ಬೆಂಗಳೂರು: ವಿವಾದದ ನಡುವೆಯೇ ನಾಳೆಯಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಪ್ರಾರಂಭ ಆಗಲಿದೆ. ಕ್ರಿಶ್ಚಿಯನ್‌ಗೆ ಮತಾಂತರ ಆದ ಜಾತಿಗಳ (Caste) ಬಗೆಗಿನ ವಿವಾದ ಬೆನ್ನಲ್ಲೇ ಎಚ್ಚೆತ್ತಿರೋ ಹಿಂದುಳಿದ ವರ್ಗಗಳ ಆಯೋಗ ವಿವಾದದ 33 ಜಾತಿಗಳನ್ನ ಕೈಬಿಟ್ಟು ಸಮೀಕ್ಷೆ ನಡೆಸಲು ನಿರ್ಧಾರ ಮಾಡಿದೆ.
ಭಾರೀ ವಿವಾದಕ್ಕೆ ಕಾರಣವಾಗಿರೋ ಸರ್ಕಾರದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಾಳೆಯಿಂದ ಪ್ರಾರಂಭವಾಗಲಿದೆ. ಮತಾಂತರವಾದ ಜಾತಿಗಳ ಗೊಂದಲದ ನಡುವೆಯೇ ಸಮೀಕ್ಷೆಗೆ (Caste Census) ಹಿಂದುಳಿದ ವರ್ಗಗಳ ಆಯೋಗ ಸಿದ್ದತೆ ಮಾಡಿಕೊಂಡಿದೆ. ಇದೇ ವೇಳೆ ಗೊಂದಲಕ್ಕೆ ಕಾರಣವಾದ 33 ಜಾತಿಗಳನ್ನ ಸರ್ಕಾರದ (Karnataka Government) ಸಲಹೆ ಮೇರೆಗೆ ಆಯೋಗ ಕೈ ಬಿಟ್ಟಿದೆ. ಪಟ್ಟಿಯಲ್ಲಿ ಅ ಜಾತಿ ಹೆಸರು ಇರೋದಿಲ್ಲ. ಆದರೆ ಜನರ ಇಚ್ಚೆ ಇದ್ದರೆ ಪಟ್ಟಿಯಿಂದ ಕೈಬಿಟ್ಟಿರೋ ಧರ್ಮ ಮತ್ತು ಜಾತಿ ಹೆಸರು ಬರೆಸಬಹುದು ಅಂತ ಆಯೋಗ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ನಾಳೆಯಿಂದ ಜಾತಿ ಜನಗಣತಿ, ಒಬ್ಬ ಸಮೀಕ್ಷಕರಿಗೆ ಕನಿಷ್ಠ 150 ಮನೆ ಹಂಚಿಕೆ: ಮಧುಸೂದನ್ ನಾಯ್ಕ್
ಮತಾಂತರ ಆದವರಿಗೆ ಆ ಧರ್ಮವೇ ಫಿಕ್ಸ್
ಮತಾಂತರವಾದ ಜಾತಿಗಳ ಇನ್ನಷ್ಟು ಗೊಂದಲಗಳಿಗೆ ಆಯೋಗ ಸ್ಪಷ್ಟನೆ ನೀಡಿದೆ. ಮತಾಂತರವಾದ ಜಾತಿಗಳಿಗೆ ಮೂಲ ಜಾತಿ ಬಿಟ್ಟು ಮತಾಂತರವಾದ ಧರ್ಮವೇ ಅನ್ವಯವಾಗಲಿದೆ. ಮೂಲ ಜಾತಿ ಅವರಿಗೆ ಅನ್ವಯ ಆಗೋದಿಲ್ಲ ಅಂತ ಸ್ಪಷ್ಟಪಡಿಸಿದೆ. ಅಲ್ಲದೇ ಸಮೀಕ್ಷೆ ಆದ ನಂತರ ಯಾವ ಯಾವ ಜಾತಿ ಯಾವ ಯಾವ ಕ್ಯಾಟಗರಿ ಬರುತ್ತದೆ ಅಂತ ತಜ್ಞರ ಟೀಂ ನಿರ್ಧಾರ ಮಾಡಿಲಿದೆ ಅಂತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್. ನಾಯಕ್ (Madhusudan R Naik) ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಶಾಲಾ ಅವಧಿ ಬದಲು ರಜೆ ವೇಳೆ ಸರ್ವೆಗೆ ಶಿಕ್ಷಕರ ಬಳಕೆ: ಮಧು ಬಂಗಾರಪ್ಪ
ನಾಳೆ ಬೆಂಗಳೂರಲ್ಲಿ ನಡೆಯಲ್ಲ ಸಮೀಕ್ಷೆ
ನಾಳೆಯಿಂದಲೇ ರಾಜ್ಯಾದ್ಯಂತ ಸಮೀಕ್ಷೆ ಶುರುವಾದರು ಬೆಂಗಳೂರಿನಲ್ಲಿ 2-3 ದಿನ ತಡವಾಗಿ ಸಮೀಕ್ಷೆ ಪ್ರಾರಂಭವಾಗಲಿದೆ. ಜಿಬಿಎ ಆಡಳಿತ ಬಂದ ಹಿನ್ನಲೆ ಮತ್ತು ತರಬೇತಿ ತಡವಾಗಿ ಆಗಿರೋದ್ರೀಂದ 2-3 ದಿನ ತಡವಾಗಿ ಬೆಂಗಳೂರಿನಲ್ಲಿ ಸಮೀಕ್ಷೆ ಪ್ರಾರಂಭ ಆಗಲಿದೆ. ಸಮೀಕ್ಷೆಯಲ್ಲಿ 60 ಪ್ರಶ್ನೆಗಳನ್ನ ಕೇಳಲಾಗಿದೆ. ಆಧಾರ್ ಕಾರ್ಡ್, ಅಥವಾ ರೇಷನ್ ಕಾರ್ಡ್ ಕಡ್ಡಾಯವಾಗಿ ಕೊಡಬೇಕಾಗಿದೆ. ಆನ್ ಲೈನ್ ನಲ್ಲೂ ಮಾಹಿತಿ ನೀಡಲು ಆಯೋಗ ಅವಕಾಶ ಮಾಡಿದೆ.
ವಿರೋಧದ ನಡುವೆ ಸಮೀಕ್ಷೆ ಪ್ರಾರಂಭವಾಗಿದ್ದು ವಿರೋಧ ಮಾಡ್ತಿರೋ ಪ್ರಬಲ ಸಮುದಾಯಗಳು ಯಾವ ನಿರ್ಧಾರ ಮಾಡ್ತಾರೆ ಕಾದು ನೋಡಬೇಕು. ಇದನ್ನೂ ಓದಿ: ಫಾದರ್ ಸಿದ್ದರಾಮಯ್ಯ ಕುಲ ಶಾಸ್ತ್ರೀಯ ಅಧ್ಯಯನ ಮಾಡಬೇಕು: ಸುನಿಲ್ ಕುಮಾರ್ ಟಾಂಗ್