ ಓದಿ: Caste Census | ವಿವಾದದ 33 ಜಾತಿಗಳನ್ನ ಕೈ ಬಿಟ್ಟ ಆಯೋಗ; ಮತಾಂತರ ಆಗಿದ್ದರೆ ಆ ಧರ್ಮವೇ ಫಿಕ್ಸ್

 
			 
		 
		 
		 
                                
                              
		