– ಜಿಬಿಎ ವ್ಯಾಪ್ತಿಯಲ್ಲಿಂದು 22,141 ಮನೆಗಳ ಸಮೀಕ್ಷೆ
– ತಾಂತ್ರಿಕ ಸಮಸ್ಯೆ ಮಧ್ಯೆ ಜನರ ಆಕ್ರೋಶ
ಬೆಂಗಳೂರು: ರಾಜ್ಯದಲ್ಲಿ 1.2 ಕೋಟಿ (1,02,38,657 ಮನೆಗಳು) ಮನೆಗಳ ಸಮೀಕ್ಷೆ (Caste Census) ದಾಟಿದೆ. ಇವತ್ತು ಒಂದೇ ದಿನ 9,13,892 ಮನೆಗಳ ಸರ್ವೆ ಆಗಿದೆ. ಬೆಂಗಳೂರಿನಲ್ಲಿ (Bengaluru) 22,141 ಮನೆಗಳ ಜಾತಿಗಣತಿ ಆಗಿದೆ.
ಬೆಂಗಳೂರಿನಲ್ಲಿ ಇಂದಿನಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭವಾಗಿದ್ದು, ಮೊದಲ ದಿನವೇ ಗೊಂದಲದ ಗೂಡಾಗಿತ್ತು. ಮೊದಲ ದಿನವೇ ಗಣತಿದಾರರಿಗೆ ಸಮೀಕ್ಷೆ ಆ್ಯಪ್ ಗೊಂದಲ, ಸರ್ವರ್ ಸಮಸ್ಯೆ, ಲೊಕೇಷನ್ ಕಿರಿಕಿರಿ ಎದುರಾಗಿತ್ತು. ಹಲವಡೆ ಐಡಿ ಕಾರ್ಡ್ ಕಿಟ್ ವಿತರಣೆಯೂ ವಿಳಂಬವಾಗಿತ್ತು. ಬೆಂಗಳೂರಿನ ವೈಯಾಲಿಕಾವಲ್‌ನಲ್ಲಂತೂ ಗಣತಿದಾರರು ಪ್ರತಿಭಟನೆಗೆ ಇಳಿದಿದ್ರು. ಇದನ್ನೂ ಓದಿ: ಪ್ರಶ್ನೆ ಸಿಂಪಲ್ ಇರಬೇಕು ಇದು ಟೂ ಮಚ್ – ಜಾತಿಗಣತಿ ವೇಳೆ ಡಿ.ಕೆ ಶಿವಕುಮಾರ್ ಅಸಮಾಧಾನ
ಬೆಂಗಳೂರಿನ ಹಲವಡೆ ಸಮೀಕ್ಷೆದಾರರು ಮನೆಗೆ ತೆರಳಿದಾಗ ವೈಯಕ್ತಿಕ ಮಾಹಿತಿ ಯಾಕೆ ಕೊಡಬೇಕು..? ಮಾಹಿತಿ ಕೊಟ್ರೇ ಅದು ಸುರಕ್ಷಿತನಾ..? ಅಂತ ಅಸಮಾಧಾನ ವ್ಯಕ್ತಪಡಿಸಿ ಗಣತಿದಾರರ ವಿರುದ್ಧ ತಿರುಗಿಬಿದ್ರು. ಪ್ರಮುಖವಾಗಿ ಆಧಾರ್ ಕಾರ್ಡ್, ಬ್ಯಾಂಕ್ ವಿವರ, ಚರಾಸ್ತಿ-ಸ್ಥಿರಾಸ್ತಿ ವಿವರ ಕುಟುಂಬದ ಸಾಲ, ಆದಾಯ ತೆರಿಗೆ ಪಾವತಿದಾರರು, ಕುರಿ-ಎಮ್ಮೆ-ಕೋಣ ಸಾಕಿದ್ದೀರಾ..? ಹೀಗೆ ಅನೇಕ ಪ್ರಶ್ನೆಗಳಿಗೆ ಇದೇನು ಆಸ್ತಿ ಸಮೀಕ್ಷೆನಾ ಅಂತ ಜನ ಹೈರಾಣಾಗಿ ಆಕ್ರೋಶ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಎಲ್ಲ ಭಾಗ್ಯಗಳನ್ನು ಹಿಂಪಡೆದು ಮೂರು ನಾಮ ಹಾಕಲು ಸಿದ್ಧತೆ – ಗೊಂದಲ, ಘರ್ಷಣೆ ತಪ್ಪಿಸಿ: ಅಶ್ವತ್ಥ ನಾರಾಯಣ್
ಬೆಂಗಳೂರು ಜನರ ವಿರೋಧ ಯಾಕೆ?
* ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಕೇಳ್ತಿರೋದಕ್ಕೆ ವಿರೋಧ
* ರಾಷ್ಟ್ರೀಕೃತನಾ ಅನ್ನೋ ವಿವರ ಕೇಳ್ತಾ ಇದ್ದಾರೆ.
* ಆಸ್ತಿ ವಿವರ ಕಲೆಹಾಕುತ್ತಿದ್ದಾರೆ..
* ಸ್ವಂತ ಮನೆನಾ..? ಬಾಡಿಗೆ ಮನೆನಾ..? ಅಂತ ಕೇಳ್ತಿದ್ದಾರೆ
* ಅಂಗಡಿ ಇದ್ಯಾ..? ಜಮೀನು ಇದ್ಯಾ..? ಅಂತ ಪ್ರಶ್ನೆ
* ಗಾಡಿ ಇದ್ಯಾ.. ಕಾರ್ ಇದ್ಯಾ..? ಆರ್‌ಸಿ ನಂಬರ್ ಕೊಡಬೇಕು
* ಸ್ಕೂಲ್ ಯಾಕೆ ಬಿಟ್ರಿ.. ಅನ್ನೋ ಪ್ರಶ್ನೆಗೆ ತೀವ್ರ ವಿರೋಧ
ಬೆಂಗ್ಳೂರಲ್ಲಿಂದು 22,141 ಮನೆಗಳ ಸಮೀಕ್ಷೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಒಟ್ಟು 32 ಲಕ್ಷ ಮನೆಗಳ ಸಮೀಕ್ಷೆ ಮಾಡಬೇಕಿದ್ದು, ಮೊದಲ ದಿನ 22,141 ಮನೆಗಳ ಸಮೀಕ್ಷೆ ಮುಕ್ತಾಯವಾಗಿದೆ. ಇನ್ನೂ 2 ವಾರಗಳಲ್ಲಿ ಉಳಿದ ಎಲ್ಲಾ ಮನೆಗಳ ಸಮೀಕ್ಷೆ ಮುಕ್ತಾಯಗೊಳಿಸಬೇಕಿದೆ.
5 ಪಾಲಿಕೆಗಳ ವ್ಯಾಪ್ತಿಯಲ್ಲಿನ ಸಮೀಕ್ಷಾ ವರದಿ
1. ಕೇಂದ್ರ ನಗರ ಪಾಲಿಕೆ: 2,822
2. ಪೂರ್ವ ನಗರ ಪಾಲಿಕೆ: 3,105
3. ಉತ್ತರ ನಗರ ಪಾಲಿಕೆ: 5,987
4. ದಕ್ಷಿಣ ನಗರ ಪಾಲಿಕೆ: 3,145
5. ಪಶ್ಚಿಮ ನಗರ ಪಾಲಿಕೆ: 7,082
ಒಟ್ಟು ಮನೆಗಳು: 22,141